spot_img
spot_img

ಮುಂದಿನ 25 ವರ್ಷಗಳ ಭಾರತದ ಬಗ್ಗೆ ಯೋಚಿಸುವ ಕಾಲ ಇದು – ಈರಣ್ಣ ಕಡಾಡಿ

Must Read

spot_img

ಕಾರ್ಯಕರ್ತರಿಗೆ ರಾಷ್ಟ್ರಧ್ವಜ ವಿತರಿಸಿದ ಸಂಸದರು

ಮೂಡಲಗಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿವೆ. ದೇಶದ ಜನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂತಸದ ಸಮಯದಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂದು ಯೋಚಿಸುವ ಸಮಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಅರಭಾವಿ ಮತ್ತು ಗೋಕಾಕ ವಿಧಾನಸಭಾ ಮತಕ್ಷೇತ್ರದ ಕಾರ್ಯಕರ್ತರಿಗೆ ರಾಷ್ಟ್ರಧ್ವಜಗಳನ್ನು ವಿತರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹರ್ ಘರ್ ಮೆ ತಿರಂಗಾ ಅಭಿಯಾನದಡಿ ಆ. 13 ರಿಂದ 15 ರವರೆಗೆ ನಮ್ಮ ಮನೆಗಳ ಮೇಲೆ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪಕ್ಷದ ಪ್ರಮುಖ ಕಾರ್ಯಕರ್ತರಾದ ರಾಕೇಶ ಡೋನಿ, ಪ್ರಕಾಶ ಮಾದರ, ಸುರೇಶ ಮಠಪತಿ, ತಮ್ಮಣ್ಣ ದೇವರ, ದುಂಡಪ್ಪ ನಂದಗಾಂವ, ಸುನೀಲ ಈರೇಶನವರ, ಸುರೇಶ ಪಾಟೀಲ, ರಾಜು ಜಕಾನಟ್ಟಿ, ಭೀಮಶಿ ಬಂಗಾರಿ, ಕೇದಾರಿ ಭಸ್ಮೆ, ಕುಮಾರ ಗಿರಡ್ಡಿ, ಪುಂಡಲಿಕ ಅರಭಾವಿ, ಅಡಿವೆಪ್ಪ ಕುರಬೇಟ, ಮಹಾನಿಂಗ ಒಂಟಗೂಡೆ, ಈರಪ್ಪ ಢವಳೇಶ್ವರ, ಕೃಷ್ಣಪ್ಪ ಗದಾಡಿ, ಅಜೀತ ಚಿಕ್ಕೋಡಿ, ಬಸವರಾಜ ಗಾಡವಿ, ಶ್ರೀಕಾಂತ ಕೌಜಲಗಿ, ಈಶ್ವರ ಗಾಡವಿ, ಗೋಪಾಲ ತೋಳಮರಡಿ, ಬನಪ್ಪ ಮಳಿವಡ್ಡರ, ಬಸನಗೌಡ ನಿರ್ವಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!