ಸೋಂಕಿಗೆ ಭಯಪಡದೇ ಇರುವವರು ಬೇಗ ಗುಣವಾಗಿದ್ದಾರೆ – ಮುನೀಂದ್ರದೇವ ಶ್ರೀಗಳು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಸಿಂದಗಿ; ಇಡೀ ಜಗತ್ತನ್ನೆ ತಲ್ಲಣಗೊಳಿಸಿದ ಮಹಾಮಾರಿ ಕರೋನಾ ಸೋಂಕಿಗೆ ಅನೇಕ ರಾಜಕಾರಣಿಗಳು, ಶಿಕ್ಷಕರು, ಗಣ್ಯರು ಸೇರಿದಂತೆ ಅನೇಕ ಮಕ್ಕಳು ಬಲಿಯಾಗಿದ್ದಾರೆ ಆದರೆ ಆ ಸೋಂಕಿಗೆ ಭಯಪಡದೇ ಧೈರ್ಯದಿಂದ ಎದುರಿಸಿದವರು ಮಾತ್ರ ಮರಳಿಗೆ ಲೋಕಕ್ಕೆ ಬಂದಿದ್ದಾರೆ ಅಂಥವರ ಸಾಲಿನಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರರು ಒಬ್ಬರು. ಅವರ ಸೇವೆ ಇನ್ನೂ ಕ್ಷೇತ್ರಕ್ಕೆ ಬೇಕಾಗಿದ್ದು ಅವರಿಗೆ ದೇವರು ಆರೋಗ್ಯ ದಯಪಾಲಿಸಲಿ ಎಂದು ಗೋಲಗೇರಿಯ  ಭಂಡಾರಿ ದೇವಿ ಶಕ್ತಿಪೀಠದ ಶ್ರೀ ಮುನೀಂದ್ರದೇವ ಶಿವಾಚಾರ್ಯರು ಆಶೀರ್ವದಿಸಿದರು.

ತಾಲೂಕಿನ ಸುಕ್ಷೇತ್ರ ಗೋಲಗೇರಿ ಯ ಶ್ರೀ ಗೋಲ್ಲಾಳೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಸಿಂದಗಿ ಮತಕ್ಷೇತ್ರದ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ಕೋರೋನಾ ಮಹಾಮಾರಿ ಯಿಂದ ಬೇಗ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಗೋಲಗೇರಿ ಕಾಂಗ್ರೆಸ್ ಪಕ್ಷದ ಯುವ ಘಟಕದ ವತಿಯಿಂದ ಹಮ್ಮಿಕೊಂಡ ವಿಶೇಷ ಪೂಜೆ ಹಾಗೂ ಪಾರ್ಥನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಂಡಾರಿ ದೇವಿ ಶಕ್ತಿಪೀಠದ ಶ್ರೀ ಮುನೀಂದ್ರದೇವ ಶಿವಾಚಾರ್ಯರು ಮಾತನಾಡಿದರು.

- Advertisement -

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಹೊಳೆಪ್ಪ ಸಾಹು ದೇವರಮನಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಮುರಿಗೆಪ್ಪಗೌಡ ರದ್ದೇವಾಡಗಿ, ಶಿವು ಹತ್ತಿ, ಶಿವಯೋಗೆಪ್ಪ ಹತ್ತರಕಿ, ಬಸವರಾಜ ಮಾರಲಭಾವಿ, ರವಿರಾಜ ದೇವರಮನಿ, ಕುಮಾರ ಗೋಂಧಳಿ, ಮಡಿವಾಳ ನಾಯ್ಕೋಡಿ, ಮೈಬೂಬ ದೊಡಮನಿ, ಸಲೀಮ್ ಮುಲ್ಲಾ, ಸಂತೋಷ ಮಣಿಗಿರಿ, ಶ್ರೀಶೈಲ ಜಾಲವಾದಿ, ಎ.ಡಿ.ಕೋರವಾರ, ಅಮೀನಸಾಬ ಶಾಬಾದಿ, ದಾವಲಸಾಬ ಮನಿಯಾರ, ರಾಮಚಂದ್ರ ರಾಠೋಡ ಹಾಗೂ ಗೋಲಗೇರಿ ಸುತ್ತಮುತ್ತಲಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸುಣಗಾರ ಅಭಿಮಾನಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!