spot_img
spot_img

ಮೇಲಿಂದ ಚಾ ಹಾಕುತ್ತಾರೆ, ಬೇರೆ ಗ್ಲಾಸ್ ನಲ್ಲಿ ಕುಡಿಯಲು ನೀರು ಕೊಡುತ್ತಾರೆ…

Must Read

spot_img

ಇಲ್ಲಿ ಇನ್ನೂ ಜೀವಂತ ಇದೆ ಅಸ್ಪೃಶ್ಯತೆ

ಬೀದರ – ಬಸವಣ್ಣನವರು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಅವರ ಕರ್ಮಭೂಮಿ ಶಾಂತಿಯ ನಾಡು ಮತ್ತೆ ಈ ಬಾರಿ ಸದ್ದು ಮಾಡುತ್ತಾ ಇರುವುದು ಅಸ್ಪೃಶ್ಯತೆಯ ಕಾರಣದಿಂದ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ  ಈ ಸ್ಟೋರಿ ನೋಡಲೇ ಬೇಕು…

ಬಸವಣ್ಣನವರ ನಡೆದ ಆಡಿದ ಬೀದರ್ ಜಿಲ್ಲೆ ಹುಲಸೂರ ತಾಲ್ಲೂಕಿನ    ಗಡಿಗೌಡಗಾಂವ ಗ್ರಾಮದಲ್ಲಿ  ಅಸ್ಪ್ರಶತೆ ಜಾರಿಯಲ್ಲಿ ಇರುವುದರ ವಿರುದ್ಧ ರೊಚ್ಚಿಗೆದ್ದ ಪರಿಶಿಷ್ಟ ಜಾತಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ  ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ತಹಸಿಲ್ದಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಹೊಟೆಲ್ ನಲ್ಲಿ ಚಾ ಕುಡಿಯಲು  ಗ್ಲಾಸ್ ಕೊಡೋದಿಲ್ಲ. ಮೇಲಿನಿಂದ ಸುರಿಯುತ್ತಾರೆ ನಮಗೆ ಅವಮಾನ ಮಾಡುತ್ತಾರೆ ಎಂದು ಅಳಲು ತೋಡಿಕೊಂಡರು.

ತದ ನಂತರ ತಹಸಿಲ್ದಾರ ಗ್ರಾಮದಲ್ಲಿರುವ ಹೊಟೇಲ್ ಗಳಿಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಶಿಲ್ದಾರ ಬರುವುದನ್ನು ಕಂಡು ಗ್ರಾಮದ ಕೆಲವು ಹೋಟೆಲುಗಳನ್ನು ಬಂದ್ ಮಾಡಿದರು, ಇನ್ನು ಮುಂದೆ ಸಾಗಿದ ತಹಶೀಲ್ದಾರರು ಒಂದು ಹೋಟೆಲಿಗೆ ಭೇಟಿ ನೀಡಿ ಆ ಹೋಟೆಲ ಮಾಲೀಕನಿಗೆ ಪರಿಶಿಷ್ಟ ಜಾತಿಯ ಜನರಿಗೆ ಬೇರೆ ಚಹಾದ ಕಪ್ಪು ಹಾಗು ಮೇಲಿಂದ ನೀರು ಹಾಕುತ್ತೀರಿ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ ಇದು ನಿಜವೇ  ಎಂದು ಪ್ರಶ್ನೆ ಮಾಡಿದರು.

ಹಾಗೆಯೇ ಸ್ಥಳದಲ್ಲೆ ಪರಿಶಿಷ್ಟ ಜಾತಿಯ ಜನರಿಗೆ ಚಹಾ ಕುಡಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯಿತು. ತಹಶಿಲ್ದಾರರು  ಅಧಿಕಾರಿಗಳಿಗೆ ಈ ರೀತಿ ಇದೆ ತರಹ ನಡೆಸಿ ಕೊಂಡು ಹೋಗುತ್ತಿರುವ ಹೋಟೆಲ್ ಮಾಲಿಕರ ಮೇಲೆ ಕ್ರಮಕೈಗೊಳ್ಳಲು ಆದೇಶಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!