spot_img
spot_img

ಸಿಂದಗಿ ನಗರದಲ್ಲಿ ಮೂತ್ರಾಲಯ ನಿರ್ಮಾಣಕ್ಕೆ ಚಾಲನೆ

Must Read

- Advertisement -

ಸಿಂದಗಿ; ನಗರ ಸ್ವಚ್ಚತೆಯಿಂದ ಕೂಡಿರಬೇಕು ಜನರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ ಮತ್ತು ಮೂತ್ರಾಲಯ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ೨೦೨೩-೨೪ನೇ ಸಾಲಿನ ಎಸ್.ಬಿಎಂ ೨.೦ ಯೋಜನೆ ಅಡಿಯಲ್ಲಿ ರೂ ೫೯.೧೦ ಲಕ್ಷಗಳ ಮೀಸಲಿಟ್ಟು ನಗರದ ಜನತೆಯ ಜೊತೆ ಗ್ರಾಮೀಣದಿಂದ ವ್ಯಾಪಾರ ಉದ್ಯೋಗಕ್ಕಾಗಿ ಆಗಮಿಸುತ್ತಿರುವ ಸಾರ್ವಜನಿಕರು, ರೈತಾಪಿ ಜನತೆ ಹಾಗೂ ವಿದ್ಯಾರ್ಥಿಗಳ ಎಲ್ಲ ಜನರಿಗೆ ಅನುಕೂಲಕ್ಕಾಗಿ ಆಯ್ಕೆಯಾದ ೮ ಸ್ಥಳಗಳಲ್ಲಿ ೪ ಶೌಚಾಲಯ ಹಾಗೂ ೪ ಮೂತ್ರಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಕನಕದಾಸ ವೃತ್ತದ ಹತ್ತಿರ ಸನ್ ೨೦೨೩-೨೪ನೇ ಸಾಲಿನ ಎಸ್‌ಬಿಎಂ ೨.೦ ಯೋಜನೆಯಡಿಯಲ್ಲಿ ರೂ. ೫೯ಲಕ್ಷ ವೆಚ್ಚದಲ್ಲಿ ೮ ಶೌಚಾಲಯ ನಿರ್ಮಾಣದ ಭೂಮಿಪೂಜೆಯನ್ನು ನೇರವೇರಿಸಿ ಮಾತನಾಡಿ, ಸಿಂದಗಿ ನಗರ ಸ್ವಚ್ಚತೆಯಿಂದ ಕೂಡಿರಬೇಕು ಎನ್ನುವ ನಿಟ್ಟಿನಲ್ಲಿ ಕನಕದಾಸ ವೃತ್ತ, ವಿದ್ಯಾನಗರ ಕ್ರೀಡಾಂಗಣ, ಬಸ್ ಡಿಪೋ ಆಶ್ರಯ ಕಾಲೋನಿ, ಗಾಂಧಿ ಚೌಕ ಹತ್ತಿರ ೪ ಶೌಚಾಲಯ ಹಾಗೂ ಸಂಗಮ ಬಾರ್, ಕೆಇಬಿ, ಮೋರಟಗಿ ನಾಕಾ, ಕೋರ್ಟ ಹತ್ತಿರ ಒಟ್ಟು ೪ ಮೂತ್ರಾಲಯಗಳನ್ನು ನಿರ್ಮಾಣ ಮಾಡಿ ಈ ನಗರವನ್ನು ಅಭಿವೃದ್ಧಿ ಪಡಿಸಲು ನಾವೆಲ್ಲರೂ ಕಂಕಣಬದ್ಧರಾಗಿ ಕೆಲಸ ಪ್ರಾರಂಭ ಮಾಡಿದ್ದೇವೆ. ಪುರಸಭೆಯಿಂದ ನಗರಕ್ಕೆ ೨೪*೭ ಕುಡಿಯುವ ನೀರಿನ ಕಾಮಗಾರಿ ಟೆಂಡರ ಹಂತದಲ್ಲಿ ಅಲ್ಲದೆ ಇನ್ನೂ ಹತ್ತು ಹಲವಾರು ಕಾಮಗಾರಿಗಳು ಪ್ರಾರಂಭವಾಗಲಿವೆ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸದಸ್ಯರಾದ ಸಂದೀಪ ಚೌರ, ಹಾಸೀಂ ಆಳಂದ, ಶರಣಗೌಡ ಪಾಟೀಲ, ಬಸವರಾಜ ಯರನಾಳ, ರಹೀಮ ದುದ್ದನಿ, ಪುರಸಭೆ ಜೆಇ ಅಜರುದ್ದಿನ ನಾಟೀಕಾರ, ಮುಖಂಡರಾದ ಅರವಿಂದ ಹಂಗರಗಿ, ಪ್ರವೀಣ ಕಂಠಿಗೊಂಡ, ಸೈಪನ್ ನಾಟೀಕಾರ, ಮಹ್ಮದಪಟೇಲ ಬಿರಾದಾರ, ಶರಣಪ್ಪ ಸುಲ್ಪಿ, ಸತೀಶಗೌಡ ಬಿರಾದಾರ, ಆನಂದ ಡೋಣೂರ, ಮಾಳಪ್ಪ ಪೂಜಾರಿ, ಜಿಲಾನಿ ನಾಟೀಕಾರ, ಶಬ್ಬೀರಪಟೇಲ ಬಿರಾದಾರ, ಮಹಿಬೂಬ ಆಳಂದ, ಬಂದೇನವಾಜ ಕರ್ಜಗಿ ಸೇರಿದಂತೆ ಅನೇಕರು ಇದ್ದರು.

- Advertisement -

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group