ಭಾರತದ ಈ ಸ್ಥಿತಿಗೆ ಸಾಮಾನ್ಯ ಜ್ಞಾನದ ಕೊರತೆ ಕಾರಣ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಸರ್ಕಾರ ಸಾಕಷ್ಟು ಸಂಸ್ಥೆ ಸಂಘಟನೆ, ಕಾಯಿದೆ,ಕಾನೂನುಗಳನ್ನು ಹುಟ್ಟಿಸಿದೆ. ಆದರೆ ಭ್ರಷ್ಟಾಚಾರ ಬೆಳೆದಿರೋದೆ ಶಿಕ್ಷಣದ ರಾಜಕೀಯದಲ್ಲಿ ಅದನ್ನು ಪಡೆದವರೆ ಸಂಘ, ಸಂಸ್ಥೆ, ಕಾನೂನು,ಕಾಯಿದೆ ತಂದರೆ ಸತ್ಯ ಅರ್ಥವಾಗೋದಿಲ್ಲ.

ಸರ್ಕಾರದ ಹಣ, ಅಧಿಕಾರ, ಸ್ಥಾನಮಾನ, ಪದವಿ, ಪದಕಗಳನ್ನು ಪಡೆದವರಿಗೆ ಇದು ಅಸಾಧ್ಯ.ಕಾರಣವಿಷ್ಟೆ ತಾವೇ ಅದರ ಋಣದಲ್ಲಿರುವಾಗ ವಿರೋಧಿಸುವ ಹಕ್ಕು ತಮಗಿಲ್ಲ. ಭೀಷ್ಮರಂತಹ ಮಹಾಜ್ಞಾನಿಗಳಿಗೇ ಅಧರ್ಮದ ವಿರುದ್ದ ದ್ವನಿ ಎತ್ತಲಾಗದೆ ಯುದ್ದ ನಡೆಯಿತು.

ಈಗಿನ ಅಜ್ಞಾನದಲ್ಲಿ ಧರ್ಮ ,ಸತ್ಯ, ನ್ಯಾಯ, ನೀತಿ, ಸಂಸ್ಕೃತಿ, ಶಿಕ್ಷಣವೇ ಹಣದಿಂದ ಮಾರಾಟವಾಗುತ್ತಿದ್ದರೆ ಹಣವಿದ್ದವರಲ್ಲಿಯೂ ಭ್ರಷ್ಟಾಚಾರ ಇರುತ್ತದೆ. ಇದನ್ನು ತಡೆಯಬಹುದೆ? ಅಧಿಕಾರ, ಹಣವಿಲ್ಲದವರಲ್ಲಿ ಜ್ಞಾನವಿರುತ್ತದೆ. ಇದು ಸಾಮಾನ್ಯರಲ್ಲಿರುತ್ತದೆ. ಪ್ರಜೆಗಳಾದವರು ತಮ್ಮ ಸಾಮಾನ್ಯ ಜ್ಞಾನದಿಂದ ತಮ್ಮೊಳಗಿರುವ ಭ್ರಷ್ಟಾಚಾರಕ್ಕೆ ತಡೆ ಹಾಕಿಕೊಂಡು ,ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಉತ್ತಮ ಭವಿಷ್ಯವಿದೆ.

- Advertisement -

ಶಿಕ್ಷಣದ ಬದಲಾವಣೆಗೆ ಎಲ್ಲಾ ಸಲಹೆ ಸೂಚನೆ ನೀಡುವವರೆ ಆದರೆ ಅದರ ಒಳಹೊಕ್ಕಿ ಸತ್ಯವನ್ನು ಅನುಭವದಿಂದ ತಿಳಿಯೋದಕ್ಕೆ ಸಾಮಾನ್ಯಜ್ಞಾನವಿರಬೇಕು. ಅಧಿಕಾರವಿದೆ ಎನ್ನುವ ಕಾರಣಕ್ಕಾಗಿ ಮಕ್ಕಳ ಹಾಗು ಪೋಷಕರ ಮನಸ್ಥಿತಿ, ಪರಿಸ್ಥಿತಿ ಅರ್ಥವಾಗೋದಿಲ್ಲ. ನಾನೇ ಸಾಮಾನ್ಯರಂತೆ ನಡೆಯಲಾಗದಿದ್ದರೆ ಸಾಮಾನ್ಯರ ಜ್ಞಾನ

ನನಗೆ ಇರೋದಿಲ್ಲವಲ್ಲ. ಭಾರತದ ಈ ಸ್ಥಿತಿಗೆ ಕಾರಣವೆ ಸಾಮಾನ್ಯಜ್ಞಾನದ ಕೊರತೆ. ಒಂದು ಸಂಘದ ಚೌಕಟ್ಟಿನಲ್ಲಿ ನಾನು ದೊಡ್ಡವನಿರಬಹುದು. ಆದರೆ, ದೇಶದೊಳಗಿರುವ ಇಂತಹ ಅಸಂಖ್ಯಾತ ಸಂಘಗಳಿಗೆ ನಾನೊಬ್ಬನೆ ಇರೋದಿಲ್ಲ.

ಎಲ್ಲಾ ಸಂಘಟನೆಯ ಗುರು ,ಗುರಿ, ರೀತಿ, ನೀತಿ,ಧರ್ಮ,ಸಂಸ್ಕೃತಿ, ಭಾಷೆ ಒಂದೇ ಆಗಿದ್ದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಾಧ್ಯವಿದೆ. ಇದೇ ನಮ್ಮ ದೇಶದ ದೊಡ್ಡ ಸಮಸ್ಯೆ. ಸರ್ಕಾರ ದೇಶದ ಪರವಾಗಿ ಶಿಕ್ಷಣದಲ್ಲಿ ಬದಲಾವಣೆ ತರೋವಾಗ ಆ ರಾಜ್ಯದ ಮೂಲ ಧರ್ಮ ಕರ್ಮವನ್ನು ಭಾಷೆ ಜ್ಞಾನವನ್ನು ಅವರವರೆ ಬೆಳೆಸಿಕೊಳ್ಳಲು ಪೋಷಕರಿಗೆ ಸಲಹೆ ಸೂಚನೆ ನೀಡುವುದರ ಮೂಲಕ ಸಹಕರಿಸಬೇಕಿದೆ. ಪೋಷಕರ ಸಮಸ್ಯೆಗೆ ಪರಿಹಾರ ಸಾಮಾನ್ಯ ಜ್ಞಾನದಲ್ಲಿದೆ.

ಮಕ್ಕಳು ಎಷ್ಟು ಅಂಕ ಪಡೆದರೆನ್ನುವ ಬದಲು ಯಾವ ಜ್ಞಾನ ಪಡೆದರೆನ್ನುವುದರ ಬಗ್ಗೆ ಚಿಂತನೆ ಪೋಷಕರಾದವರು ನಡೆಸಿ ಕಲಿಸಿ ಬೆಳೆಸಿದರೆ ಉತ್ತಮ ಶಿಕ್ಷಣವಾಗುತ್ತದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!