spot_img
spot_img

“ಸಿಂದಗಿ ವಲಯದ ನಲಿ-ಕಲಿ ಶಿಕ್ಷಕರಿಗೆ ಗೂಗಲ್ ಮೀಟ್ ಮೂಲಕ ತರಬೇತಿ”

Must Read

- Advertisement -

ಸಿಂದಗಿ: ನಲಿ- ಕಲಿ ಶಿಕ್ಷಣ ಪದ್ದತಿಯಲ್ಲಿ ವಿದ್ಯಾರ್ಥಿಗಳಿಗೆ ಹೊಸತನದ ಕಾರ್ಡ ಮೂಲಕ ಆಂಗ್ಲ ಭಾಷ ಶಿಕ್ಷಣ ಕೊಡಲಾಗುವದು ಎಂದು ತಾಲೂಕಿನ ಕೊಕಟನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಭಾಷೆ ಬೋಧಿಸುವ ಶಿಕ್ಷಕಿ ರೇಖಾ ಬಿಜ್ಜರಗಿ ಹೇಳಿದರು.

ಸಿಂದಗಿ ವಲಯದ ನಲಿ-ಕಲಿ ಶಿಕ್ಷಕರಿಗೆ ಗೂಗಲ್ ಮೀಟ್ ಮೂಲಕ ಗುರುವಾರ ನಲಿ -ಕಲಿ ಆಂಗ್ಲ ಭಾಷ ತರಬೇತಿ ನೀಡುವ ಮೂಲಕ ಅವರು ತಮ್ಮ ಮನೆಯಲ್ಲೆ ಇರುವ ಮಕ್ಕಳನ್ನು ಬಳಿಸಿಕೊಂಡು ಆಂಗ್ಲ ಭಾಷೆ ಸಂಪೂರ್ಣ ದೈಹಿಕ ಚಟುವಟಿಕೆ ಮೂಲಕ ವಿದ್ಯಾರ್ಥಿಗಳ ದೇಹದ ಭಾಗಗಳನ್ನು ಗುರುತಿಸುವ ಮೂಲಕ ಉತ್ತಮ ತರಬೇತಿ ನೀಡಿದರು,
ಈ ಪ್ರಕಾರವಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದಾಗ ಕಲಿಕೆಗೆ ಪೂರಕವಾಗುತ್ತದೆ ಎಂದರು.

ಯಲಗೋಡ ವಲಯದ ಸಮೂಹ ಸಂಪನ್ಮಲ ವ್ಯಕ್ತಿ (ಸಿ ಆರ್ ಪಿ) ವೀರೇಶ ಕರಕಳ್ಳಿಮಠ ಗೂಗಲ್ ಮೀಟ್ ತರಬೇತಿ ಪಡೆದ ಶಿಕ್ಷಕರು ತಮ್ಮ ನಲಿ- ಕಲಿ ತರಗತಿ ಕೋಣೆಯಲ್ಲಿ ಆಂಗ್ಲ ಭಾಷೆ ಅವಧಿಯಲ್ಲಿ ಮಾತ್ರ ಆಂಗ್ಲ ಭಾಷೆ ಬೋಧಿಸದೆ ಉಳಿದ ವಿಷಯಗಳಲ್ಲಿಯೂ ಆಂಗ್ಲ ಭಾಷೆ ಬಳಕೆ ಮಾಡುತ್ತಾ ಆಂಗ್ಲ ಭಾಷೆಯ ವಾತಾವರಣ ನಿರ್ಮಾಣ ಮಾಡಿದಾಗ ವಿದ್ಯಾರ್ಥಿಗಳು ಕಲಿಕೆಯಲ್ಲಿ ಚಟುವಟಿಕೆಯಿಂದ ಭಾಗವಹಿಸುವರು , ಜೊತೆಗೆ ನಲಿ- ಕಲಿ ತರಗತಿ ಕೋಣೆಯಲ್ಲಿ ಶಿಕ್ಷಕರು ತಂತ್ರಜ್ಞಾನದೊಂದಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ನಲಿ-ಕಲಿ ಶಿಕ್ಷಣ ಉತ್ತಮವಾಗಿದೆ.

- Advertisement -

ನಲಿ-ಕಲಿ ಶಿಕ್ಷಕರು ಪೂರ್ವ ಸಿದ್ದತೆ ಮಾಡಿ ಕೊಂಡು,ಸ್ಥಳೀಯ ಕಚ್ಚಾ ವಸ್ತುಗಳು ಬಳಸಿಕೊಂಡು ವಿಷಯದ ಅನುಗುಣವಾಗಿ ಮಾಡಲ್ ಗಳು ತಯಾರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಕನ್ನೋಳ್ಳಿ ವಲಯದ ಸಿ ಆರ್ ಪಿ ಭೀಮನಗೌಡ ಬಿರಾದಾರ ನಲಿ- ಕಲಿ ಶಿಕ್ಷಕರಿಗೆ ಹಲವು ಸಲಹೆ ಕೊಡುವ ಮೂಲಕ ಶಿಕ್ಷಕರು ಲಾಕ್ ಡೌನ್ ಪ್ರಯುಕ್ತ ಶಿಕ್ಷಕರು ತಮ್ಮ ಮನೆಯಲ್ಲಿ ಆರೋಗ್ಯವಂತರಾಗಿ ಇರುವ ಮೂಲಕ ನಲಿ-ಕಲಿ ಪದ್ದತಿ ಶಿಕ್ಷಣಕ್ಕೆ ಬೇಕಾಗುವ ವಸ್ತುಗಳು ತಯಾರ ಮಾಡಬೇಕು ಎಂದರು.

ಸಿಂದಗಿ ವಲಯದ ಶಿಕ್ಷಣ ಸಂಯೋಜಕ ಆನಂದ ಮಾಡಗಿ ಹಾಗೂ ತಾಲೂಕಾ ನಲಿ-ಕಲಿ ನೋಡಲ ಅಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ ರೇಬಿನಾಳ , ಮಾರ್ಗದರ್ಶ ನೀಡಿದರು.

- Advertisement -

ಗೂಗಲ್ ಮೀಟ್ ತರಬೇತಿಯಲ್ಲಿ ಸಿಂದಗಿ ವಲಯದ 58 ಶಿಕ್ಷಕರು ಭಾಗವಹಿಸಿದರು, ಕೊನೆಗೆ ಶಿಕ್ಷಕ ಬಸವರಾಜ ಅಗಸರ ಅಭಿನಂದಿಸಿದರು,

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group