spot_img
spot_img

ಹೀಗೊಂದು ಹೃದಯಸ್ಪರ್ಶಿ ಕಾರ್ಯಕ್ರಮ

Must Read

- Advertisement -

ಸರಕಾರಿ ನೌಕರಿ ಎಂದ ಮೇಲೆ ನೌಕರಿಗೆ ಹಾಜರಾಗುವುದು ವರ್ಗಾವಣೆಗೊಳ್ಳುವುದು ನಿವೃತ್ತಿಯಾಗುವುದು ಹೀಗೆ ವೃತ್ತಿ ಬದುಕಿನಡಿ ಕೊನೆಯ ನಿವೃತ್ತಿ ಪದದವರೆಗೂ ಜರುಗುವ ಪ್ರಕ್ರಿಯೆಯಲ್ಲವೇ.? ನಿವೃತ್ತರಾದಾಗ ಬೀಳ್ಕೊಡುವುದು.ನೌಕರಿಗೆ ಹಾಜರಾಗುವವರನ್ನು ಸೌಹಾರ್ದವಾಗಿ ಸ್ವಾಗತಿಸುವುದು.ವರ್ಗಾವಣೆ ಹೊಂದಿದವರನ್ನು ಬೀಳ್ಕೊಡುವುದು ಇವೆಲ್ಲ ನಡೆಯುತ್ತವೆ. ಇಂತಹ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿಸುವಂತಿದ್ದರೆ ಹೇಗೆ ?ಅಂತಹದೊಂದು ವಿಭಿನ್ನ ಚಟುವಟಿಕೆ ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿತು.

ಇಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕರಾಗಿ,ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆಯಿಂದ ವರ್ಗವಾದವರ ಮತ್ತು ಹೊಸದಾಗಿ ಹಾಜರಾದವರನ್ನು ಇವುಗಳ ಜೊತೆಗೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಎಸ್.ಎಸ್.ಎಲ್.ಸಿಯ ಹೆಚ್ಚು ಅಂಕ ಗಳಿಸಿದ ವಿಕಲಚೇತನ ವಿದ್ಯಾರ್ಥಿಗಳನ್ನು ಮತ್ತು ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಅಗಸ್ಟ 15 ರಂದು ಸ್ವಾತಂತ್ರ್ಯದಿನದಂದು ತಾಲೂಕ ಆಡಳಿತದಿಂದ ಗೌರವಿಸಲ್ಪಟ್ಟ ಸಿಬ್ಬಂದಿಯನ್ನು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದಿಂದ ನಿವೃತ್ತರಾದ ಅಧ್ಯಕ್ಷರನ್ನು ಹೊಸದಾಗಿ ಆಯ್ಕೆಯಾದ ಅಧ್ಯಕ್ಷರನ್ನು ಗೌರವಿಸುವ ಜೊತೆಗೆ ಗುಣಾತ್ಮಕ ಶಿಕ್ಷಣದತ್ತ ಪ್ರಗತಿಪರ ಹೆಜ್ಜೆ ಎಂಬ ಘೋಷಣೆಯಡಿ ಮುಂದೆ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದ ಕಾರ್ಯಕ್ರಮವನ್ನು ಗುರುವಾರ ಸಂಘಟಿಸಲಾಗಿತ್ತು.

- Advertisement -

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ ಸವದತ್ತಿಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಎಂ.ಬಿ.ಕಮ್ಮಾರ, ಡಿ.ಬಿ.ಎತ್ತಿನಗುಡ್ಡ. ವಿಕಲಚೇತನ ಸಂಪನ್ಮೂಲ ಶಿಕ್ಷಕ ಎಸ್.ಎ.ಸಾಗರ. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ರಾಜು ಭಜಂತ್ರಿ. ವ್ಹಿ.ಸಿ.ಹಿರೇಮಠ, ರತ್ನಾ ಸೇತಸನದಿ. ಡಾ.ಬಿ.ಐ.ಚಿನಗುಡಿ ಈ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಸ್ ವಾಯ್ ನಿಪ್ಪಾಣಿ, ಎಲ್ ಎಮ್ ಕುಮಕಾಗೋಳ, ಪಿ ಎಸ್ ಶಿಂಧೆ, ಸಂಗಮೇಶ ಯರಗಟ್ಟಿ, ಎಮ್ ಬಿ ಪೂಜೇರ, ಶ್ರೀ ಸಿ ವಿ ಬಾರ್ಕಿ, ಎಸ್ ಸಿ ಕುರಿ, ಸಿ ವಿ ಸಂಗನಗೌಡ್ರ, ಎಮ್ ಸಿ ಗಡಾದ, ವಿ ಸಿ ಚಂದರಗಿ, ಎಸ್ ಆರ್ ತೋಟಗಿ, ಎಮ್ ಆಯ್ ಮಡಿವಾಳರ, ಎಮ್ ಎನ್ ಕಬ್ಬೂರ, ಶ್ರೀಮತಿ ಎಮ್ ಎಸ್ ಕುಂಬಾರ, ಎಸ್ ವಿ ಜಗುನವರ, ಎನ್ ಜಿ ತೊಪ್ಪಲದ, ಎನ್ ಡಿ ಮೇಳವಂಕಿ, ಎಚ್ ಎಲ್ ತಿಪ್ಪಾನಾಯಕ್ ಇವರಲ್ಲಿ ಹಲವರು ನಿಯೋಜನೆಯಾಗಿ ಇನ್ನೂ ಕಾರ್ಯ ನಿರ್ವಹಿಸುತ್ತಿದ್ದು ಇನ್ನೂ ಹಲವರು ತಮ್ಮ ಶಾಲೆಗಳ ಮೂಲಕ ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವರು. ಇನ್ನು ಹೊಸದಾಗಿ ಹಾಜರಾಗಿ ಸದ್ಯ ಕಾರ್ಯ ನಿರ್ವಹಿಸುತ್ತಿರುವ ರಫೀಕ್ ಮುರಗೋಡ, ರಾಮಚಂದ್ರಪ್ಪ ಎಸ್, ಎಮ್ ಜಿ ಬಾಳೇಕುಂದರಗಿ, ಎಮ್ ಎಮ್ ಬೋಳೆತ್ತಿನ, ಪಿ ಸಿ ಪರೀಟ, ಎನ್ ಬಿ ಪೇಂಟೇದ, ಎಸ್ ಎಸ್ ಮಲ್ಲಣ್ಣವರ, ಆರ್ ಪಿ ನಲವಡೆ, ಎಚ್ ಎಲ್ ನದಾಫ್, ಕೆ ಎಚ್ ಮುದ್ದಾಪುರ, ಅರ್ಜುನ ಮುಳ್ಳೂರ, ಎಫ್ ಜಿ ನವಲಗುಂದ, ಎಸ್ ಬಿ ಮಿಕಲಿ ಇವರನ್ನು ಸ್ವಾಗತಿಸುವುದು. ಬಿ.ಆರ್.ಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಜವಾನ ಈರಪ್ಪ ಅವರಾದಿ, ಲೆಕ್ಕ ಪರಿಶೋಧಕರಾದ ಜೆ.ಎಸ್.ಸಿದ್ಲಿಂಗನವರ ಇವರ ಸನ್ಮಾನ.

ಅದೇ ರೀತಿಯಲ್ಲಿ ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡ ವಿದ್ಯಾ ಬ್ಯಾಕೋಡಿ ಗುರುಮಾತೆ ಹಾಗೂ ವಿಕಲಚೇತನ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಎಸ್.ಎ.ಸಾಗರ ಇವರ ಬೀಳ್ಕೊಡುಗೆ ಸದ್ಯ ಕಾರ್ಯ ನಿರ್ವಹಿಸುತ್ತಿರುವ ವೈ.ಬಿ.ಕಡಕೋಳ.ಎಂ.ಎಂ.ಸಂಗಮ.ಸಿ.ವ್ಹಿ.ಬಾರ್ಕಿ.ಎಸ್.ಬಿ.ಬೆಟ್ಟದ ಇವರ ಸ್ವಾಗತ ಇಲಾಖೆಯಲ್ಲಿ ಕೋವಿಡ್ ಸಮಯದಲ್ಲಿ ರಜೆ ರಹಿತ ಕಾರ್ಯವನ್ನು ತಮ್ಮ ಜೀವದ ಭಯವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿ ತಾಲೂಕ ಆಡಳಿತದಿಂದ ಸ್ವಾತಂತ್ರ್ಯೋತ್ಸವದಂದು ಸನ್ಮಾನಕ್ಕೆ ಪಾತ್ರರಾದ ಕಂಪ್ಯೂಟರ್ ಪ್ರೋಗ್ರಾಮರ್ ವಿನೋದ ಹೊಂಗಲ ಡಾಟಾ ಎಂಟ್ರಿ ಆಪರೇಟರ್ ಮಲ್ಲಿಕಾರ್ಜುನ ಹೂಲಿ. ರಾಜ್ಯ ಮಟ್ಟದವರೆಗೂ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕ್ಷೇತ್ರಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ. ಬೆಳವಡಿ ಮಲ್ಲಮ್ಮಳ ಕುರಿತು ಸಂಶೋಧನ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಡಾ.ಬಿ.ಐ.ಚಿನಗುಡಿಯವರನ್ನು ಸನ್ಮಾನಿಸುವುದು.

- Advertisement -

ಇತ್ತೀಚೆಗೆ ನಿವೃತ್ತರಾದ ಸವದತ್ತಿ ತಾಲೂಕ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿಯವರ ಬೀಳ್ಕೊಡುಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಆರ್.ಪೆಟ್ಲೂರ ಇವರನ್ನು ಸ್ವಾಗತಿಸುವುದು. ವಿಕಲ ಚೇತನ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕರೀಕಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ ಕಬ್ಬೂರ. ಬಿ.ಬಿ.ಗಣಾಚಾರಿ ಪ್ರೌಢಶಾಲೆ ಮರಕುಂಬಿಯ ಭವ್ಯಶ್ರೀ .ಬಿರಾದಾರ ಗೌಡ್ರ ಇವರ ಸನ್ಮಾನ ಹೀಗೆ ಹತ್ತು ಹಲವು ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಶಿಕ್ಷಣ ಸಂಯೋಜಕರಾದ ಕೆ.ಕೆ.ಢಂಗಿ.ಮಂಜುನಾಥ ಹುದ್ದಾರ ಇವರುಗಳ ನೇತೃತ್ವದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ವಿಕಲಚೇತನ ವಿದ್ಯಾರ್ಥಿಗಳಲ್ಲಿಯೇ ಹೆಚ್ಚು ಅಂಕ ಗಳಿಸಿದ ಸರಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಾದ ಕರೀಕಟ್ಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ ಕಬ್ಬೂರ. ಬಿ.ಬಿ.ಗಣಾಚಾರಿ ಪ್ರೌಢಶಾಲೆ ಮರಕುಂಬಿಯ ಭವ್ಯಶ್ರೀ .ಬಿರಾದಾರ ಗೌಡ್ರ ಇವರನ್ನು ಸನ್ಮಾನಿಸಿ ಬೆಳಗಾವಿಯಲ್ಲಿ ಜರಗುವ ಇಲಾಖೆಯ ಸಭೆಗೆ ತೆರಳಿದರು. ನಂತರ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ. ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ವೈ.ಎಂ.ಶಿಂಧೆ.ಡಾ.ಜಯತೀರ್ಥ ಮುನವಳ್ಳಿ. ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ.

ಇವರ ನೇತೃತ್ವದಲ್ಲಿ ಸನ್ಮಾನಗಳು ವೈ.ಬಿ.ಕಡಕೋಳ ಸಂಪಾದಿತ ಗುರು ಶಿಷ್ಯರ ಸಂಬಂಧ ಹಾಗೂ ಪಯಣಿಗ ಪ್ರವಾಸ ಕಥನ ಮತ್ತು ಡಾ.ಬಿ.ಐ.ಚಿನಗುಡಿಯವರ ಸ್ವಾತಂತ್ರ್ಯ ಹೋರಾಟಗಾರ್ತಿ ಸಂಗ್ರೇಶಕೊಪ್ಪದ ಪಾರ್ವತೆವ್ವ ಯಲಿಗಾರ ಪುಸ್ತಕಗಳನ್ನು ಈ ಸಂದರ್ಭದಲ್ಲಿ ನೀಡುವ ಮೂಲಕ ಸರಕಾರ ನೂತನವಾಗಿ ಜಾರಿಗೆ ತಂದ ಹಾರ ತುರಾಯಿ ಬೇಡ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಎಂಬ ಸಂದೇಶದನ್ವಯ ಪುಸ್ತಕ ನೀಡುವ ಸಂಸ್ಕೃತಿಗೆ ಚಾಲನೆ ನೀಡುವ ಮೂಲಕ ಗೌರವಿಸಿದ್ದು ವಿಶೇಷ.

ಈ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ವೈ.ಎಂ.ಶಿಂಧೆ ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ ಅಭಿವೃದ್ಧಿಪರವಾದ ಚಟುವಟಿಕೆಗಳು ಜರುಗುವುದು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ. ಸವದತ್ತಿ ತಾಲೂಕು ಶಿಕ್ಷಕರ ತರಬೇತಿ ಚಟುವಟಿಕೆಗಳಿಗೆ ಜಿಲ್ಲಾ ಹಂತದಲ್ಲಿ ಗಮನಾರ್ಹ ಸಾಧನೆ ತೋರಿದೆ. ಈ ದಿಸೆಯಲ್ಲಿ ಎಲ್ಲರಿಗೂ ಅಭಿನಂದಿಸುವೆ ಎಂದು ನುಡಿದರು.

ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ ಮಾತನಾಡಿ ಗುಣಾತ್ಮಕ ಶಿಕ್ಷಣದಲ್ಲಿ ಪ್ರಗತಿಪರ ಹೆಜ್ಜೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ.ಮುಂದಿನ ದಿನಗಳಲ್ಲಿ ನಾವು ನೀವೆಲ್ಲ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದು.ಬದಲಾವಣೆಯನ್ನು ಸ್ವಾಗತಿಸುವ ಮೂಲಕ ಗುಣಾತ್ಮಕ ಶಿಕ್ಷಣ ನೀಡೋಣಎಂದು ಕರೆ ನೀಡಿದರು.

ಈ ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವು ಎತ್ತಿನಗುಡ್ಡ ಸದಲಗಿ ಸರ್ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿದ್ದಾಗ ಹತ್ತು ಹಲವು ಕೆಲಸಗಳನ್ನು ಕಲಿಯುವಂತಾಯಿತು. ಈ ಸಂದರ್ಭ ಅವರ ವರ್ಗಾವಣೆಯ ನಂತರ ಎಂ.ಬಿ.ಬಳಿಗಾರ ಆಗಮಿಸಿದರು. ಸದಲಗಿಯವರ ಬಳಿ ಕಲಿತ ಪ್ರತಿಯೊಂದು ಕೆಲಸವನ್ನು ಬಳಿಗಾರ ಅವರ ಕೈಯಲ್ಲಿ ಮಾಡುವ ಮೂಲಕ ಜಿಲ್ಲಾ ಹಂತದಲ್ಲಿ ಗುರುತಿಸಿಕೊಳ್ಳುವಂತಾಯಿತು. ಇಲ್ಲಿ ಎಲ್ಲರೂ ಒಂದು ಕುಟುಂಬದಂತೆ ಇದ್ದೆವು.ಆ ಸಂದರ್ಭದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ವ್ಹಿ.ಬೆಳವಡಿಯವರು ಮತ್ತು ಈಗ ಅಧ್ಯಕ್ಷರಾಗಿರುವ ಎಚ್.ಆರ್.ಪೆಟ್ಲೂರವರು ನೀಡಿದ ಸಹಕಾರ ಮರೆಯಲಾಗದು.ಆತ್ಮೀಯ ಸ್ನೇಹಿತನಾಗಿ ಮಂಜುನಾಥ ಕಮ್ಮಾರ ಹಾಗೂ ಕ್ಲಸ್ಟರ ಸಂಪನ್ಮೂಲ ವ್ಯಕ್ತಿಗಳು ನಮ್ಮೊಡನೆ ಹೊಂದಿದ ನಿಕಟ ಬಾಂಧವ್ಯ ಮರೆಯಲಾಗದುಎಂದು ತಮ್ಮ ಅವಧಿಯ ದಿನಗಳನ್ನು ನೆನೆದರು.

ಅದೇ ರೀತಿ ಎಂ.ಬಿ.ಕಮ್ಮಾರ ಮಾತನಾಡಿ ವೃತ್ತಿ ಬದುಕಿನಲ್ಲಿ ನಾವೆಲ್ಲ ಸೇರುವುದು ಆಕಸ್ಮಿಕ ಅಗಲುವಿಕೆ ಕೂಡ ಅನಿವಾರ್ಯ.ಇಲ್ಲಿ ಸಲ್ಲಿಸಿದ ಸೇವೆ ಮರೆಯಲಾಗದ್ದು ಇಂದಿಗೂ ನಾನು ಈ ಕುಟುಂಬದ ಒಬ್ಬ ಸದಸ್ಯನಂತೆ ಇದ್ದೇನೆ.ವರ್ಗಾವಣೆಗೊಂಡರೂ ನಮ್ಮ ಸಂಬಂಧಗಳು ಮಾಸಿಲ್ಲ. ಶೈಕ್ಷಣಿಕ ಚಟುವಟಿಕೆಗಳ ಸಲುವಾಗಿ ಎಷ್ಟೋ ಸಲ ಸಕಾರಾತ್ಮಕ ಜಗಳಗಳು ನಮ್ಮಲ್ಲಿ ನಡೆದಿವೆ.ಮತ್ತೆ ಅವುಗಳನ್ನು ಮರೆಯುವ ಮೂಲಕ ಒಬ್ಬರಿಗೊಬ್ಬರು ಸ್ಪಂದಿಸಿ ಕೆಲಸ ಮಾಡಿದ್ದೇವೆ.ನಮ್ಮೆಲ್ಲರನ್ನು ಈ ದಿನ ಕರೆದು ಸನ್ಮಾನಿಸಿ ಗೌರವಿಸಿದ್ದಕ್ಕೆ ಧನ್ಯವಾದಗಳುಎಂದು ತಿಳಿಸಿದರು.

ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಸ್.ವ್ಹಿ.ಬೆಳವಡಿಯವರು ಮಾತನಾಡುತ್ತ ಹುದ್ದೆಗಳು ಬರುತ್ತವೆ ಹೋಗುತ್ತವೆ ಇರುವಾಗ ನಾವೇನು ಮಾಡಿದೆವು ಎನ್ನುವುದು ಮುಖ್ಯ. ನನ್ನನ್ನು ಈ ಹುದ್ದೆಗೆ ತರುವಲ್ಲಿ ಎಲ್ಲರ ಪಾತ್ರವೂ ಇದೆ.ನನ್ನ ಅವಧಿಯಲ್ಲಿ ಯಾವ ಶಿಕ್ಷಕರಿಗೂ ಮನಸ್ಸಿಗೆ ನೋವನ್ನುಂಟು ಮಾಡಿಲ್ಲ. ನನ್ನನ್ನು ಎಷ್ಟೇ ದ್ವೇಷಿಸಿದವರೂ ಇದ್ದರೂ ಅವರಲ್ಲಿಯೂ ಕೂಡ ನಾನು ಸ್ನೇಹವನ್ನು ಕಂಡಿರುವೆ.ಎಷ್ಟೇ ಕಠಿಣ ಸಂದರ್ಭಗಳು ಬಂದರೂ ಶಿಕ್ಷಕರಿಗೆ ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಿರುವ ತೃಪ್ತಿ ನನಗಿದೆ.ಈ ದಿನದ ಸನ್ಮಾನ ಮರೆಯಲಾಗದು ಎಂದು ತಿಳಿಸಿದರು.

ನೂತನ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಮಾತನಾಡಿ, ನನಗೆ ಈ ಸ್ಥಾನ ದೊರೆತಿದ್ದು ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ನಿವೃತ್ತ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ. ನಮ್ಮ ಮಾವನವರಾದ ಬಿ.ಎನ್.ಹೊಸೂರ ನನ್ನ ತಾಲೂಕಿನ ಎಲ್ಲ ಪದಾಧಿಕಾರಿಗಳ ಪ್ರೋತ್ಸಾಹ ಜಿಲ್ಲಾ ಅಧ್ಯಕ್ಷ ಜಯಕುಮಾರ ಹೆಬಳಿ ಹೀಗೆ ಎಲ್ಲರೂ ಸೇರಿ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಇಲ್ಲಿ ಆಶೋತ್ತರಗಳು ಬೆಟ್ಟದಷ್ಟಿವೆ. ಈಗಾಗಲೇ ಬ್ಲಾಗ್ ಕಾರ್ಯ ನಡೆದಿದೆ.ಅದರಲ್ಲಿ ಹತ್ತು ಹಲವು ಸಂಗತಿಗಳನ್ನು ಸೇರಿಸುವ ಕಾರ್ಯ ಕೂಡ ಜರಗುತ್ತದೆ.ಸಪ್ಟಂಬರ್ ಎರಡನೆಯ ವಾರದಿಂದ ನಮ್ಮ ಸೇವಾ ಪುಸ್ತಕವನ್ನು ಕೂಡ ಬ್ಲಾಗ್‍ನಲ್ಲಿ ಅಳವಡಿಸುವ ಯೋಚನೆ ಇದೆ. ಗುರುಸ್ಪಂದನ ಜರುಗಿಸುವ ಮೂಲಕ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ.ಒಟ್ಟಾರೆ ಮುಂದಿನ ದಿನಗಳಲ್ಲಿ ಹಿರಿಯರಾದ ಎಸ್.ವ್ಹಿ.ಬೆಳವಡಿಯವರ ಮಾರ್ಗದರ್ಶನದಲ್ಲಿ ನನ್ನ ಎಲ್ಲ ಪದಾಧಿಕಾರಿಗಳು ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಶಿಕ್ಷಕರ ಸೇವೆಯನ್ನು ಮಾಡುತ್ತೇನೆಎಂದು ನುಡಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಮಾತನಾಡಿ, ನಾವು ಎಷ್ಟು ದಿನ ಜೊತೆಯಲ್ಲಿ ಸೇವೆ ಮಾಡುತ್ತೇವೆ ಎಂಬುದು ಮುಖ್ಯವಲ್ಲ.ಎಷ್ಟು ಸೌಹಾರ್ದಯುತವಾಗಿ ಸೇವೆ ಮಾಡಿದೆವು ಎನ್ನುವುದು ಮುಖ್ಯ.ಒಬ್ಬರಿಗೊಬ್ಬರು ಪರಸ್ಪರ ಸ್ಪಂದನೆ ನೀಡುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸವದತ್ತಿ ತಾಲೂಕಿನ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸೋಣ. ಮುಂದಿನ ದಿನಗಳಲ್ಲಿ ಇಲಾಖೆ ನೀಡಿರುವ ಗುಣಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನು ಸಮೂಹ ಸಂಪನ್ಮೂಲ ವ್ಯಕ್ತಿಗಳು.ಪ್ರತಿಭಾನ್ವಿತ ರಾಜ್ಯ ಮಟ್ಟದ ನಮ್ಮ ತಾಲೂಕಿನ ವಿವಿಧ ವಿಷಯದ ಸಂಪನ್ಮೂಲ ವ್ಯಕ್ತಿಗಳು. ಶಿಕ್ಷಕರ ಸಂಘದ ಪದಾಧಿಕಾರಿಗಳ ಸಹಕಾರದೊಂದಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳೋಣ.ಇದೊಂದು ಅಪರೂಪದ ಕಾರ್ಯಕ್ರಮ.ಎಲ್ಲರಿಗೂ ಅಭಿನಂದನೆಗಳನ್ನು ಇಲಾಖೆಯ ಪರವಾಗಿ ಸಲ್ಲಿಸುತ್ತೇನೆ. ಮುಂದಿನ ದಿನಗಳು ಕೂಡ ತಮ್ಮ ಎಲ್ಲರ ಸಹಕಾರ ಸದಾ ಇರಲಿಎಂದು ಆಶಿಸಿದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ರತ್ನಾ ಸೇತಸನದಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯವರಿಂದ ಪ್ರಾರ್ಥನಾ ಗೀತಿ ಜರುಗಿತು.ಡಾ.ಬಿ.ಐ.ಚಿನಗುಡಿ ಕಾರ್ಯಕ್ರಮ ನಿರೂಪಿಸಿದರು.ವ್ಹಿ.ಸಿ.ಹಿರೇಮಠ ಸನ್ಮಾನ ಕಾರ್ಯಕ್ರಮ ಜರುಗಿಸಿದರು..ಸಿ.ವ್ಹಿ.ಬಾರ್ಕಿ ಕೊನೆಯಲ್ಲಿ ವಂದಿಸಿದರು.


ವರದಿ: ವೈ.ಬಿ.ಕಡಕೋಳ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು. ಸವದತ್ತಿ

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group