ಇಂದು ಕಾರ್ಗಿಲ್ ವಿಜಯ ದಿವಸ್; ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ

Must Read

ಹೊಸದಿಲ್ಲಿ: ಇಂದು ಕಾರ್ಗಿಲ್​ ವಿಜಯ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ, ಅಂದು ಕಾರ್ಗಿಲ್ ಯುದ್ಧ ದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ಕಾರ್ಗಿಲ್​ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ಶೌರ್ಯ, ತ್ಯಾಗವನ್ನು ನೆನಪಿಸಿಕೊಂಡ ಅವರು, ಅಂದಿನ ಯೋಧರ ಧೈರ್ಯ ಇಂದೂ ಕೂಡ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಕಾರ್ಗಿಲ್​ ವಿಜಯ ದಿವಸ್​​​ದ ಈ ದಿನದಂದು ನಾವು ಅಂದು ಹೋರಾಡಿದ ಯೋಧರ ತ್ಯಾಗ, ಶೌರ್ಯವನ್ನು ನೆನಪಿಸಿಕೊಳ್ಳಬೇಕು. ಅಂದು ರಾಷ್ಟ್ರರಕ್ಷಣೆಗಾಗಿ ಜೀವವನ್ನೇ ಸಮರ್ಪಿಸಿದವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಈ ಬಾರಿ ಕಾರ್ಗಿಲ್​ ವಿಜಯ್​ ದಿವಸ್​ದ 22ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಅಮೃತ ಮಹೋತ್ಸವ ಅಂದರೆ ಜನರ ಚಳವಳಿಯನ್ನಾಗಿ ಆಚರಿಸುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ರಾಷ್ಟ್ರೀಯ ಅನುಷ್ಠಾನ ಸಮಿತಿ ನಿರ್ವಹಣೆ ಮಾಡಲಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group