spot_img
spot_img

ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಮೊಟ್ಟೆ ಎಸೆದಿದ್ದಾರೆ – ಅಶೋಕ ಮನಗೂಳಿ

Must Read

ಸಿಂದಗಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಕೆಲಕಾಲ ರಾಸ್ತಾರೋಖಾ ಚಳವಳಿ ನಡೆಸಿದರು.

ನಂತರ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡುವ ಷಡ್ಯಂತ್ರ ಬಿಜೆಪಿಯಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ವಿರೋಧ ಪಕ್ಷದ ಮುಖಂಡರ ವಿರುದ್ದ ಇಂತಹ ಕಾರ್ಯಕ್ಕೆ ಇಳಿದಿರುವದು ಬಿಜೆಪಿಯ ಇನ್ನೊಂದು ಮುಖವನ್ನು ಬಯಲು ಮಾಡಿದೆ. ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯನವರು ಕೊಡಗಿನಲ್ಲಿ ಆವರಿಸಿದ ನೆರ ಹಾವಳಿಯಿಂದ ಅತಂತ್ರಗೊಂಡ ಸಂತ್ರಸ್ತರ ಸಾಂತ್ವನ ಹೇಳುವುದಕ್ಕೆ ಹೋದ ಸಂದರ್ಭದಲ್ಲಿ ಆಡಳಿತರೂಢ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‍ಎಸ್‍ಎಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಅವಮಾನಿಸಿದ್ದು  ಖಂಡನೀಯ ತಪ್ಪಿಸ್ಥರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬರಲಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಸೂಕ್ತ ಉತ್ತರ ನೀಡುತ್ತಾರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ನಂತರದಲ್ಲಿ ಬಿಜೆಪಿ ಸರ್ಕಾರ ಜನಸಾಮಾನ್ಯರ ರಕ್ಷಣೆ ಹಾಗೂ  ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಮಡಿಕೇರಿ ಜಿಲ್ಲೆಯಾದ್ಯಂತ ನೆರೆ ಹಾವಳಿ ವೀಕ್ಷಣೆಗೆ ತೆರಳಿದ್ದ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದಿರುವುದು ಹಾಗೂ ಕಪ್ಪು ಬಾವುಟ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ತನ್ನ ಬಲಹೀನತೆಯನ್ನು ತೋರಿಸಿಕೊಂಡಿದೆ ಎಂದು ಹರಿ ಹಾಯ್ದರು,

ಕಾಂಗ್ರೆಸ್ ಪಕ್ಷದ ವಕ್ತಾರ ಎಸ್,ಎಮ್,ಪಾಟೀಲ(ಗಣಿಹಾರ) ಮಾತನಾಡಿ,  ಆಡಳಿತ ಪಕ್ಷದ ನ್ಯೂನತೆಗಳನ್ನು ಮತ್ತು ವೈಫಲ್ಯಗಳನ್ನು ಮುಚ್ಚಿ ಹಾಕುವಲ್ಲಿ ಬಿಜೆಪಿಯ ಕೈಗೊಂಬೆಯಾಗಿರುವ ಆರ್‍ಎಸ್‍ಎಸ್ ಬಜರಂಗದಳ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸಿದಿರುವದು ಪ್ರಜಾಪ್ರಭುತ್ವದ ಅರಿವು ಇರದ ಕಿಡಗೇಡಿಗಳು ಇಂತಹ ನೀತಿಗೆಟ್ಟ ಕೆಲಸ ಮಾಡಿದ್ದು, ಅವರಿಗೆ ಕಠಿಣ ಕಾನೂನು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ನೂರಹ್ಮದ ಅತ್ತಾರ ಮಾತನಾಡಿ, ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಾವರ್ಕರನ ಮಗ ಅಲ್ಲ ವೀರ ಸಂಗೋಳ್ಳಿ ರಾಯಣ್ಣ ಮಗ ಅವರಿಗೆ ಕಪ್ಪು ಬಾವುಟ ತೋರಿ, ಮೊಟ್ಟೆ ಎಸೆದ ಭಜರಂಗದಳದ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಮುಖಂಡರ ಮನೆಬಿಟ್ಟು ಹೊರಬರುವುದು ದುಸ್ತರವಾಗುತ್ತದೆ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಭೀಮು ಬುಳ್ಳಾ, ಸುರೇಶ ಪೂಜಾರಿ, ರಮೇಶ ಬಂಟನೂರ, ಬಸವರಾಜ ಶಿರಸಗಿ ಸೇರಿದಂತೆ ಅನೇಕರು ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ, ಉಪಾಧ್ಯಕ್ಷ ಹಾಸಿಂಪೀರ ಆಳಂದ, ಸದಸ್ಯರಾದ ಶಾಂತವೀರ ಬಿರಾದಾರ,  ಶ್ರೀಶೈಲ್ ಬೀರಗೊಂಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಹಾಂತಗೌಡ ಪಾಟೀಲ, (ಯರಗಲ್ ಬಿ.ಕೆ), ಗುರಣ್ಣಗೌಡ ಬಿರಾದಾರ (ನಾಗಾವಿ), ಗುತ್ತಿಗೆದಾರ ಸೋಮನಗೌಡ ಬಿರಾದಾರ, ಶಬ್ಬೀರ್ ಮರ್ತೂರ, ಶರಣಯ್ಯ ಮಠ, ವಿಜುಗೌಡ ಪಾಟೀಲ ಕನ್ನೊಳ್ಳಿ, ರವಿ ದೇವರಮನಿ, ಬಸಲಿಂಗಪ್ಪ ಗೊಬ್ಬುರ, ರಾವುತಗೌಡ ಬಿರಾದಾರ, ಸುರೇಶ ಪೂಜಾರಿ, ಸಂತೋಷ ಹರನಾಳ, ಖಾದಿರ ಬಂಕಲಗಿ, ಭೀಮು ಬುಳ್ಳಾ,  ಭೀಮರಾಯ ಅಮರಗೋಳ, ಇಕ್ಬಲ್ ತಲಕಾರಿ, ಬಸೀರ ಮರ್ತೂರ, ಪರಶುರಾಮ ಕಾಂಬಳೆ, ಸದ್ದಾಮ ಆಲಗೂರ, ಸಾಯಬಣ್ಣ ಪುರದಾಳ, ಮಹ್ಮದಪಟೇಲ ಬಿರಾದಾರ, ರಾಜು ಮದರಖಾನ, ಸಲೀಮ ಕಣ್ಣಿ, ದವಲಪ್ಪ ಸೊನ್ನ ದೇವಣಗಾಂವ, ಲಕ್ಷಣ ಯಳಮೇಲಿ,  ರಮೇಶ ಮೋರಟಗಿ, ಶರಣಮ್ಮ ನಾಯಕ, ಜಯಶ್ರೀ ಹದನೂರ ಹಾಗೂ ಕಾರ್ಯಕರ್ತರು, ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!