spot_img
spot_img

ಅಧ್ಯಾತ್ಮದ ಕಡೆಗೆ ಹೊರಳಲು ಇದು ಸುಸಮಯ!

Must Read

spot_img
- Advertisement -

ಅಸಂಖ್ಯಾತ ವಿದ್ಯೆ ಕಲಿಯುವ ಬದಲು ಒಂದೇ ವಿದ್ಯೆಯಲ್ಲಿ ಪರಿಪೂರ್ಣತೆ ಗಳಿಸುವುದರಲ್ಲಿ ಆತ್ಮತೃಪ್ತಿ ಅಡಗಿದೆ. ಹಾಗೆ ಅಸಂಖ್ಯಾತ ದೇವತೆಗಳನ್ನು ಬೇಡೋ ಬದಲಾಗಿ ಒಂದೇ ದೇವರಲ್ಲಿ ಶ್ರದ್ದೆ,ನಂಬಿಕೆ, ತಾಳ್ಮೆ, ಭಕ್ತಿ ಬೆಳೆಸಿಕೊಂಡಿದ್ದರೆ ಪಾಲಿಗೆ ಬಂದದ್ದು ಪಂಚಾಮೃತವಾಗಿ ಜೀವನದ ಸತ್ಯ ಅರ್ಥ ಆಗುತ್ತದೆ.

ಅದ್ವೈತ ತತ್ವದ ಪ್ರಕಾರ ದೇವನೊಬ್ಬನೆ ನಾಮ ಹಲವು.ಇಲ್ಲಿ ಭೂಮಿ ಒಂದೆ ಜನ್ಮ ಹಲವು, ಮಾನವರು ಇಲ್ಲಿಗೆ ಆತ್ಮಸಾಕ್ಷಾತ್ಕಾರಕ್ಕಾಗಿ ಜನ್ಮ ತಾಳುವುದು ಸತ್ಯ.ಆದರೆ ಹಿಂದಿನ ಜನ್ಮದ ಋಣದ ಪ್ರಕಾರ ಒಂದು ಕುಟುಂಬದಲ್ಲಿ ಜನಿಸಿದ ಮೇಲೆ ಅಲ್ಲಿಯ ಗುರು ಹಿರಿಯರು ಅನುಸರಿಸಿದ ಧರ್ಮ ಮಾರ್ಗದಲ್ಲಿ ನಡೆದು ಕರ್ಮ ಅಥವಾ ಕೆಲಸ ಮಾಡಿದರೆ ಬಹಳ ಬೇಗ ಮೂಲವನ್ನು ಸೇರಿ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುವುದೆನ್ನುವುದೇ ಆಧ್ಯಾತ್ಮ. ನಿನ್ನ ಮೂಲ ನೀನು ತಿಳಿದು ನಡೆ.

ನಿನ್ನ ಆತ್ಮ ಶುದ್ದ ಮಾಡಿಕೊಂಡು ನಡೆ. ಎನ್ನುವುದು ಆಧ್ಯಾತ್ಮ. ಯಾವಾಗ ಕೆಳವರ್ಗ ಮೇಲ್ವರ್ಗಗಳ ನಡುವೆ ಸಂಘರ್ಷಣೆ ಹೆಚ್ಚಾಯಿತೋ ಜೀವಕ್ಕೆ ಭೂಮಿಯಲ್ಲಿ ಬದುಕಲಾಗದೆ ಹೋಗಿ ಪುನರ್ಜನ್ಮ ಪಡೆದಾಗ ವರ್ಗ ಬದಲಾಗಿದ್ದರೂ ಹಿಂದಿನ ಧರ್ಮ ಕರ್ಮದ ಅವಶೇಷಗಳು ಇದ್ದು ಬ್ರಾಹ್ಮಣನ ಜ್ಞಾನ ಶೂದ್ರನಲ್ಲಿತ್ತು.ಶೂದ್ರನ ಜ್ಞಾನ ಬ್ರಾಹ್ಮಣನಲ್ಲಿತ್ತು.

- Advertisement -

ಹೀಗಾಗಿ ವರ್ಣಪದ್ದತಿ ಹೋಗಿ ಜಾತಿ ಪದ್ದತಿ ಪಾರಂಭವಾಯಿತು.ವರ್ಣದ ಪ್ರಕಾರ ಅವರವರ ಜ್ಞಾನಕ್ಕೆ ತಕ್ಕಂತೆ ಧರ್ಮಕರ್ಮದ ಶಿಕ್ಷಣ. ಬ್ರಾಹ್ಮಣನ ಬ್ರಹ್ಮಜ್ಞಾನದಿಂದ ಇಡೀ ಬ್ರಹ್ಮಾಂಡವೆ ನಡೆದಿದೆ.ಇವರನ್ನು ದೇವರೆಂದು ತಿಳಿದು ಕ್ಷತ್ರಿಯ,ವೈಶ್ಯ,ಶೂದ್ರರು ಅವರವರ ಧರ್ಮ ಕರ್ಮವನ್ನು ಸತ್ಯದಿಂದ ನಡೆಸುತ್ತಿದ್ದ ಕಾಲವೇ ಸತ್ಯಯುಗವಾಗಿತ್ತು.

ದೇವತೆಗಳ ಕಾಲವಾಗಿತ್ತು. ನಂತರದ ಯುಗಗಳಲ್ಲಿ ಜ್ಞಾನವು ಇಳಿಮುಖವಾಗಲು ಕಾರಣವೆ ಭೂಮಿಯನ್ನು ಆಳಲು ಹೊರಟ ರಾಜಕೀಯ. ರಾಜಕೀಯಕ್ಕೆ ಒಳಗಾದ ಮನಸ್ಸು ಭೂಮಿಯ ಸತ್ಯ,ಸತ್ವದ ಬಗ್ಗೆ ಚಿಂತನೆ ನಡೆಸುವುದು ಕಷ್ಟ.

ಇದಕ್ಕೆ ಸ್ತ್ರೀ ಸಹಕಾರ ಸಿಕ್ಕರೆ ಕೇಳೋರಿಲ್ಲ. ಇದಕ್ಕಾಗಿಯೇ ಎಲ್ಲಾ ಸಮಸ್ಯೆಗೂ ಸ್ತ್ರೀ ಕಾರಣವೆಂದು ಹೀಗೆಳೆದರು. ಆದರೆ ಇದು ಸತ್ಯವಲ್ಲ. ಎಲ್ಲಿ ಸ್ತ್ರೀ ಶಕ್ತಿಯ ಜ್ಞಾನಕ್ಕೆ ಬೆಲೆ ಇರುವುದೋ ಅಲ್ಲಿ ಶಾಂತಿ ಇರುತ್ತದೆ. ಆದರೆ ಪುರುಷನಂತೆ ಸ್ತ್ರೀ ಸತ್ಯ ಧರ್ಮದ ಪರ ನಿಲ್ಲಲು ಅವಳಿಗೆ ಜ್ಞಾನದ ಶಿಕ್ಷಣ ನೀಡಿದಾಗ ಮಾತ್ರ ಸಾಧ್ಯ.ಆದರೆ ಯಾವಾಗ ಸ್ತ್ರೀಯನ್ನು ಗೃಹ ಬಂಧನದಲ್ಲಿಟ್ಟು ಅಧರ್ಮ, ಅನ್ಯಾಯ, ಅತ್ಯಾಚಾರದಿಂದ ಆಳಲು ಪ್ರಾರಂಭಿಸಿದರೋ ಆಗಲೇ ಕಲಿಯುಗ ಪ್ರಾರಂಭವಾಯಿತು.

- Advertisement -

ದ್ವಾಪರದ ಕೊನೆಯಲ್ಲಿಯೇ ಕಲಿ ಪ್ರವೇಶವಾಗಿ ಯುದ್ದಗಳು ಹೆಚ್ಚಾದ ವಿವರಣೆಗಳಿವೆ. ಇಲ್ಲಿ ಸಾಮಾನ್ಯಜ್ಞಾನದಿಂದ ಮಾನವರಾಗಿ ಅಲ್ಪಬುದ್ದಿ ಉಪಯೋಗಿಸಿ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸನಾತನ ಧರ್ಮದ ಮೂಲ ಉದ್ದೇಶ ತಿಳಿದರೆ ಉತ್ತಮ. ಜೀವ ಭೂಮಿಯಲ್ಲಿ ಹುಟ್ಟಬೇಕಾದರೆ ಸ್ತ್ರೀ ಶಕ್ತಿಯ ಸಹಕಾರ ಅಗತ್ಯ.ಪುರುಷ ಕಾರಣಮಾತ್ರ.

ಸಮಾನತೆ ವಿಚಾರಕ್ಕೆ ಬಂದಾಗ ಭೂಮಿ ನಡೆದಿರೋದೆ ಸ್ತ್ರೀ ಸಹಕಾರದಿಂದ. ಆತ್ಮಕ್ಕೆ ಸ್ತ್ರೀ ಪುರುಷನೆಂಬ ಬೇಧ ಭಾವವಿರಲಿಲ್ಲ. ಯಾವುದೂ ಜಾತಿ, ಧರ್ಮ, ಪಂಗಡ,ಪಕ್ಷವೂ ಪರಮಾತ್ಮನ ಸೃಷ್ಟಿ ಯಲ್ಲ. ಜೀವಾತ್ಮ ತನ್ನ ಸ್ವಾರ್ಥ ಸಂತೋಷ, ಅಹಂಕಾರ ದಲ್ಲಿ ಮನಸ್ಸಿಗೆ ಬಂದಂತೆ ಸೃಷ್ಟಿಸಿದ ಎಲ್ಲಾ ಪ್ರಕೃತಿಯೊಳಗಿದೆ. ಇದನ್ನು ಮನುಕುಲದ ಒಳಿತಿಗಾಗಿ ಮಾಡಿದ್ದರೆ ಸರಿ.

ಇದರಿಂದ ಮನುಕುಲ ಹಾಳಾಗುತ್ತಿದೆ ಎಂದಾಗ ಆತ್ಮಾವಲೋಕನ ಅಗತ್ಯವಿದೆ. ಪ್ರಕೃತಿ ಪುರುಷರ ನಡುವಿನ ಬೇಧಭಾವಕ್ಕೆ ಕಾರಣವೆ ಅತಿಯಾದ ಅಜ್ಞಾನ. ಎಲ್ಲಾ ತಿಳಿದ ಮೇಲೆ ಬುದ್ದಿ ತನ್ನ ಸ್ಥಿಮಿತ ಕಳೆದುಕೊಳ್ಳುತ್ತದೆನ್ನಬಹುದು. ಇದು ಆಧ್ಯಾತ್ಮ ವಿಚಾರವಾದರೆ ಮನಸ್ಸು ಶಾಂತವಾಗಿ ಏನೂ ನನ್ನದಲ್ಲವೆನ್ನುವ ನಿರ್ಲಿಪ್ತ ಬಾವನೆಗೆ ಜಾರುತ್ತದೆ.

ಆದರೆ ಇಲ್ಲಿ ಅರ್ಧ ಸತ್ಯ ತಿಳಿದವರಷ್ಟೇ ಭೂಮಿಯನ್ನು ಆಳಿ ಅಳಿಸುವ ಮಟ್ಟಿಗೆ ರಾಜಕೀಯ ನಡೆಸಲು ಸಾಧ್ಯ. ಇದರಿಂದಾಗಿ ಧರ್ಮ ಉಳಿಯುವುದೆ? ಧರ್ಮರಕ್ಷಣೆಗೆ ನಮ್ಮ ನಮ್ಮ ಮೂಲವನ್ನರಿತು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಕುಲದೇವರ ಸ್ಮರಣೆ ಮಾಡಿಕೊಂಡು ಸತ್ಯದಿಂದ ಕರ್ಮ ಮಾಡಿ ಬಂದ ಹಣದಿಂದ ಜೀವನ ನಡೆಸುವುದಾಗಿತ್ತು.

ಈಗಿದು ಮೂಲ ಶಿಕ್ಷಣವನ್ನು ಬಿಟ್ಟು ಹೊರ ನಡೆದು ಪರರ ಕೆಳಗೆ ಉದ್ಯೋಗ, ಆಚರಣೆ ಮಾತ್ರ ನಮ್ಮದು.ಅದರಲ್ಲಿಯೂ ರಾಜಕೀಯ ಹೆಚ್ಚಾಗಿ ಮನೆ ಮನೆಯೊಳಗೆ ರಾಮಾಯಣ ಮಹಾಭಾರತದ ಕಥೆ. ಈ ಪುರಾಣ ಕಥೆಯೊಳಗಿದ್ದ ರಾಜಯೋಗ, ರಾಜ ಧರ್ಮ, ರಾಜನೀತಿ, ಸಂಸ್ಕೃತಿ ಇವುಗಳನ್ನು ಇದ್ದಲ್ಲಿಯೇ ಮಾನವ ಅರ್ಥ ಮಾಡಿಕೊಳ್ಳಲೂ ಮಧ್ಯವರ್ತಿಗಳು ಬಿಡುತ್ತಿಲ್ಲ.

ಒಟ್ಟಿನಲ್ಲಿ ಭೂಮಿ ಮೇಲಿರುವ ಸಣ್ಣ ಕಲ್ಲು ಅಗಾಧವಾದ ಶಕ್ತಿ ಪಡೆದು ವಿಗ್ರಹರೂಪದಲ್ಲಿ ಪೂಜಿಸುವ ಪುರುಷ , ಸ್ತ್ರೀ ಯೊಳಗಿನ ಜ್ಞಾನಕ್ಕೆ ಸರಿಯಾಗಿ ಗೌರವಿಸಿ ನಡೆಸಿಕೊಳ್ಳುವ ಜ್ಞಾನವಿಲ್ಲದೆ ವಿಜ್ಞಾನಕ್ಕೆ ಶರಣಾದರೆ ಆತ್ಮಜ್ಞಾನ ಸಿಗುವುದೆ? ಇಲ್ಲಿ ತಪ್ಪು ಎರಡೂ ಕಡೆಯಿಂದ ನಡೆದಿದೆ.

ಇದಕ್ಕೆ ಕಾಲವೇ ಕಾರಣ ನಾನಲ್ಲ ಎನ್ನಬಹುದು. ಆದರೆ ಇದರ ಪ್ರತಿಫಲ ನಾನೇ ಅನುಭವಿಸುವಾಗ ಅದರಿಂದ ಹೊರ ಬರುವ ದಾರಿ ನನ್ನಲ್ಲಿದೆ. ಹೊರಗಿಲ್ಲ ಹೀಗಾಗಿ ಅವರವರ ಪಾಪ ಪುಣ್ಯಕ್ಕೆ ಅವರವರ ಧರ್ಮ ಕರ್ಮವೇ ಕಾರಣ.

ಮೂಲದ ಒಂದೇ ಶಕ್ತಿಯನ್ನರಿತು ಅದರಿಂದ ಹುಟ್ಟಿದ ಅಸಂಖ್ಯಾತ ದೇವಾನುದೇವತೆಗಳು ಅಸುರರು, ಮಾನವರು ಭೂಮಿಯನ್ನು ಆಳೋದಕ್ಕೆ ಹೊರಟು ಈಗ ಭೂಮಿಯ ಸತ್ವ ಸತ್ಯ ನಾಶ ಮಾಡಿ ರೋಗ ಹೆಚ್ಚಿಸಿಕೊಂಡರೆ ಜೀವಕ್ಕೆ ಮುಕ್ತಿ ಸಿಗುವುದೆ? ಮೊದಲು ಮಾನವರಾದರೆ ನಂತರ ಮಹಾತ್ಮರಾಗಬಹುದು. ಭೂಮಿಯಿಂದ ಮುಕ್ತಿ ಸಿಗಲು ಆಧ್ಯಾತ್ಮ ಅಗತ್ಯ.ಆಧ್ಯಾತ್ಮ ಎಂದರೆ ನಿನ್ನ ನೀ ತಿಳಿದು ನಡೆಯುವುದಷ್ಟೆ.ಎಲ್ಲಾ ಮಹಾತ್ಮರುಗಳೂ ಇದನ್ನು ತಿಳಿಸಿದ್ದಾರೆ.

ಆದರೆ ಮಾನವ ಅದನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದಕ್ಕೆ ಕಾರಣ ಅರ್ಧಸತ್ಯದ ವಿಚಾರಗಳಷ್ಟೆ. ಒಂದೇ ದೇವರನ್ನು ನಂಬಿ ನಡೆದರೆ ಅದ್ವೈತ. ಹಲವಾರು ದೇವರನ್ನು ಬೇಡಿದರೆ? ದೇವರ ಋಣ ತೀರಿಸಲು ಕಷ್ಟಪಡಬೇಕು. “ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮ ಒಂದಿದ್ದರೆ ಸಾಕೋ” ನಾಮಸ್ಮರಣೆಯಲ್ಲಿದ್ದು ಸತ್ಕರ್ಮದಿಂದ ಧರ್ಮ ಮಾರ್ಗ ಹಿಡಿದರೆ ಪರಮಾತ್ಮ ನಮ್ಮೊಳಗೆ ಕಾಣಬಹುದಷ್ಟೆ.

ಇದಕ್ಕೆ ರಾಜಕೀಯದಿಂದ ದೂರವಿರಬೇಕು ಸಾಧ್ಯವಿಲ್ಲವೆ ಹಾಗಾದರೆ ಬದಲಾವಣೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಶಿಕ್ಷಣವೇ ಬದಲಾಗದಿದ್ದರೆ ಏನೂ ಸಾಧ್ಯವಿಲ್ಲ. ಇಲ್ಲಿ ರಾಜಕೀಯ ಕ್ಷೇತ್ರಗಳಾಗಲಿ ಧಾರ್ಮಿಕ ಕ್ಷೇತ್ರವಾಗಲಿ ಇರೋದು ದೇಶ ರಕ್ಷಣೆಗಾಗಿಯೋ ಜನರಕ್ಷಣೆಗಾಗಿಯೋ? ಜನರ ಜೀವ ಶಾಶ್ವತವಲ್ಲ.

ದೇಶದ ಜೀವ ಆಧ್ಯಾತ್ಮ ದಲ್ಲಿದೆ. ಜನರಲ್ಲಿ ಆಧ್ಯಾತ್ಮ ಜ್ಞಾನವಿದ್ದರೆ ಮಾತ್ರ ದೇಹದ ಜೊತೆಗೆ ದೇಶವೂ ಗಟ್ಟಿ. ಟೊಳ್ಳಾಗಿರುವ ಶಿಕ್ಷಣವನ್ನು ಗಟ್ಟಿಗೊಳಿಸಲು ಪ್ರಜೆಗಳೇ ಮುಂದಾಗಬೇಕು. ಇದರಲ್ಲಿಯೂ ಭಿನ್ನಾಭಿಪ್ರಾಯ ದಿಂದ ಆಳಿದರೆ ಧರ್ಮ ಯಾವುದಯ್ಯಾ? ವಿದ್ಯೆಗಿಂತ ಜ್ಞಾನವೇ ಮೇಲು. ರೈತನ ಜ್ಞಾನ ರೈತನ ಮಕ್ಕಳಲ್ಲಿದ್ದರೂ ಭೂ ಸೇವೆ ಮಾಡದೆ ಭೂಮಿ ಮಾರಾಟ ಮಾಡಿದರೆ ಧರ್ಮವಲ್ಲ.

ಹಾಗೆಯೇ ಬ್ರಾಹ್ಮಣರನ್ನು ತಮ್ಮ ಕರ್ಮ ಕಳೆದುಕೊಳ್ಳಲು ಬಳಸಿಕೊಂಡು ಅವರನ್ನು ಶತ್ರುಗಳಂತೆ ನೋಡಿದರೆ ಸಮಾಜ ಉದ್ದಾರ ಆಗುವುದೆ? ಅಥವಾ ಬ್ರಾಹ್ಮಣರೇ ಧರ್ಮವಿರೋಧಿಗಳಾದರೆ ಧರ್ಮರಕ್ಷಣೆ ಆಗುವುದೆ? ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದು ಎಷ್ಟೋ ವರ್ಷಗಳಾದರೂ ಹಿಂದಿನಿಂದಲೂ ಬಂದ ದುರ್ಗುಣ ಬಿಡಲಾಗದ ಜೀವಕ್ಕೆ ಪರಮಾತ್ಮನ ಅರಿವು ಮೂಡಿಸುವ ವಿದ್ಯೆ ಅಗತ್ಯವಿದೆ.

ಮಕ್ಕಳ ಒಳಗೆ ಇರುವ ಸದ್ಗುಣಗಳನ್ನು ಬೆಳೆಸಿದಾಗಲೇ ಭಾರತ ಸುರಕ್ಷಿತ “ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಸ್ಥಿತಪ್ರಜ್ಞ ಎಂದರೆ ಸ್ಥಿತಿಗೆ ಕಾರಣ ತಿಳಿದು ನಡೆಯೋದು. ಇದರಲ್ಲಿಯೂ ತಪ್ಪು ಹುಡುಕಬಹುದು. ಮಾನವನಿಗೆ ಮೊದಲು ಕಾಣುವುದೇ ತಪ್ಪು.

ಹೀಗಾಗಿ ಹೊರಗಿನ ತಪ್ಪು ಬೆಳೆದು ಒಳಗೆ ಸೇರಿರುವುದು.ನಮ್ಮಲ್ಲೇ ಇರುವ ತಪ್ಪು ಸರಿಪಡಿಸಿಕೊಳ್ಳಲು ನಮಗೇ ಸಾಧ್ಯವಿಲ್ಲವಾದರೆ ನಮ್ಮಿಂದ ಹುಟ್ಟಿದ ಮಕ್ಕಳನ್ನು ತಿದ್ದಲು ಸಾಧ್ಯವಿಲ್ಲ. ಸತ್ಯ ಒಂದೇ ನನ್ನಿಂದ ಏನೂ ಸಾಧ್ಯವಿಲ್ಲ. ನಮ್ಮಿಂದ ಸಾಧ್ಯವಿದೆ.

ಒಗ್ಗಟ್ಟಿನಿಂದ ಸಾಧ್ಯವಿದೆ. ಇದೇ ಅದ್ವೈತ. ಪ್ರಜಾಪ್ರಭುತ್ವದಲ್ಲಿ ನಾವು ಬದಲಾಗಬೇಕಿದೆ.ಎಲ್ಲಾ ಧರ್ಮ,ಪಕ್ಷಗಳೂ ನಮ್ಮಿಂದ ಬೆಳೆದಿದೆ. ಭ್ರಷ್ಟಾಚಾರ, ಶಿಷ್ಟಾಚಾರ ನಮ್ಮ ಸಹಕಾರದಿಂದ ಬೆಳೆದಿದೆ. ಹೀಗಿರುವಾಗ ಎಲ್ಲದ್ದಕ್ಕೂ ಕಾರಣ ನಾವೇ.

ನಮ್ಮ ಆತ್ಮ ಸಾಕ್ಷಾತ್ಕಾರ ನಮ್ಮೊಳಗಿನ ಸತ್ಯ ಧರ್ಮದಲ್ಲಿರುವಾಗ ರಾಜಕೀಯ ಬೇಕೆ? ಕೊರೊನದ ಉದ್ದೇಶ ಧರ್ಮ ಸ್ಥಾಪನೆ. ಇದನ್ನು ಮನೆಯೊಳಗಿದ್ದೇ ಅರ್ಥ ಮಾಡಿಕೊಳ್ಳಲು ಮೂಲದ ಧರ್ಮ ಕರ್ಮ ತಿಳಿದರೆ ಸಾಕು. ಮನೆದೇವರು ಕುಲದೇವರ ಸ್ಮರಣೆಯಲ್ಲಿ ಸತ್ಸಂಗದಲ್ಲಿ ,ಸದ್ವಿದ್ಯೆಯಲ್ಲಿ,ಸದಾಚಾರದಲ್ಲಿ ನಡೆದಾಗಲೆ ಪರಮಾತ್ಮ ಕಾಣೋದು  ಸೇರೋದು.

ಪ್ರಯತ್ನ ನಮ್ಮದು ಫಲ ಭಗವಂತನದು. ಈಗಿನ ಶಿಕ್ಷಣವೇ ಸತ್ವರಹಿತವಾಗಿರುವಾಗ ಆತ್ಮನಿರ್ಭರ ಭಾರತ ಸಾಧ್ಯವೆ? ಪರೀಕ್ಷೆ ನಡೆಸುವುದಾದರೆ ಆತ್ಮ ಪರೀಕ್ಷೆ ನಡೆಸಿಕೊಳ್ಳಬೇಕಿದೆ. ಮಕ್ಕಳನ್ನು ಭೌತಿಕ ಪರೀಕ್ಷೆಗೆ ಒಡ್ಡಿ ಸಮಸ್ಯೆಗಳನ್ನು ಹೆಚ್ಚಿಸಿಕೊಳ್ಳುವುದೆ ಅಜ್ಞಾನ. ಆತ್ಮನಿರ್ಭರ ಭಾರತ ಆತ್ಮಜ್ಞಾನದ ಶಿಕ್ಷಣದಲ್ಲಿದೆ.ಮನುಕುಲದ ಉದ್ದಾರ ಆತ್ಮಜ್ಞಾನದಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತ…………

ಎಲ್ಲಾ ಒಂದೇ ಶಕ್ತಿಯ ರೂಪಗಳಷ್ಟೆ. ಜೀವ ಎಲ್ಲರಿಗೂ ಮುಖ್ಯವಾದರೂ ಯಾರ ಜೀವ ಆಧ್ಯಾತ್ಮದ ಕಡೆ ಇದೆಯೋ ಅದು ಭೂಮಿಗೆ ಶ್ರೇಷ್ಠವಾಗುತ್ತದೆನ್ನಬಹುದು. ಜೀವವನ್ನು ಆಧ್ಯಾತ್ಮದ ಕಡೆ ಹೊರಳಿಸಲು  ಸುಸಮಯ. ಈ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಮನೆಯಲ್ಲಿದ್ದೇ ಸಾಧ್ಯವಿದೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group