spot_img
spot_img

ಹುಲಸೂರ ಪಟ್ಟಣದಲ್ಲಿ ಕಳ್ಳರ ಕೈಚಳಕ ; ಮನೆಯ ಬೀಗ ಮುರಿದು ಬಂಗಾರ ಹಾಗು ನಗದು ಹಣ ಲೂಟಿ

Must Read

ಬೀದರ – ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ಒಂದು ಮನೆಯ ಬೀಗ ಮುರಿದು ಬಂಗಾರ ಮತ್ತು ನಗದು ಹಣ ಲೂಟಿ ಮಾಡಿದ ಕಳ್ಳರು ಹಾಗೆಯೇ ಸಾಯಿಬಾಬಾ ಮಂದಿರದ ಹುಂಡಿ ಒಡಯುವ ವಿಫಲ ಯತ್ನ ಮಾಡಿ ಪರಾರಿಯಾಗಿದ್ದಾರೆ.

ಪಟ್ಟಣದ ಹುಲಸೂರ ದೇವನಾಳ ಮಾರ್ಗದಲ್ಲಿ ಬರುವ ಯುವರಾಜ ರಾವು ಸಾಹೇಬ ಇಂಚೂರೆ ರವರ ಮನೆಯ ಬೀಗ ಮುರಿದು ಎರಡು ತೂಲೆ ಬಂಗಾರ, ಹತ್ತು ಸಾವಿರ ನಗದು ರೂಪಾಯಿ ಲೂಟಿ ಮಾಡಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ  ಸಂಜೆಯ 7:30 ರಿಂದ ರಾತ್ರಿ 9 ಗಂಟೆಯ ನಡುವೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.

ಹುಲಸೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ ಕಳ್ಳರು  ತಡರಾತ್ರಿ ಪಟ್ಟಣದ ಸಾಯಿಬಾಬಾ ಮಂದಿರದ ಕೀಲಿ ಮುರಿದು ಹುಂಡಿ ಒಡೆಯುವ ಪ್ರಯತ್ನ ನಡೆಸಿದಾರೆ ಆದರೆ ಪ್ರಯತ್ನ ವಿಫಲವಾದ ಕಾರಣ ಅಲ್ಲೆ ಬಿಸಾಡಿ ಪಲಾಯನ ಮಾಡಿದ್ದಾರೆ.

ನಸುಕಿನ ಜಾವ ಮನೆ ಕಳುವು ಆಗಿರುವ ಘಟನೆ ಅರಿತ ಪೋಲಿಸರು ಕೂಡಲೆ ಬೀದರನಿಂದ ಶ್ವಾನ ದಳ ಹಾಗೂ ಹಸ್ತಾಕ್ಷರ ತಜ್ಞರನ್ನು ಕರೆಯಿಸಿ, ಕಳ್ಳರ ಚಲನ ವಲನಗಳು ಹಾಗು ಮನೆಯಲ್ಲಿ ಬಿದ್ದಿರುವ ವಸ್ತುಗಳ ಮೇಲಿನ ಫಿಂಗರ್ ಪ್ರಿಂಟ್ ಕಲೆಕ್ಟ ಮಾಡಿ ತನಿಖೆ ನಡೆಸುತ್ತಿರುವುದಾಗಿ ಹುಲಸೂರ ಪೋಲಿಸ್ ಠಾಣೆಯ ಪಿಎಸ್ಐ ನಿಂಗಪ್ಪಾ ಮಣ್ಣೂರು ರವರು ಮಾಹಿತಿ ನೀಡಿದ್ದಾರೆ.

ಸಾಯಿಬಾಬಾ ಮಂದಿರದಲ್ಲಿಯೂ ಹುಂಡಿ ಒಡೆಯುವ ಪ್ರಯತ್ನ ನಡೆದಿದೆ. ಅಲ್ಲಿಯ ಸಿ.ಸಿ.ಟಿವಿ ಕ್ಯಾಮರಾಗಳು ಕೆಟ್ಟು ಹೋಗಿರುವುದರಿಂದ ಕಳ್ಳರ ಚಲನ ವಲನ ಸೆರೆಯಾಗಿಲ್ಲವೆಂದು ಮಂದಿರದವರು ತಿಳಿಸಿದ್ದಾರೆ.

ಆದಷ್ಟು ಬೇಗನೆ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!