spot_img
spot_img

ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು – ಹಿರಿಯ ಸಾಹಿತಿ ಪಡಶೆಟ್ಟಿ ಕರೆ

Must Read

- Advertisement -

ಸಿಂದಗಿ: ಶರಣರು ಸಂತರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಅವರು ತೋರಿರುವ ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಭಕ್ತಿಯ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜಾನಪದ ಹಿರಿಯ ಸಾಹಿತಿ ಡಾ. ಎಂ .ಎಂ. ಪಡಶೆಟ್ಟಿ ಹೇಳಿದರು.

ಪಟ್ಟಣದ ಮಲ್ಲಿಕಾರ್ಜುನ ನಗರದ ಶರಣೆ ಮಹಾದೇವಿ ಶರಣ ಗುರುಪಾದಪ್ಪ ಹಡಪದ ಅವರ ಸದನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ವಚನೋತ್ಸವ ಸಮಿತಿ ಹಮ್ಮಿಕೊಂಡಿರುವ 133 ನೇ ವಚನೋತ್ಸವದ ಸಭೆಯ ಅಧ್ಯಕ್ಷ ಸ್ಥಾನವಹಿಸಿ ಅವರು ಮಾತನಾಡಿ, ಜಾತಿ ಪದ್ದತಿ ಹಾಗೂ ಅನಿಷ್ಠ ಪದ್ದತಿಗೆ ತಿಲಾಂಜಲಿ ಹೇಳುವ ಮೂಲಕ ಪ್ರತಿ ದಿನವು ವಚನಗಳನ್ನು ಓದಬೇಕು ಶರಣರ ಅನುಭಾವಗಳನ್ನು ಜೀವನದಲ್ಲಿ ರೂಢಿಸಿ ಕೊಂಡು ಉತ್ತಮ ಸಂಸ್ಕಾರದಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಾತನಾಡಿ, ಸಮಾಜದಲ್ಲಿ ಜಾತಿ ಪದ್ದತಿ ಹೋಗಲಾಡಿಸಲು ಶರಣರ ವಚನಗಳು ಪ್ರತಿ ದಿನವು ಮನದಲ್ಲಿ ಪಠಣ ಮಾಡುವ ಮೂಲಕ ಅವರ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿ ಕೊಂಡು ಹಿರಿಯರನ್ನು ಪೂಜ್ಯ ಮನೋಭಾವನೆಯಿಂದ ಅವರನ್ನು ಗೌರವದಿಂದ ಕಾಣುವ ಮೂಲಕ ಕುಟುಂಬದಲ್ಲಿ ಹೊಂದಾಣಿಕೆ ಹಾಗೂ ಸರಳವಾಗಿ ಇರುವ ಮುಖಾಂತರವಾಗಿ ಆರೋಗ್ಯವಂತ ಜೀವನ ನಡೆಸಬೇಕು ಎಂದರು.

- Advertisement -

ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಶರಣ ಚನ್ನಪ್ಪ ಕತ್ತಿ ಮಾತನಾಡಿ, ಶರಣರ ವಚನಗಳು ಸಾಮಾಜಿಕವಾಗಿ ಶ್ರೀಮಂತವಾಗಿವೆ ವಚನೋತ್ಸವ ಸಮಿತಿ ಪ್ರಕಟಿಸಿದ ವಚನೋತ್ಸವ ಪುಸ್ತಕವು ತಮ್ಮ ಮನೆಗೆ ಬ ನವು ಓದುವುದರಿಂದ ಜೀವನ ಪಾವನವಾಗುತ್ತದೆ ಎಂದರು.

ಮಾಜಿ ಸೈನಿಕ ಶ್ರೀಶೈಲ ಯಳಮೇಲಿ ಮಾತನಾಡಿ, ಶರಣರ ವಚನಗಳನ್ನು ಓದುವದರಿಂದ ಉತ್ತಮ ಸಂದೇಶ ತಿಳಿಯಲು ದಾರಿ ದೀಪವಾಗುತ್ತದೆ ಎಂದರು.

ಶರಣ ಬಿ.ಬಿ.ಬಿರಾದಾರ ಮಾತನಾಡಿ, ವಚನೋತ್ಸವದಲ್ಲಿ ಭಾಗವಹಿಸುವದರಿಂದ ವಾರಕ್ಕೊಂದು ವಚನಗಳನ್ನು ಆಲಿಸಲು ಉತ್ತಮ ವೇದಿಕೆಯಾಗಿದೆ ಎಂದರು.

- Advertisement -

ವಿಶ್ರಾಂತ ಶಿಕ್ಷಕ ಸಾಹಿತಿ ಶಿವಕುಮಾರ ಶಿವಶಿಂಪಿ. ಶಿಕ್ಷಕ ಶಂಕರ ಕಟ್ಟಿಮನಿ. ಹಿರಿಯ ಜೀವಿ ಶಿವಪ್ಪ ಗವಸಾನೆ. ದ್ಯಾಮಗೊಂಡ ಹಡಪದ . ಶರಣಗೌಡ ಪಾಟೀಲ. ಬಲಭೀಮಗೌಡ ಬಿರಾದಾರ. ಶರಣು ಹಡಪದ.ಕಮಲವ್ವ ಹಡಪದ.ಕಸ್ತೂರಿ ಹಡಪದ.ಈರವ್ವ ಹಡಪದ. ನಾಗವ್ವ ಹಡಪದ.ವೈಶಾಲಿ ಹಡಪದ ಗೀತಾ ಸತೀಶ ಜಂಬಿಗಿ. ಭಾಗವಹಿಸಿ,

ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹುಗುವಂತೆ, ನೀನಿಲ್ಲದವರ ಮನೆಯ ಹೊಗೆನು, ಸಂಗಯ್ಯ ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯ ನೀನಿದ್ದವನೆ ಕುಲಜನು ಅಣ್ಣ ಬಸವಣ್ಣನವರ ವಚನ ಪಠಣ ನೇರವೇರಿಸಿದರು.
ಸತೀಶ ಗುರುಪಾದ ಜಂಬಗಿ ಸ್ವಾಗತಿಸಿ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group