ಬೀದರ – ರೈತರ ಜಮೀನು, ಮಠ, ಮಂದಿರಗಳು ಸ್ಮಾರಕಗಳು ಆಯ್ತು ಈಗ ಕೇಬಲ್‌ಗಳು ಆಸ್ಪತ್ರೆಯ ಮೇಲೂ ವಕ್ಫ ವಕ್ರದೃಷ್ಟಿ ಬಿದ್ದಿದೆ… ಗ್ರಾಮಸ್ಥರೇ ಲಕ್ಷಾಂತರ ಹಣ ದೇಣಿಗೆ ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದ ಜಾಗ ಇಂದು ಏಕಾಏಕಿ ವಕ್ಫಗೆ ಸೇರಿದೆ… ಪ್ರತಿದಿನ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆ ಕೂಡಾ ವಕ್ಫ ಕಬಳಿಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ... ಸರ್ಕಾರಿ ಆಸ್ಪತ್ರೆ ಕೂಡಾ ವಕ್ಫ ಪಾಲು ಕುರಿತು ಒಂದು ಎಕ್ಸಕ್ಲೂಸಿವ್ ವರದಿ ಇಲ್ಲಿದೆ ನೋಡಿ.
ರೈತರ ಜಮೀನು, ಮಠ, ಮಂದಿರ, ಐತಿಹಾಸಿಕ ಸ್ಮಾರಕ ಬಳಿಕ ಸರ್ಕಾರಿ ಆಸ್ಪತ್ರೆ ಮೇಲೆ ವಕ್ಫ ಕಣ್ಣು ಬಿದ್ದಿದೆ.ಗ್ರಾಮದ ಸರ್ವೆ ನಂಬರ್ 64 ರ 4 ಎಕರೆ ಜಮೀನು ವಕ್ಫ ಪಾಲಾಗಿದೆ. ಆಸ್ಪತ್ರೆಗಾಗಿ ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ನೀಡಿದ್ದ ಸರ್ಕಾರಿ ಆಸ್ಪತ್ರೆ ಜಾಗ ಏಕಾಏಕಿ ವಕ್ಫಗೆ ಸೇರ್ಪಡೆಯಾಗಿದೆ. ಹತ್ತಾರು ಹಳ್ಳಿಗಳ ರೋಗಿಗಳಿಗೆ ಸಂಜೀವಿನಿಯಾಗಿದ್ದ ಆಸ್ಪತ್ರೆ ವಕ್ಫ್ ಎಂದು ಪಹಣಿ ಬದಲಾವಣೆಗೆ ಗ್ರಾಮಸ್ಥರು ಕೆಂಡಾ ಮಂಡಲವಾಗಿದ್ದಾರೆ
ಒಂದು ಕಡೆ ಸರ್ಕಾರಿ ಆಸ್ಪತ್ರೆಯ ಜಾಗ ವಕ್ಫ ಎಂದು ಬದಲಾವಣೆ ಮಾಡಿದ ಪಹಣಿ ತೋರಿಸಿ ದಿಕ್ಕಾರ ಕೂಗುತ್ತಿರುವ ಗ್ರಾಮಸ್ಥರ ದೃಶ್ಯಗಳು… ಮತ್ತೊಂದು ಕಡೆ ವಕ್ಫ ಬೋರ್ಡ್ ವಕ್ರದೃಷ್ಟಿಗೆ ಆಸ್ಪತ್ರೆಗೆ ಬಂದ ರೋಗಿಗಳು ಹಿಡಿಶಾಪ ಹಾಕುತ್ತಿರುವ ದೃಶ್ಯಗಳು… ಹೌದು ರೈತರ ಜಮೀನು ಆಯ್ತು, ಮಠ, ಮಂದಿರವಾಯ್ತು, ಐತಿಹಾಸಿಕ ಸ್ಮಾರಕಗಳು ಆಯ್ತು, ಜೊತೆಗೆ ಇಡೀ ಗ್ರಾಮವೇ ವಕ್ಫ ಸೇರಿಸಿದ್ದು ಆಯ್ತು ಆದರೆ ಈಗ ಸರ್ಕಾರಿ ಆಸ್ಪತ್ತೆಯ ಮೇಲೂ ವಕ್ಫ ವಕ್ರದೃಷ್ಟಿ ಬಿದ್ದಿದೆ…. ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ತೋರಣಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವಕ್ಫಗೆ ಸೇರ್ಪಡೆಯಾಗಿದ್ದು ತೋರಣ ಗ್ರಾಮದ ಸರ್ವೆ ನಂಬರ್ 64 ರ 4 ಎಕರೆ 29 ಗುಂಟೆ ಜಾಗ ಈಗ ವಕ್ಫ ಆಸ್ತಿಯಾಗಿದೆ… ಗ್ರಾಮಸ್ಥರೇ ದೇಣಿಗೆ ಸಂಗ್ರಹ ಮಾಡಿ ಆಸ್ಪತ್ರೆಗೆ ನೀಡಿದ್ದ ಜಾಗ ಈಗಾ ವಕ್ಫಗೆ ಸೇರ್ಪಡೆಯಾಗಿದ್ದು ವಕ್ಫ ಆಟಾಟೋಪಕ್ಕೆ ರೋಗಿಗಳು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದಾರೆ… 2013ಕ್ಕೂ ಮೊದಲು ಸರ್ಕಾರಿ ಜಾಗವಾಗಿದ್ದು ಬಳಿಕ ಆಸ್ಪತ್ರೆ ವಕ್ಫಗೆ ಸೆರಿದ್ದು ಎಂದು ಪಹಣಿ ಬದಲಾವಣೆಯಾಗಿದ್ದು ಗಡಿ ಜಿಲ್ಲೆಯಲ್ಲಿ ಸಿಕ್ಕ ಸಿಕ್ಕ ಆಸ್ತಿಗೆ ವಕ್ಫ ಬೇಲಿ ಹಾಕುತ್ತಿದೆ… ಈ ಕೂಡಲೇ ಪಹಣಿ ಬದಲಾವಣೆ ಮಾಡಿ ಇಲ್ಲವಾದ್ರೆ ಸರ್ಕಾರ ಹಾಗೂ ವಕ್ಫ ಬೋರ್ಡ್ ವಿರುದ್ಧ ಉಗ್ರವಾದ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ…
ಬೀದರ್ ಜಿಲ್ಲೆಯಾದ್ಯಂತ ಸುಮಾರು 13 ಸಾವಿರ ಎಕರೆ ಜಮೀನು ವಕ್ಫಗೆ ಸೇರ್ಪಡೆಯಾಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ… ಅದ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಆಸ್ಪತ್ರೆಯ ಜಾಗ ಈಗಾ ವಕ್ಫ ಆಸ್ತಿಯಾಗಿದೆ… ಪ್ರತಿದಿನ ಆಸ್ಪತ್ರೆಗೆ ಬರುತ್ತಿದ್ದ ಮುದೋಳ, ಚಾಂದೋರಿ, ಕೊಟಿಗ್ಯಾಳ, ಸೇರಿದಂತೆ ಹತ್ತಾರು ಹಳ್ಳಿಯ ರೋಗಿಗಳಿಗೆ ವಕ್ಫ ಶಾಕ್ ನೀಡಿದೆ… ಹಳ್ಳಿ ಜನರೇ ದೇಣಿಗೆ ಸಂಗ್ರಹ ಮಾಡಿ ಸಾಮಾಜಿಕ ಸಂದೇಶ ನೀಡಿದ್ದು ಆದ್ರೆ ಇಂದು ಈ ಜಾಗವನ್ನ ಏಕಾಏಕಿ ವಕ್ಫ ಸೇರಿಸಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ… 2013 ರಲ್ಲಿ ಅಂಧಿನ ಜಿಲ್ಲಾಧಿಕಾರಿ ಡಾ. ಪಿಜಿ ಜಾಫರ್ ಈ ಸರ್ಕಾರಿ ಆಸ್ಪತ್ರೆ ಜಾಗವನ್ನು ವಕ್ಫಗೆ ಸೇರಿಸಿ ಧರ್ಮಾಭಿಮಾನ ಮೆರೆದಿದ್ದಾರೆ… ಈಗಾಗಲೇ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ 960ಕ್ಕೂ ಹೆಚ್ಚು ಎಕರೆ ರೈತರ ಜಮೀನು ವಕ್ಪ್ ಹೆಸರಿದ್ದು ಧರ್ಮಾಪುರ ಗ್ರಾಮಕ್ಕೆ ಗ್ರಾಮವೇ ವಕ್ಫ್ ಆಸ್ತಿ ಎಂದು ಪಹಣಿ ಬದಲಾವಣೆ ಮಾಡಲಾಗಿದೆ… ಇನ್ನು ಐತಿಹಾಸಿಕ ಸ್ಮಾರಕಗಳಾದ ಅಷ್ಟೂರು ಗುಂಬಜ್ ಗಳು, ಬೀದರ್ ಕೋಟೆಯ ಸೋಲಾ ಕಂಬ ಸೇರಿದಂತೆ ಹಲವಾರು ಸ್ಮಾರಕಗಳು ವಕ್ಫಗೆ ಸೇರ್ಪಡೆಯಾಗಿದ್ದು ಬಾರಿ ಆಕ್ರೋಶ ಕ್ಕೆ ಕಾರಣವಾಗಿದೆ… ನಾನು ಈ ಆಸ್ಪತ್ರೆಗೆ ತೋರಿಸಲು ಹತ್ತಾರು ವರ್ಷಗಳಿಂದ ಬರುತ್ತೇನೆ ಆದ್ರೆ ಈಗ ಈ ಜಾಗ ವಕ್ಫಗೆ ಸೇರಿದೆ ಅಂಥಾ ಹೇಳುತ್ತಿದ್ದಾರೆ… ಗ್ರಾಮದ ಜನರೇ ದೇಣಿಗೆ ನೀಡಿ ನಿರ್ಮಾಣ ಮಾಡಿದ ಸರ್ಕಾರಿ ಆಸ್ಪತ್ರೆ ಈಗ ವಕ್ಫಗೆ ಸೇರ್ಪಡೆಯಾಗಿದ್ದು ದುರ್ದೈವದ ಸಂಗತಿಯಾಗಿದೆ ಎಂದು ವಕ್ಫ ವಿರುದ್ಧ ಕಿಡಿಕಾರಿದ್ರು ರೋಗಿಗಳು…
ಈ ವಕ್ಫ ಬೋರ್ಡ್ ಸ್ಪೀಡ್ ನೋಡಿದ್ರೆ ಒಂದು ದಿನ ಇಡೀ ಗಡಿ ಜಿಲ್ಲೆ ಬೀದರ್ ವಕ್ ಆಸ್ತಿ ಎಂದು ದಾಖಲೆಗಳಲ್ಲಿ ಬದಲಾದರೂ ಆಶ್ಚರ್ಯವಿಲ್ಲ… ಎಲ್ಲಾ ಜಾಗವನ್ನು ಕಬಳಿಸುತ್ತಿರುವ ವಕ್ಫ ಬೋರ್ಡ್ ವಿರುದ್ಧ ರೈತರು, ಜನರು ದಂಗೆ ಹೇಳುವ ಮುಂಚೆ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚರಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.
ವರದಿ : ನಂದಕುಮಾರ ಕರಂಜೆ, ಬೀದರ