spot_img
spot_img

ಬೀದರ್ ನಲ್ಲಿ ಧಾರಾಕಾರ ಮಳೆ; ಸಂಕಷ್ಟಕ್ಕೀಡಾದ ರೈತ

Must Read

ಬೀದರ – ಎರಡು ದಿನಗಳಿಂದ ಬೀದರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲಾದ್ಯಂತ ಸಾಕಷ್ಟು ಅವಾಂತರಗಳು ಉಂಟಾಗಿದ್ದು ಅನ್ನದಾತ ರೈತ ತೊಂದರೆಗೀಡಾಗಿದ್ದಾನೆ.

ಬೀದರ್ ಜಿಲ್ಲಾದ್ಯಂತ ಮಳೆಗೆ ಸೋಯಾ ಹಾಗು ಕಟಾವಿಗೆ ಬಂದಿದ್ದ ಕಬ್ಬು ಸಂಪೂರ್ಣ ನೆಲಸಮವಾಗಿದೆ.ಬೀದರ್ ಜಿಲ್ಲೆಯ ಕಮಲನಗರ  ತಾಲೂಕಿನ ಡೋಣಗೌಂವ ವಾಡಿ ಗ್ರಾಮದಲ್ಲಿ ಕಬ್ಬು ಧರೆಗೆ ಉರಳಿದೆ.

ದತ್ತಾ ಚಂದ್ರಕಾಂತ ರಡ್ಡಿ ರೈತ ತನ್ನ ಬೆಳೆ ಹಾಳಾಗಿದ್ದನ್ನು ಕಂಡು ತಲೆ ಮೇಲೆ ಕೈಯಿಟ್ಟು ಇಟ್ಟುಕೊಂಡು ಕಣ್ಣಿರು ಹಾಕಿದ್ದಾನೆ.

ಹತ್ತು ಎಕರೆ ಕಟಾವಿಗೆ ಬಂದಿದ್ದ ಕಬ್ಬು ಸಂಪೂರ್ಣ ನೆಲಸಮವಾಗಿದ್ದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಭಾಲ್ಕಿಯ ಈಶ್ವರ ಖಂಡ್ರೆಯವರ ಕ್ಷೇತ್ರದಲ್ಲಿಯೂ ಕೂಡ ಮಳೆ ಯಿಂದ ಹಲವು ರೈತರು ಸಂಕಷ್ಟಕ್ಕೊಳಗಾಗಿದ್ದು ಬೆಳೆದು ನಿಂತಿದ್ದ ಸೋಯಾ ಮಳೆಯಲ್ಲಿ ಮುಳುಗಿ ಹೋಗಿದೆ. ಆದರೆ ಕ್ಷೇತ್ರದ ಶಾಸಕರು ಭಾರತ ಜೋಡೊ ಯಾತ್ರೆ ಯಲ್ಲಿ ಬಿಜಿಯಾಗಿದ್ದಾರೆ.

ರೈತನ ಕುರಿತಂತೆ ಹಲವು ರೀತಿಯಲ್ಲಿ ಉದ್ಧಾರದ ಮಾತುಗಳನ್ನಾಡುವ ರಾಜಕಾರಣಿಗಳು ಮಳೆಗೆ ಬೆಳೆ ಹಾನಿ ಮಾಡಿಕೊಂಡ ರೈತನತ್ತ ತಿರುಗಿ ಕೂಡ ನೋಡದೆ ಇರುವುದು ಖಂಡನೀಯ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!