spot_img
spot_img

ಇಂದಿನ ಪೀಳಿಗೆ ಸಂವಿಧಾನ ಅರ್ಥ ಮಾಡಿಕೊಳ್ಳಬೇಕು- ರಾಮನಗೌಡ ಕನ್ನೊಳ್ಳಿ

Must Read

spot_img

ಸಿಂದಗಿ; ಭಾರತದಲ್ಲಿ ನಾಗರಿಕ ಮತ್ತು ಪ್ರಾಣಿಗಳ ಮಧ್ಯೆ ಅರಿವು ಮೂಡಿಸುವುದೇ ಸಂವಿಧಾನದ ತಿಳಿವಳಿಕೆ. ಜನರಲ್ಲಿ ಅರಿವು ಮೂಡಿಸುವಂಥ ಕಾರ್ಯಕ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆ ಹಾಕಿಕೊಳ್ಳುತ್ತಿದೆ ಕಾರಣ ಸಂವಿಧಾನವನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮನಗೌಡ ಕನ್ನೊಳ್ಳಿ ಹೇಳಿದರು.

ಪಟ್ಟಣದ ಡಾ. ಅಂಬೇಡ್ಕರ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸೇನೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿ ದಿ ಪಿಪಲ್ ಆಫ್ ಇಂಡಿಯಾ ಎಂಬ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ಅಸ್ಪ್ರಶ್ಯತೆ ಆಚರಣೆಯಲ್ಲಿತ್ತು ಆದರೆ ಇಂದು ಅದನ್ನು ಹೋಗಲಾಡಿಸಲು ಸಂವಿಧಾನದ ಮೂಲಕ ಹೋರಾಟ ನಡೆಸಬೇಕು ನಮ್ಮ ವಿರೋಧ ತಾತ್ವಿಕ ನೆಲೆಯಲ್ಲಿರಬೇಕು ಎನ್ನುವ ತಿಳಿವಳಿಕೆ ಇಂದಿನ ಯುವಕರಲ್ಲಿ ಬರಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಅಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಡಾ. ಬಾಬಾಸಾಹೇಬರ ಜೀವನ ಚರಿತ್ರೆಯಲ್ಲಿದ್ದೇವೆ ಅಂದರೆ ನಾವು ಭಾರತೀಯರು, ನಾವೆಲ್ಲ ಇದ್ದೇವೆ ಎಂದರೆ ಸಂವಿಧಾನದ ಕೊಡುಗೆಯಿಂದ ಮಾತ್ರ ಎನ್ನುವ ಅರಿವು ನಮ್ಮಲ್ಲಿ ಇರಬೇಕು ಎಂದು ಹೇಳಿದರು.

ದಲಿತ ಸೇನೆಯ ರಾಜ್ಯ ಸಂ.ಕಾರ್ಯದರ್ಶಿ ಮಹಿಬೂಬ ಸಿಂದಗಿಕರ ಮಾತನಾಡಿ, ಡಾ. ಅಂಬೇಡ್ಕರ ಅವರ ಆಶಯದಂತೆ ನಾವೆಲ್ಲರೂ ಮೀಸಲಾತಿ ಆಧಾರದ ಮೇಲೆ ಬದುಕಬೇಕಾಗಿದೆ. ಕಾರಣ ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದಾಗ ಮಾತ್ರ ಎಲ್ಲರಲ್ಲಿ ಸಂವಿಧಾನದ ಬಗ್ಗೆ ತಿಳಿವಳಿಕೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಬಿ.ಎಸ್.ನಾಟೀಕಾರ, ಹರೀಶ ಬಿಸನಾಳ, ರಮೇಶ ನಡುವಿನಕೆರಿ, ಪರಶುರಾಮ ಕೂಚಬಾಳ, ರಜತ ತಾಂಬೆ, ಮುನ್ನಾ ಖೇಡ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿಸದರು. ಎಸ್.ಬಿ.ಖಾನಾಪುರ ವಕೀಲರು ನಿರೂಪಿಸಿದರು. ದಲಿತ ಸೇನೆಯ ತಾಲೂಕಾಧ್ಯ್ಯಕ್ಷ ಬಾಲಕೃಷ್ಣ ಚಲವಾದಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!