spot_img
spot_img

 ಡಾ.ರಂಜನ್ ಪೇಜಾವರ ರವರ ಅನುವಾದಿತ ಕಾದಂಬರಿ ‘ಸ್ವರ್ಗ ನಾ ಕಂಡಂತೆ’ ಲೋಕಾರ್ಪಣೆ 

Must Read

spot_img
- Advertisement -

ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ  ಡಾ. ರಂಜನ್ ಪೇಜಾವರ ಅವರ ಮೊತ್ತಮೊದಲ ಕಾದಂಬರಿ ʼದ ಹೆವೆನ್ ಆಸ್ ಐ ಸಾʼ ನ ಕನ್ನಡ ಅನುವಾದ ʼಸ್ವರ್ಗ ನಾ ಕಂಡಂತೆʼ,   , ಬೆಂಗಳೂರಿನ ನೃಪತುಂಗ ರಸ್ತೆಯ ʼಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣʼದಲ್ಲಿ ನಿಮ್ಹಾನ್ಸ್ ನ ನಿವೃತ್ತ ಹಿರಿಯ ಪ್ರಾಧ್ಯಾಪಕ, ಖ್ಯಾತ ಮನೋವೈದ್ಯ ಹಾಗೂ ಲೇಖಕ ಡಾ.ಸಿ. ಆರ್.ಚಂದ್ರಶೇಖರ್  ಮತ್ತು ʼ ಥಟ್ ಅಂತ ಹೇಳಿʼ ಖ್ಯಾತಿಯ ಸುಪ್ರಸಿದ್ಧ ಕ್ವಿಜ್ ಮಾಸ್ಟರ್, ಟವಿ ನಿರೂಪಕ ಹಾಗೂ ಲೇಖಕ ಡಾ. ನಾ.ಸೋಮೇಶ್ವರರು ಮುಖ್ಯ ಅತಿಥಿಗಳಾಗಿ ಲೋಕಾರ್ಪಣೆಗೊಳಿಸಿದರು.

ಸ್ನೇಹ ಬುಕ್ ಹೌಸ್ ನ ಪ್ರಕಾಶಕ ಪರಶಿವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಟಿವಿ ಮಾಧ್ಯಮಕ್ಕೆ ಚಿರಪರಿಚಿತರಾದ ಖ್ಯಾತ ಉದ್ಯಮಿ,  ಬರಹಗಾರ ಹಾಗೂ ಸಮಾಜ ಸಂಘಟಕ ಸುಧಾಕರ ಪೇಜಾವರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

ಹಲವು ಅಂತಾರಾಷ್ಟ್ರೀಯ ಮಟ್ಟದ ವ್ಯದ್ಯಕೀಯ ಜರ್ನಲ್ ಗಳಿಗೆ ಪ್ರಬಂಧಗಳನ್ನು ಮತ್ತು ಹಲವು ವೈದ್ಯಕೀಯ ಪಠ್ಯಪುಸ್ತಕಗಳನ್ನು ಬರೆದು ಖ್ಯಾತರಾಗಿರುವ ಮೂಲತಃ ಮಂಗಳೂರು ಮತ್ತು ಪೇಜಾವರದವರಾದ ವಿಶ್ವ ವಿಖ್ಯಾತ ನವಜಾತ ಶಿಶು ತಜ್ಞ ಡಾ.ರಂಜನ್ ಪೇಜಾವರ ಮೊತ್ತಮೊದಲ ಇಂಗ್ಲಿಷ್ ಕಾದಂಬರಿ ʼದ ಹೆವೆನ್ ಆಸ್ ಐ ಸಾʼ . ಕೆಲಕಾಲ ಮರಣಿಸಿ ಸ್ವರ್ಗಕ್ಕೆ ಹೋಗಿ ಅಲ್ಲಿ ತಾನು ಕಂಡ ನಿರೀಕ್ಷಿತ ಮತ್ತು ಅನಿರೀಕ್ಷಿತ ವ್ಯಕ್ತಿಗಳಿಂದ , ಅವರ ಜೀವನಗಾಥೆಯಿಂದ; ಕಥಾನಾಯಕನು ಅಚ್ಚರಿಗೊಳ್ಳುವುದು, ಒಳಿತು ಕೆಡುಕು, ಪಾಪ ಪುಣ್ಯಗಳ ಕುರಿತು ಮಂಥನಕ್ಕೆ ತೊಡಗುವುದು ಈ ಕಾದಂಬರಿಯ ವಸ್ತು.

ಇಂಗ್ಲಿಷ್ ಹಾಗೂ ಕನ್ನಡದಲ್ಲಿ ತಮ್ಮ ಬ್ಲಾಗ್ ಮತ್ತು  ಪತ್ರಿಕೆಗಳಲ್ಲಿ ಬೆಳಕು ಕಂಡ ಬಿಡಿ ಲೇಖನಗಳು, ಕವಿತೆ/ಕಥೆಗಳಿಂದ ನಾಡಿನ ಓದುಗರಿಗೆ ಈಗಾಗಲೇ ಚಿರಪರಿಚಿತರಾಗಿರುವ ಮೂಲತಃ ಕಾಸರಗೋಡಿನವರಾದ ಸತ್ಯಕಾಮ ಶರ್ಮಾ ಅವರು ʼಕನ್ನಡದ್ದೇ ಕೃತಿʼ ಎಂಬಂತೆ ಇದನ್ನು ಅನುವಾದಿಸಿರುತ್ತಾರೆ.

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group