ಲಾಕ್ಡೌನ್ ಲಾಭ ಯಾರಿಗೆ? ನಷ್ಟ ಯಾರಿಗೆ?

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಈವರೆಗೆ ಸಾಮಾನ್ಯಜನರ ಜೀವನ ಹದಗೆಟ್ಟು ಹೋಗಿ ಸರ್ಕಾರದ ಉಚಿತ ಊಟ, ದಿನಸಿಗಳಿಂದ ಪರಿಹಾರ ಕಾಣುತ್ತಿರುವವರಲ್ಲಿ ಬಡವರು ಎಷ್ಟು ಮಂದಿ ಇದ್ದಾರೆ ಮಧ್ಯಮವರ್ಗ ಎಷ್ಟು ಮಂದಿ ಇರುವರು.

ಇನ್ನು ಬಡತನ ರೇಖೆ ದಾಟಿ ಮುಂದೆ ನಡೆದವರೆಷ್ಟು ಎನ್ನುವ ಲೆಕ್ಕಾಚಾರ ಯಾರೂ ಮಾಡುತ್ತಿಲ್ಲವೆನ್ನಬಹುದು. ಭಾರತ ದೇಶದಲ್ಲಿ ಹಣದಿಂದ ಬಡತನವನ್ನು ಹೋಗಲಾಡಿಸುವ‌ ಅಜ್ಞಾನ ಹೆಚ್ಚಾಗಿಯೇ ರೋಗದಿಂದ ಸಾಯುತ್ತಿರುವುದು ಹೆಚ್ಚು. ಜ್ಞಾನದ ದೇಶವನ್ನು ವಿಜ್ಞಾನದಿಂದ, ವಿದೇಶಿಗಳಿಂದ ಎತ್ತಿ ಹಿಡಿದ ರಾಜಕೀಯಕ್ಕೆ ಸಾಮಾನ್ಯಜ್ಞಾನ ಬಲಿಯಾಗಿದೆ.

ಒಂದು ಕಡೆ ಸಾಮಾನ್ಯರ ಸತ್ಯಜ್ಞಾನವನ್ನು ಹಿಂದುಳಿಸಿ ಆಳುವ ಮಹಾಜ್ಞಾನಿಗಳು, ಮತ್ತೊಂದು ಕಡೆ ಸಾಮಾನ್ಯರ ಜ್ಞಾನವನ್ನು ಅರ್ಥ l ಮಾಡಿಕೊಳ್ಳದೆ ಹಣದಿಂದ ಆಳುವ ರಾಜಕೀಯ. ಧಾರ್ಮಿಕವಾಗಿ ಇಲ್ಲಿ ಶಿಕ್ಷಣದಲ್ಲಿಯೇ ಮೋಸ ಹೋಗಿದ್ದರೂ ಪುರಾಣ, ಇತಿಹಾಸವನ್ನು, ಮಹಾತ್ಮರು, ದೇವರು, ಜ್ಞಾನಿಗಳು, ಇನ್ನಿತರ ಪ್ರತಿಷ್ಟಿತವ್ಯಕ್ತಿಗಳನ್ನು ಮಧ್ಯೆ ಇಟ್ಟು ವ್ಯವಹಾರಕ್ಕೆ ಇಳಿದಿರುವುದ‌ರಿಂದ ಸಾಕಷ್ಟು ಹಣವೇನೋ ಸಿಗುತ್ತಿದೆ.

- Advertisement -

ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಅರಿವಿಲ್ಲದೆ ಜೀವನದಲ್ಲಿ ವೈಭವವಿದ್ದರೂ ಆರೋಗ್ಯ ಇಲ್ಲದೆ ಸರ್ಕಾರದ ಹಿಂದೆ ಬೇಡೋರು, ದೇವರನ್ನು ಬೇಡೋರು ಹೆಚ್ಚಾದರೆ ಮನೆಯೊಳಗಿದ್ದೇ ಸೋಮಾರಿ ಬೆಳೆಯುವಂತಾಗಿದೆ.

ಸ್ವತಂತ್ರ ವಾಗಿ ಹೊರಗಿರುವವರಿಗೆ ಕೊರೊನ ಭಯವಿಲ್ಲ. ಲಾಕ್ಡೌನ್ ಹೆಸರಿನಲ್ಲಿ ಜನರನ್ನು ಮನೆಯಲ್ಲಿ ಕೂರಿಸಿದರೆ ಆರ್ಥಿಕ ಸ್ಥಿತಿ ಹದಗೆಟ್ಟು ಸಾಲ ಬೆಳೆದು ಇನ್ನಷ್ಟು ರೋಗಿಗಳು ಹೆಚ್ಚಾಗುತ್ತಾರೆ.

ವಿದೇಶಿಗಳಲ್ಲಿ ಯಾವುದೇ ಮಾಸ್ಕ್ ಇಲ್ಲದೆ ರೋಗದ ವಿರುದ್ದ ಹೋರಾಟ ನಡೆಸಿದ್ದಾರೆಂದರೆ ಅವರವರ ದಿನನಿತ್ಯದ ಕರ್ಮವನ್ನು ಯಾರು ಸರಿಯಾಗಿ ಮಾಡಿಕೊಂಡು , ಧರ್ಮದಿಂದ ನಡೆಯುವರೋ ಆಗಲೆ ಆರೋಗ್ಯ ಚೆನ್ನಾಗಿರುತ್ತದೆ.

ಭಾರತದಲ್ಲಿರುವ ರಾಜಕೀಯ ಪಕ್ಷಗಳ ಒಳ ಜಗಳದಲ್ಲಿ ಜನಸಾಮಾನ್ಯರ ಜೀವ ಹೋಗುತ್ತಿದೆ. ಕೊರೊನ ಲಸಿಕೆ ಒಳಗಿಟ್ಟುಕೊಂಡು ಅದರಲ್ಲಿಯೂ ಭ್ರಷ್ಟರಿಗೆ ಸಹಕಾರ ನೀಡಿದರೆ ಇದೊಂದು ಜನರನ್ನು ಸುಲಿಗೆ ಮಾಡುವ ಕರ್ಮವಷ್ಟೆ. ಇದಕ್ಕೆ ತಕ್ಕ ಪ್ರತಿಫಲ ಅನುಭವಿಸುವಾಗ ಯಾರೂ ಇರೋದಿಲ್ಲವೆನ್ನುವ ಆಧ್ಯಾತ್ಮ ಸತ್ಯ ತಿಳಿದರೆ ದೇಶಕ್ಕಾಗಿ ನಾವೇನು ಮಾಡುತ್ತಿದ್ದೇವೆಂದು ತಿಳಿಯಲು ಸಾಧ್ಯ.

ಪ್ರಜಾಪ್ರಭುತ್ವದ ಪ್ರಜೆಗಳ ಜೀವ‌ ಸರ್ಕಾರದ ಕೈಯಲ್ಲಿದೆಯೆ? ಸರ್ಕಾರ ನಮ್ಮ ಕೈಯಲ್ಲಿದೆಯೆ? ಇಬ್ಬರ ಜಗಳ ಮೂರನೆಯವರಿಗೆ ಲಾಭ‌ ಎನ್ನುವಂತೆ  ವಿದೇಶಿ ಕಂಪನಿಗಳು ದೇಶದ ತುಂಬಾ ವ್ಯವಹಾರ ನಡೆಸಿ ಜನರನ್ನು ದಾರಿ ತಪ್ಪಿಸಿದರೆ ಮುಂದಿನ ಭವಿಷ್ಯ ಹೇಗಿರಬಹುದು? ಲಾಕ್ಡೌನ್ ಸಮಯವನ್ನು ಜ್ಞಾನಿಗಳು ಸದ್ಬಳಕೆ ಮಾಡಿಕೊಂಡಿದ್ದರೂ ಅವರೊಳಗೂ ರಾಜಕೀಯ ಹೆಚ್ಚಾಗಿರುವಾಗ ಜನಸಾಮಾನ್ಯರ ಸಾಮಾನ್ಯ ಜ್ಞಾನದಿಂದ ನಡೆಯಬೇಕಾದ ದೇಶದ ಗತಿ ಏನಾಗಬಹುದು? ಎಲ್ಲಾ ಕಾಲದ ಪ್ರಭಾವ.

ಆದರೆ ನಮ್ಮ ಜೀವ ನಮ್ಮೊಳಗೇ ಇರೋವಾಗ ಆ ಸಣ್ಣ ಜೀವವನ್ನು ಸಾಕಲಾಗದ ಪರಿಸ್ಥಿತಿ ಈಗ ಯಾರಿಗೂ ಇರಲಿಲ್ಲ.ಆದರೆ ಸ್ವಾಭಿಮಾನ ಬಿಟ್ಟು, ಸ್ವಾವಲಂಬನೆ ಯಿಂದ ದೂರವಿದ್ದರೆ ಪರರ ಹಂಗಿನಲ್ಲಿ ಪರಾವಲಂಬನೆಯಲ್ಲಿ ಪರಕೀಯರ ರಾಜಕೀಯದಲ್ಲಿ ಇನ್ನಷ್ಟು ರೋಗಿಗಳು ಸಿಲುಕಿಕೊಂಡು ಅತಂತ್ರಸ್ಥಿತಿಗೆ ಜೀವ ಸಿಲುಕುತ್ತದೆ.

ಆಧ್ಯಾತ್ಮದ ಪ್ರಕಾರ ಲಾಕ್ಡೌನ್ ನಮ್ಮ ಸ್ವಾರ್ಥ ಅಹಂಕಾರದ ಜೀವಕ್ಕೆ ಕೊಡಬೇಕಿತ್ತು. ಶಿಕ್ಷಣವನ್ನು ನಮ್ಮ ಜ್ಞಾನ ಪ್ರಕಾರ ನೀಡಬೇಕಿತ್ತು ಅದು ಮನೆಯೊಳಗಿರುವ ಗೃಹಿಣಿಯರಿಗೆ ಸಾಧ್ಯವಿತ್ತು. ಪೋಷಕರಾದವರು ಈಗಲಾದರೂ ಮಕ್ಕಳ ಭವಿಷ್ಯಕ್ಕಾಗಿ ಅವರವರ ಮೂಲಧರ್ಮ ಕರ್ಮದ ಬಗ್ಗೆ ಚಿಂತನೆ ನಡೆಸಿದರೆ, ಹತ್ತಿರವೇ ಇರುವ ಸುಖ, ಶಾಂತಿ, ನೆಮ್ಮದಿ, ಸ್ವಾಭಿಮಾನ, ಸ್ವಾವಲಂಬನೆ, ಸತ್ಯ ಧರ್ಮದಿಂದ ಸ್ವತಂತ್ರ ಜೀವನ ನಡೆಸಲು ಮಕ್ಕಳಿಗೂ ತಿಳಿಸಿ, ಕಲಿಸುವ ಸದವಕಾಶ ಈ ಲಾಕ್ಡೌನ್ ನೀಡಿದೆ ಎನ್ನುವ ಸಕಾರಾತ್ಮಕ ಚಿಂತನೆಯಲ್ಲಿ ಮುಂದಿನ ಆತ್ಮನಿರ್ಭರ ಭಾರತ ನಿಂತಿದೆ. ಇಲ್ಲಿ ಯಾರೋ ಒಬ್ಬರಿಂದ ದೇಶ ನಡೆಯುತ್ತಿಲ್ಲ ಪ್ರತಿಯೊಬ್ಬರ ಕಾಯಕದಿಂದ ದೇಶ ನಡೆದಿದೆ. ಕಾಯಕವೆ ಕೈಲಾಸವಾಗುವುದು ಅದು ಸನ್ಮಾರ್ಗದಲ್ಲಿ ನಡೆದಾಗ.

ಸತ್ಯ ಧರ್ಮ ಬಿಟ್ಟು ರಾಜಕೀಯ ನಡೆಸಿದರೆ ಆತ್ಮದುರ್ಭಲವಾಗುತ್ತದೆ. ಇದರಿಂದಾಗಿ ನಷ್ಟ ಜೀವಕ್ಕೆ. ಜೀವ ಹೋದರೂ ಹುಟ್ಡುತ್ತದೆ. ಆತ್ಮಜ್ಞಾನ ಇದ್ದಾಗಲೆ ಬೆಳೆಸಿಕೊಳ್ಳಲು ಸತ್ಯ ಧರ್ಮದ ಅರಿವು ಅಗತ್ಯವಿದೆ. ಯಾರೇನೇ ಮಾಡಿದರೂ ಅದರಿಂದ ಶಾಶ್ವತವಾಗಿದ್ದ ಭಾರತದ ಮೂಲವನ್ನು ಅಲ್ಲಾಡಿಸಲಾಗದು.

ಮೂಲ ಗಟ್ಟಿಗೊಳಿಸಿಕೊಳ್ಳುವುದರಲ್ಲಿದೆ ಭಾರತೀಯರ ಭವಿಷ್ಯ. ಪ್ರಜಾಪ್ರಭುತ್ವದ ಭವಿಷ್ಯವಿರೋದು ಪ್ರಜೆಗಳ ಆಂತರಿಕ ಜ್ಞಾನದಲ್ಲಿ. ವಿಜ್ಞಾನ ಹೊರಗಿನಿಂದ ಬೆಳೆದಿದೆ. ನಮ್ಮ ಆಂತರಿಕ ಶಕ್ತಿಗಾಗಿ ಸರ್ಕಾರ ದ ಸಾಲ ಬೇಕೆ? ಸತ್ಯಜ್ಞಾನ ಬೇಕೆ? ಸತ್ಯ ತಿಳಿದು ನಮ್ಮನ್ನು ನಾವು ಆಳಿಕೊಳ್ಳಲು ಲಾಕ್ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡರೆ ನಮ್ಮ ಆತ್ಮರಕ್ಷಣೆ ಸಾಧ್ಯವಿದೆ.

ಜೀವ ಬಂದಿರೋದು ಆತ್ಮರಕ್ಷಣೆಗಾಗಿ ಎನ್ನುವುದು ಆಧ್ಯಾತ್ಮ. ಆದಿ ಆತ್ಮ. ಜೀವನ ಜೀವಿಗಳ ವನ. ಜೀವ ಎಲ್ಲರಿಗೂ ಸಮಾನ. ಹಣದಿಂದ ಪರಿಹಾರ ನೀಡಬಹುದು. ಆದರೆ ಆ ಪರಿಹಾರದ ಹಣವೇ ಋಣವಾಗಿ ಕಾಡುವಾಗ ಯಾವುದೇ ಸರ್ಕಾರ ವಿರೋದಿಲ್ಲ.

ಆರೋಗ್ಯಕರ ಸಮಾಜಕ್ಕೆ ಆರೋಗ್ಯವಂತ ಪ್ರಜೆಗಳಿರಬೇಕಲ್ಲವೆ? ಈ ಆರೋಗ್ಯ ಶಿಕ್ಷಣದೊಳಗಿಂದ ಸಿಗಬೇಕು. ಮಕ್ಕಳಿಗೆ ನೀಡಲಾಗುತ್ತಿರುವ ಅನಾವಶ್ಯಕ, ಪ್ರಬುದ್ದತೆಯನ್ನು ಬೆಳೆಸೋ ವಿಜ್ಞಾನದ ವಿದೇಶಿ ಜ್ಞಾನದ ರಾಜಕೀಯ ವಿಚಾರಗಳಿಂದ ಭಾರತ ಪಡೆದದ್ದೆಷ್ಟು? ಕಳೆದದ್ದು ಎಷ್ಟು
ಇಲ್ಲಿ ಮನುಕುಲಕ್ಕೆ ಬೇಕಾದ ಸತ್ಯಜ್ಞಾನ ವಿಲ್ಲದೆ ರೋಗ ಹೆಚ್ಚಾಗಿದೆ.

ರಾಜಕೀಯದಿಂದ ಅಧರ್ಮ,ಅಸತ್ಯ,ಅನ್ಯಾಯ ವೇ ಗೆದ್ದರೆ ಆರೋಗ್ಯ ರಕ್ಷಣೆ ಮಾಡಬೇಕಾದವರೆ ರೋಗಿಗಳಾಗಿದ್ದರೆ, ಶಿಕ್ಷಕ ಎನಿಸಿಕೊಂಡವರಲ್ಲಿಯೇ ಅಜ್ಞಾನ ಹೆಚ್ಚಾಗಿದ್ದರೆ ,ಪೋಷಕರೆ ಮಕ್ಕಳನ್ನು ಶೋಷಣೆ ಮಾಡಿ ಸ್ವಾರ್ಥ ಕ್ಕೆ ಬಳಸಿಕೊಂಡರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನಬಹುದು.

ತಪ್ಪನ್ನು ಅಧಿಕಾರ, ಸ್ಥಾನ ಪಡೆದವರು ಮಾಡಬಹುದು. ಅಧಿಕಾರ ಕೊಟ್ಟವರ ತಪ್ಪಿಗೆ ಶಿಕ್ಷೆ ನೀಡುವ ಅಧಿಕಾರವಿದೆ. ಗುರು ಶಿಷ್ಯ, ದೇಶ ಪ್ರಜೆ, ರಾಜ,ಸೇವಕ, ಇವುಗಳನ್ನು ಬೌತಿಕ ಜಗತ್ತು ನೋಡಬಹುದು.ಆಧ್ಯಾತ್ಮ ಜಗತ್ತಿನಲ್ಲಿ ಎಲ್ಲಾ ಒಂದೇ. ಜೀವಕ್ಕೆ ಮುಕ್ತಿ ಸಿಗಬೇಕಾದರೆ ಆರೋಗ್ಯ
ಹೆಚ್ಚಾಗಿರಬೇಕು.

ಮಾನಸಿಕ ದೈಹಿಕ ಆರೋಗ್ಯವೆರಡೂ ಒಂದೇ. ಮಾನಸಿಕ ರೋಗವೇ ಹೆಚ್ಚಾಗಿ ದೈಹಿಕ ರೋಗಕ್ಕೆ ಕಾರಣ. ಹೀಗಾಗಿ ಒಳಗಿನ ಮನಸ್ಸನ್ನು ಆಧ್ಯಾತ್ಮದ ಕಡೆ ಹೊರಳಿಸುವುದಕ್ಕೂ ದೈಹಿಕ ಶ್ರಮ,ಬಲ ಬೇಕು. ಈಗ ಕೊರೊನ ಸಮಯದಲ್ಲಿ ಮನೆಯೊಳಗೆ ಕಾಲಹರಣ ಮಾಡೋ ಬದಲು ಆಧ್ಯಾತ್ಮದ ಕಡೆ ಮನಸ್ಸನ್ನು ಬಿಟ್ಟು ಸತ್ಯ ತಿಳಿದು ಹೊರ ಬಂದವರಷ್ಟೇ ಶ್ರಮಪಟ್ಟು ದುಡಿದು ಬದುಕಬಹುದು.

ಉಳಿದವರಿಗೆ ಸೋಮಾರಿತನ ಹೆಚ್ಚಾಗಿ ಇನ್ನಷ್ಟು ಭ್ರಷ್ಟರಿಗೆ ಸಹಕರಿಸುತ್ತಾ ರೋಗ ಹರಡಬಹುದು ಒಟ್ಟಿನಲ್ಲಿ ಲಾಕ್ಡೌನ್ ಯಾರಿಗೆ ಲಾಭವಾಯಿತೋ ನಷ್ಟ ಆಗಿದೆಯೋ ಮೇಲಿರುವ‌ಆ ಪರಾಶಕ್ತಿಗೆ ಗೊತ್ತು. ಸದ್ಬಳಕೆ ಮಾಡಿಕೊಂಡವರಿಗೆ ರಕ್ಷಣೆ. ದುರ್ಭಳಕೆ ಮಾಡಿಕೊಂಡವರಿಗೆ ಶಿಕ್ಷೆ ನೀಡುವುದೂ ಆ ಶಕ್ತಿಯೆ.

ಆಗೋದೆಲ್ಲಾ ಒಳ್ಳೆಯದಕ್ಕೆ, ಆಗಿದ್ದೆಲ್ಲಾ ಒಳ್ಳೆಯದು.ಆಗೋದನ್ನು ರಾಜಕೀಯದಿಂದ ತಡೆಯಲಾಗದು. ಭೂತಕಾಲದ ಸತ್ಯ ವರ್ತ ಮಾನಕ್ಕೆ ದೂರ. ಭವಿಷ್ಯ ಹೇಳಿದರೆ ಸತ್ಯಕ್ಕೆ ಬೆಲೆಯೇ ಇರೋದಿಲ್ಲ. ಕಾರಣ ನಮ್ಮ ಸ್ಥಿತಿಗೆ ನಮ್ಮ ಇಂದಿನ ಧರ್ಮ ಕರ್ಮವೆ ಕಾರಣ. ಎಲ್ಲಾ ನಮ್ಮ ಕೈಯಲ್ಲಿ ಇಲ್ಲ.

ಆದರೂ ನಮ್ಮ ಜ್ಞಾನ ನಮ್ಮೊಳಗಿದೆ. ಸತ್ಯ ನಮ್ಮೊಳಗಿದೆ. ಇದರ ಬಳಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದರೂ ಶಿಕ್ಷಣ ನಮ್ಮ ಪರ ನಿಲ್ಲದೆ ಪರರ ವಶವಾಗಿದೆ. ಈಗ ಸರಿಪಡಿಸಬೇಕಾಗಿದ್ದು ಯಾವುದನ್ನು? ನಮ್ಮ ಜೀವನ ‌ಪರರಲ್ಲಿದೆಯೆ?

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!