ಕಲ್ಲೋಳಿ: ವಿವಿಧ ಬೆಳೆಗಳ ತರಬೇತಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ

Must Read

ಮೂಡಲಗಿ: ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಸಂಶೋಧನಾ ಕೇಂದ್ರ ಕಲ್ಲೋಳಿ ಇವುಗಳ ಸಂಯುಕ್ತಾಶ್ರಯಲ್ಲಿ ಗೋವಿನಜೋಳ ಮತ್ತು ಸೋಯಾಅವರೆ ಕ್ಷೇತ್ರೋತ್ಸವ ಹಾಗೂ ತರಬೇತಿ ಕಾರ್ಯಕ್ರಮ ಸೋಮವಾರ ಆ 30 ರಂದು ಬೆಳಿಗ್ಗೆ 9.00 ಗಂಟೆಗೆ ಕಲ್ಲೋಳಿ ಪಟ್ಟಣದ ಬೀಜ ಸಂಸ್ಕರಣಾ ಘಟಕ, ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆಯಲಿದೆ.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಮುಖ್ಯತಿಥಿಗಳಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಗಮಿಸಲಿದ್ದು, ಅತಿಥಿಗಳಾಗಿ ಕೃ.ವಿ.ವಿ ವ್ಯವಸ್ಥಾಪಕ ಮಂಡಳಿ ಸದಸ್ಯ ಯಲ್ಲನಗೌಡ ಪಾಟೀಲ, ಎಲ್. ಎಸ್. ಅಜಗನ್ನವರ, ಮಲ್ಲೇಶ ಪಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಶಶಿಮೌಳಿ ಕುಲಕುರ್ಣಿ ವಹಿಸಲಿದ್ದಾರೆ.

ತರಬೇತಿದಾರರಾಗಿ ಡಾ. ಸಂಜಯ ಪಾಟೀಲ, ಡಾ. ಪಿ.ಎಸ್. ತಿಪ್ಪನ್ನವರ, ಡಾ. ಬಿ.ಕೆ. ಲೋಕೇಶ, ಡಾ. ಮಹೇಶ ಭಾವಿಕಟ್ಟಿ, ಡಾ. ಎಸ್. ಸಿ ತಾಳೇಕಾರ, ಡಾ. ಮಹಾಂತೇಶ ಮುದೇನೂರ, ಡಾ. ಜೆ.ಎಸ್. ಹಿಳ್ಳಿ ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಅಧೀಕ್ಷಕ ಡಾ. ಶಶಿಧರ ಎನ್ ತಿಳಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸಿದ್ದಾರೆ.

Latest News

ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ

ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ...

More Articles Like This

error: Content is protected !!
Join WhatsApp Group