spot_img
spot_img

“ಲವ್ವಾಟ” ಚಲನಚಿತ್ರದ ಟೈಟಲ್ ಅನಾವರಣ

Must Read

ಬೆಂಗಳೂರ : ನಿಡಿಗಂಟಿ ಸಾಯಿ ರಾಜೇಶ್ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಬೊಟ್ಟಾಶಂಕರ್ ರಾವ್,ಎನ್ ವೆಂಕಟೇಶ್ವರ್‌ರವರು ಕನ್ನಡ ,ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಿಸುತ್ತಿರುವ “ಲವ್ವಾಟ” ಚಲನಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮವು ಹೈದರಾಬಾದ್‌ನ ಆಂಧ್ರಪ್ರದೇಶ್ ಫಿಲಂ ಚೇಂಬರ್ ಆಫ್ ಕಾಮರ್ಸ್ ನಲ್ಲಿ ನೆರವೇರಿತು.

ಹುಡುಗಿಯೊಬ್ಬಳು ತಮಾಷೆಗಾಗಿ ಹುಡುಗನನ್ನು ಪ್ರೀತಿಯಲ್ಲಿ ಬೀಳಿಸಿ ..ಆ ಪ್ರೀತಿಯನ್ನು ನಿಜವೆಂದು ಕೊಳ್ಳುವ ಹುಡುಗ ಪಡುವ ಕಷ್ಟಗಳು..ಹೇಗಿರುತ್ತವೆ ಎಂಬ ಕಥಾವಸ್ತು ಹೊಂದಿರುವ ‘ಲವ್ವಾಟ’ ಚಲನಚಿತ್ರಕ್ಕೆ, ಕನ್ನಡದಲ್ಲಿ ಪ್ರಚಂಡ ಪುಟಾಣಿಗಳು, ರುದ್ರಾಕ್ಷಪುರ, ಚಲನಚಿತ್ರಗಳನ್ನು ನಿರ್ದೇಶಿಸಿದ ರಾಜೀವ್‌ಕೃಷ್ಣ ಗಾಂಧಿ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ತೆಲುಗು ನಟ ಕ್ರಿಷ್, ಮತ್ತು ಕನ್ನಡದ ಮೀರಾ ಕಣ್ಣನ್ ನಾಯಕ ನಾಯಕಿಯಾಗಿ ನಟಿಸುತ್ತಿದ್ದು, ಶೋಭರಾಜ್ ಕಿಲ್ಲರ್ ವೆಂಕಟೇಶ್, ಬೆನರ್ಜಿ, ಬಿಲ್ಲಿ ಮುರಳಿ, ದೀಕ್ಷ, ರಾಜೇಶ್ ರೆಡ್ಡಿ ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದು ಇನ್ನುಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ನಾಲ್ವರು ಉದಯೋನ್ಮುಖ ಕಲಾವಿದರಿಗೆ ಈ ಚಿತ್ರದಲ್ಲಿ ಪಾತ್ರಗಳನ್ನು ನೀಡಿ ಆ ಮೂಲಕ ರಾಜ್ಯಾದ್ಯಂತ ಚಿತ್ರಪ್ರದರ್ಶನವನ್ನು ಯಶಸ್ವಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ನಿರ್ದೇಶಕ ರಾಜೀವಕೃಷ್ಣ ಗಾಂಧಿ ಹೇಳುತ್ತಾರೆ.

ಎಂ ನಾಗೇಂದ್ರ ಕುಮಾರ್ ಛಾಯಾಗ್ರಹಣ, ಆರ್ ಮಲ್ಲಿ ಸಂಕಲನ, ಬಾಜಿ ಮತ್ತು ತ್ರಿಲ್ಲರ್ ಮಂಜು ರವರ ಸಾಹಸ, ಜಿ.ಕೆ.ರವರ ಸಂಗೀತ, ಪಿಆರ್‌ಓ ಧೀರಜ್ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ ಅವರ ಪ್ರಚಾರಕಲೆ ಈ ಚಿತ್ರಕ್ಕಿದೆ. ಜೂನ್ ೨೨ರಿಂದ ಸಕಲೇಶಪುರ ,ನಂದಿ ಗಿರಿಧಾಮ, ಚಿಕ್ಕಬಳ್ಳಾಪೂರ, ಹುಬ್ಬಳ್ಳಿ, ಶ್ರೀಕಾಕುಳಂ ಮತ್ತು ಕೊಡಗು ಜಿಲ್ಲೆಯಲ್ಲಿ ಚಿತ್ರೀಕರಣ ನಡೆಯಲಿದೆ.


ವರದಿ: ಡಾ.ಪ್ರಭು ಗಂಜಿಹಾಳ-೯೪೪೮೭೭೫೩೪೬

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!