ಈ ಭೂಮಿ ಮನುಷ್ಯ ವರ್ಗಕ್ಕೆ ಮಾತ್ರ ಸೀಮಿತವಲ್ಲ; ಇಂದು ಪ್ರಾಣಿ ಸಂರಕ್ಷಣಾ ದಿನ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಈ ಭೂಮಿ ಮನುಷ್ಯವರ್ಗಕ್ಕೆ ಮಾತ್ರ ಎಂದು ದೇವರು ಸೃಷ್ಟಿಸಿಲ್ಲ. ಎಲ್ಲ ಜೀವಿಗಳಿಗೆ, ಸಸ್ಯ ವರ್ಗಗಳಿಗೆ ಪರಸ್ಪರ ಸೌಹಾರ್ದತೆಇಂದ ಇರಬೇಕು ಎಂಬುವುದು ಆತನ ಇಚ್ಛೆ.

ಆದರೆ ಮನುಷ್ಯ ಪ್ರಾಣಿ ಇದನ್ನೆಲ್ಲ ಗಾಳಿಗೆ ತೂರಿ ಈ ಭೂಮಿಯನ್ನು ಮೊಗೆದು ತಿಂದಿದ್ದಾನೆ. ತನ್ನನ್ನು ಉಳಿದು ಇರುವುದೆಲ್ಲವೂ ತನ್ನ ಸೊತ್ತು ಮತ್ತು ಅದನ್ನು ತಾನು ತನ್ನ ಸುಖ ,ಲಾಲಸೆ,ಭೋಗಗಳಿಗೆ ಬಳಸಲು ತೊಡಗಿ ಅದೆಷ್ಟೋ ಕಾಲ ಶೋಷಣೆ ಮಾಡುತ್ತ ಬ0ದಿದ್ದಾನೆ.ಮನುಷ್ಯನ ತಾಳ್ಮೆಗೆ ಅದೆಷ್ಟು ಮಿತಿ ಇರುವುದೋ ಅದೇ ರೀತಿ ಭೂಮಿಗೆ ಕೂಡಾ ಧಾರಣಾ ಸಾಮರ್ಥ್ಯ ಇದ್ದೇ ಇದೆ.ನಾವು ತಾಳ್ಮೆ ಕೆಟ್ಟ0ತೆ ಭೂಮಿ ಕೂಡಾ ಮುನಿಯುವುದು ಉಂಟು.ಆಗ ಲಕ್ಷೋಪಲಕ್ಷ ಜೀವಿಗಳನ್ನು ಭೂಮಿ ಆಪೋಷನ ತೆಗೆದುಕೊಳ್ಳುತ್ತದೆ. ಅದರ ಇತ್ತೀಚಿನ ಪರಿಣಾಮದ ವಿವರಣೆ ಅಗತ್ಯವಿಲ್ಲ.ಇಡೀ ವಿಶ್ವವೇ ಬೆಚ್ಚಿ ಕಂಗಾಲಾಗಿದೆ.

- Advertisement -

ಮನುಷ್ಯ ವಿವೇಚನೆ ಕಳೆದುಕೊಂಡು ತನ್ನ ಮೂಗಿನ ನೇರಕ್ಕೆ ಪ್ರವರ್ತಿಸಲು ಹೋದರೆ‌‌‌ ಪರಿಣಾಮ ಅತ್ಯಂತ ಕೆಟ್ಟದಾದೀತು.ಯಾರೋ ಮಾಡಿದ ಕರ್ಮಕ್ಕೆ ಇನ್ನ್ಯಾರೋ ತಲೆದಂಡ ಮಾಡಿಕೊಳ್ಳ ಬೇಕಾದೀತು.

ಒಮ್ಮೆ ಒಬ್ಬ ನಗರದ developer ಭೂಮಿಯನ್ನು ಉದ್ದೇಶಿಸಿ ಹೇಳಿದನಂತೆ ” ನಿನ್ನನ್ನು ಎಷ್ಟೇ ಬೆಲೆ ತೆತ್ತಾದರೂ ನಾನು ಖರೀದಿಸಬಲ್ಲೆ.”ಆಗ ಭೂಮಿ ಅನ್ನುತ್ತದೆ ” ಸರಿ,ಆದರೆ ಅದೊಂದು ದಿನ ಚಿಕ್ಕಾಸು ನೀಡದೆ ನಾನು ನಿನ್ನನ್ನು ನನ್ನ ಗರ್ಭದಲ್ಲಿ ಹುದುಗಿಸಲೂ ಬಲ್ಲೆ ಗರ್ವ ಪಡಬೇಡ.ನಿನ್ನದೆಂಬುದು ಈ ಭೂಮಿಯಲ್ಲಿ ಏನೂ ಇಲ್ಲ.ಈ ಭೂಮಿ ಇರುವದು ಸಕಲ ಜೀವರಾಶಿಯನ್ನು ಒಂದು ಹ0ತದ ತನಕ ಬಾಳಲು ಮಾತ್ರ,ನೆನಪಿರಲಿ.”

ಅಮೆರಿಕಾದ ಮೂಲ ನಿವಾಸಿಗಳಾದ ಕೆಂಪು ಇಂಡಿಯನ್ ವಂಶಜರಲ್ಲಿ ಒ0ದು ಮಾತಿದೆ” ಈ ಭೂಮಿ ಇರುವುದು ಎಲ್ಲ ಜೀವಜಂತುಗಳಿಗೆ.ಭೂಮಿ ನಮಗೆ ದೇವರು ಕೊಟ್ಟ ಉಂಬಳಿಯಲ್ಲ.We belong to the earth.The earth doesn’t belong to us.”

ಭೂಮಿಯ ಎಲ್ಲ ಚರಾಚರಗಳು ಪರಸ್ಪರ ಪೂರಕವಾಗಿ ಬಾಳ ಬೇಕಿದೆ.ಆದಸ್ಟೂ ನಾವು ಸಿಕ್ಕ ಸಿಕ್ಕ ಪ್ರಾಣಿಗಳ ಮಾರಣ ಹೋಮ ಮಾಡಿ ತಿಂದು ತೇಗುವುದು ಎಷ್ಟು ಸರಿ ಎಂದು ಆಳವಾಗಿ ಯೋಚಿಸಬೇಕಿದೆ.


ಬಿ. ನರಸಿಂಗ ರಾವ್, ಕಾಸರಗೋಡು

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!