spot_img
spot_img

ನೀರಿನ ಗುಣಮಟ್ಟದ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಾಗಾರ

Must Read

ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿಕ್ಕೋಡಿ ವಿಭಾಗ,   ಇವರ ಸಹಯೋಗದಲ್ಲಿ ಗುರುವಾರ  ದಿನಾಂಕ 25/8/22 ರಂದು ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಚಿಕ್ಕೋಡಿ ತಾಲೂಕಾ ಪಂಚಾಯತ್ ಯಲ್ಲಿ   ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೇನ್, ಪಂಚಾಯ್ತಿಯ ಅಭಿವೃಧ್ದಿ ಅಧಿಕಾರಿಗಳು,ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, FTK ,ನೀರಿನ ಗುಣಮಟ್ಟ ಪರೀಕ್ಷೆ ಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯನಿರ್ವಾಹಕ ಅಭಿಯಂತರಾದ  ಆನಂದ ಬಣಗಾರ ಮಾತನಾಡಿ,ಜೆ.ಜೆ.ಯಂ. ಯೋಜನೆಯ ಉದ್ದೇಶಗಳು, ನೀರಿನ ಗುಣಮಟ್ಟ ಪರೀಕ್ಷೆ ಮಾಡುವ ಅಗತ್ಯತೆ ಬಗ್ಗೆ , ನೀರಿನ ಮಿತ ಬಳಕೆ ಬಗ್ಗೆ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಬಗ್ಗೆ ವಿವರವಾಗಿ  ತಿಳಿಸಿದರು.

ಜಿಲ್ಲಾ ಯೋಜನಾ ವ್ಯವಸ್ಥಪಕರಾದ ದೀಪಕ ಕಾಂಬಳೆ ಮಾತನಾಡಿ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ , ವಾಟರ್ ಮೇನ್, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರು,FTK Kit ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಯ ತರಬೇತಿ ಪಡೆದುಕೊಂಡು ತಮ್ಮ ತಮ್ಮ ಗ್ರಾಮ ಪಂಚಾಯತಯಲ್ಲಿ  ,FTK Kit ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಯ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರಾದ   ಆನಂದ ಬಣಗಾರ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ  ವಿಜಯಕುಮಾರ್ ಸಂಗಪ್ಪಗೋಳ, ಜಿಲ್ಲಾ ಯೋಜನಾ ವ್ಯವಸ್ಥಪಕರಾದ  ದೀಪಕ ಕಾಂಬಳೆ  ಪ್ರಯೋಗಾಲಯ ತಜ್ಞರಾದ ಮಹಾಂತೇಶ ಅಂಬಿ , ಪ್ರವೀಣ ಮಾದರ  ಹಾಗೂ ಭೂ ವಿಜ್ಞಾನ ಅಮೀತ ಬಳಿಗಾರ ಮತ್ತು ISRA ಸಮುದಾಯ ಸಂಘಟಕರಾದ  ಮಹೇಶ್ ಹೊಸಮನಿ ಹಾಗೂ  ಪ್ರಕಾಶ ಕರೋಶಿ ಹಾಗೂ ಚಿಕ್ಕೋಡಿ ತಾಲೂಕಿನ  ಪಂಚಾಯ್ತಿಯ ಅಭಿವೃಧ್ದಿ ಅಧಿಕಾರಿಗಳು, ನೀರು ನೈರ್ಮಲ್ಯ ಸಮಿತಿಯ ಸದ್ಯಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!