ಶಿಕ್ಷಕ ಆರ್.ಆರ್.ಪಾಟೀಲರಿಗೆ ಗ್ರಾಮಸ್ಥರಿಂದ ಆತ್ಮೀಯ ಸನ್ಮಾನ
ಸಿಂದಗಿ; ಸರಕಾರಿ ಸೇವೆಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಸಹಜ ಪ್ರಕ್ರಿಯೆ ಆದರೆ ಈ ಸೇವೆಯಲ್ಲಿ ಅವರು ಮಾಡಿದ ಸಾಧನೆಗಳು ಅಮೋಘವಾದದ್ದು ಅಂತೆಯೇ ಆರ್.ಆರ್.ಪಾಟೀಲ ಶಿಕ್ಷಕರು ಅಖಂಡ ೨೩ ವರ್ಷ ಇದೇ ಗ್ರಾಮದ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಜನಾನುರಾಗಿದ್ದಾರೆ ಎಂದು ಎಸ್.ಡಿಎಂಸಿ ಸದಸ್ಯ ಸಿದ್ದನಗೌಡ ಅಂಬಳನೂರ ಹೇಳಿದರು.
ತಾಲೂಕಿನ ಮಾಡಬಾಳ ಗ್ರಾಮದ ಸರಕಾರಿ ಕನ್ನಡ ಮಾದರಿ ಶಾಲೆಯ ಶಿಕ್ಷಕ ಆರ್.ಆರ್.ಪಾಟೀಲರಿಗೆ ಗ್ರಾಮಸ್ಥರಿಂದ ನಡೆದ ಆತ್ಮೀಯ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಒಬ್ಬ ಒಳ್ಳೆಯ ಸರಳತೆಯ ಶಿಕ್ಷಕರು ಗ್ರಾಮದ ಎಲ್ಲ ಜನರಿಗೆ ಎಲ್ಲ ರೀತಿಯ ಮಾಹಿತಿ ನೀಡುವ ಮೂಲಕ ಮಕ್ಕಳಿಗೆ ಮಾರ್ಗದರ್ಶಕರಾಗಿ ಗುರುವಾಗಿ ಸೇವೆ ಸಲ್ಲಿಸಿದ ಶಿಕ್ಷಕ ಆರ್.ಆರ್.ಪಾಟೀಲ ವರ್ಗಾವಣೆ ಆಘಾತಕಾರಿ ಬೆಳವಣಿಗೆಯಾಗಿದೆ ಎಂದರು.
ಇನ್ನೋರ್ವ ಸದಸ್ಯ ಭೀಮಾಶಂಕರ ಅಗಸರ ಮಾತನಾಡಿ, ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಸರಳತೆಯಿಂದ ಎಲ್ಲರೊಂದಿಗೆ ಬೆರೆತು ಶಾಲೆಯಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಿದ್ದಾರೆ ಇಂತವರು ವರ್ಗಾವಣೆಗೊಂಡಿದ್ದು ಏನೋ ಕಳೆದುಕೊಂಡ ಭಾವಣೆ ರೂಪುಗೊಂಡಿದೆ ಅವರು ಬೇರೆ ಊರಲ್ಲಿಯು ಸಹ ಜ್ಞಾನದ ದೀಪ ಬೆಳಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಆರ್.ಆರ್.ಪಾಟೀಲ ಮಾತನಾಡಿ, ೨೩ ವರ್ಷಗಳ ಕಾಲ ಇದು ನನ್ನೂರು, ನನ್ನ ಜನ, ನನ್ನಶಾಲೆ, ನನ್ನ ವಿದ್ಯಾರ್ಥಿಗಳು ನೀಡಿದ ಸಹಕಾರ ನಾನೆಂದು ಮರೆಯಲಾರೆ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಸಿರ‍್ಸಿ ಚಂದ್ರಶೇಖರ ಸಿರಕನಳ್ಳಿ, ಸಹಶಿಕ್ಷಕ ನಂದರಗಿ, ಶಿಕ್ಷಕವರ್ಗ ಹಾಗೂ ಎಸ್.ಡಿ.ಎಂಸಿ ಸದಸ್ಯರು ಇದ್ದರು ಶಿಕ್ಷಕಿ ಸ್ಪೂರ್ತಿ ಸ್ವಾಗತಿಸಿದರು. ಶಿಕ್ಷಕಿ ಅನುಷಾ ನಿರೂಪಿಸಿದರು, ಶಿಕ್ಷಕ ಸಂಗು ಮಲ್ಲೇದ ವಂದಿಸಿದರು.