spot_img
spot_img

ಸಕಾರಾತ್ಮಕ ಜೀವನಶೈಲಿ ಹಾಗೂ ಫಿಟ್ ಇಂಡಿಯಾ ಕುರಿತು ತರಬೇತಿ ಕಾರ್ಯಕ್ರಮ

Must Read

- Advertisement -

ಮೂಡಲಗಿ: ಯುವಕರು ಪ್ರತಿನಿತ್ಯ ಸುಂದರ ಜೀವನ ಕಳೆಯಬೇಕಾದರೆ ದಿನನಿತ್ಯ ಜೀವನದಲ್ಲಿ ಧ್ಯಾನ ಯೋಗ ಪ್ರಾಣಾಯಾಮ ಮಾಡುವುದು ಅತಿ ಅವಶ್ಯಕವಾಗಿದೆ ಎಂದು ಮೂಡಲಗಿ ಪಿಎಸ್ಐ ಹಾಲಪ್ಪ ಬಾಲದಂಡಿ ಹೇಳಿದರು.

ಅವರು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರ ನೆಹರು ಯುವ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಹಾಗೂ ಪೂರ್ವಿ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘ ವಡೇರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನಿಮಿತ್ತವಾಗಿ ಯುವಕರ ಕ್ಷೇಮ ಸಕಾರಾತ್ಮಕ ಜೀವನಶೈಲಿ ಹಾಗೂ ಫಿಟ್ ಇಂಡಿಯಾ ಕುರಿತು ಯುವಕರಿಗೆ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇವತ್ತಿನ ಯುವಜನತೆ ಗುಟ್ಕಾ, ಮಟ್ಕಾ ದಂಥ ದುಶ್ಚಟಗಳಿಗೆ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ದುಶ್ಚಟಗಳಿಗೆ ದಾಸರಾಗದಂತೆ ಜನ ಜಾಗೃತಿ ಮಾಡುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದರು.

- Advertisement -

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ಯುವ ಜನಾಂಗ ನಂಬಿಕೆ ಶ್ರದ್ಧೆ ಆತ್ಮವಿಶ್ವಾಸ ದೃಢ ಸಂಕಲ್ಪದೊಂದಿಗೆ ರಾಷ್ಟ್ರ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದು ಯುವ ಸಮೂಹಕ್ಕೆ ಕರೆ ನೀಡಿದರು.

ಸಮಾಜಶಾಸ್ತ್ರದ ಉಪನ್ಯಾಸಕ ಡಾ. ಎ ವಿ ಮೆಳವಂಕಿ ಮಾತನಾಡಿ, ಸದೃಢ ಭಾರತಕ್ಕಾಗಿ ಸದೃಢ ಯುವಕರು ಬೇಕು ಅದಕ್ಕಾಗಿ ಕೇಂದ್ರ ಸರ್ಕಾರ ಹಲವಾರು ತರಬೇತಿಗಳನ್ನು ಹಾಗೂ ಯೋಜನೆಗಳನ್ನು ಜಾರಿಗೆ ತರುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಎಸ್ ಐ ಬಾಗೋಜಿ ಮಾತನಾಡಿ, ಬೆಳಗಾವಿ ನೆಹರು ಯುವ ಕೇಂದ್ರದ ಸಂಘಟನೆಯವರು ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ನಿಜವಾಗಲೂ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಪರಸಪ್ಪ ಸಾರಾಪುರ, ಉಪನ್ಯಾಸಕರಾದ ಎಂ ಜಿ ದೇವಡಿ, ಕೆ ಬಿ ಬೆಳಗಲಿ, ಶ್ರೀಯುತ ಜೋಡಟ್ಟಿ, ಜಿಲ್ಲಾ ಯುವ ಪ್ರಶಸ್ತಿ ವಿಜೇತ ರಾಘವೇಂದ್ರ ದೊಡ್ಡವಾಡ, ಶಾಂಭವಿ ದೇವರುಸಿ ಹಾಗೂ ಸಂಘಟಕರು ಮುಂತಾದವರು ಉಪಸ್ಥಿತರಿದ್ದರು. ಸೌಜನ್ಯ ಡೊಳ್ಳಿ ಸ್ವಾಗತಿಸಿದರು. ಶಿಲ್ಪಾ ಕೌಜಲಗಿ ನಿರೂಪಿಸಿದರು. ಪಾಂಡುರಂಗ ಧರ್ಮಟ್ಟಿ ವಂದಿಸಿದರು.

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group