ಸಿಂದಗಿ- ಪಟ್ಟಣದಲ್ಲಿರುವ ಹಲವಾರು ಮಹಾವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರಬೇಕಾದರೆ ಸಾರಿಗೆ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆ ಹಾಗೂ ಆಟೋಗಳ ಮೂಲಕ ಬಂದು ಹೋಗುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿರುವ ಬಗ್ಗೆ ಕಳೆದ ವಾರ ಸಾರಿಗೆ ಮತ್ತು ಮುಜರಾಯಿ ಇಲಾಖೆ ಹಾಗೂ ಕ.ಕ.ರ ಸಾ.ನಿ ಅಧ್ಯಕ್ಷ ಸಚಿವ ರಾಮಲಿಂಗಾ ರೆಡ್ಡಿರವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು ಅದನ್ನು ಒಂದೇ ವಾರದಲ್ಲಿ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟು ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಹಮ್ಮಿಕೊಂಡ ನಗರ ಸಾರಿಗೆ ಬಸ್ ಸಂಚಾರ ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಗರ ಸಾರಿಗೆ ಬಸ್ಸಿಗೆ ಚಾಲನೆ ನೀಡಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಸಿಂದಗಿ ಪಟ್ಟಣದ ಮಹಾ ಜನತೆಗೆ ನಗರ ಸಾರಿಗೆ ವ್ಯವಸ್ಥೆ ಅತ್ಯವಶ್ಯಕತೆಯಿತ್ತು ಅದನ್ನು ಕಳೆದ ವಾರ ಪಟ್ಟಣಕ್ಕೆ ಆಗಮಿಸಿದ ಸಾರಿಗೆ ಸಚಿವರಲ್ಲಿ ಮಹಾಜನತೆಯ ಪರವಾಗಿ ಮನವಿ ಮಾಡಿಕೊಳ್ಳಲಾಗಿತ್ತು ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ನೀಡಿದ ಸೂಚಿನೆಯಂತೆ ಇಂದು ನೇರವೇರಿಸಲಾಗಿದೆ. ಬಸ್ ನಿಲ್ದಾಣ ಅಭಿವೃದ್ಧಿಗೆ ರೂ ೧ ಕೋಟಿ, ಗೋಲಗೇರಿ ಗ್ರಾಮ ಬಸ್ ನಿಲ್ದಾಣಕ್ಕೆ ರೂ ೧ ಕೋಟಿ ಸೇರಿದಂತೆ ಹಲವಾರು ಬೇಡಿಕೆ ಇಡಲಾಗಿತ್ತು ಅದರಲ್ಲಿ ಗೋಲಗೇರಿ ಬಸ್ ನಿಲ್ದಾಣಕ್ಕೆ ರೂ ೧ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿಸಿದರು.
ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಕುರಬರ ಮಾತನಾಡಿ, ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನಿಂದ ಪಿಇಎಸ್ ಕಾಲೇಜಿನವರೆಗೆ ಹಾಗೂ ಸರಕಾರಿ ಪ್ರಥಮ ಧರ್ಜೆ ಕಾಲೇಜಿನವರೆಗೆ ನಗರ ಸಾರಿಗೆ ಸಂಚಾರ ಮಾಡುತ್ತೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಶಿವು ಹತ್ತಿ, ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಉಮೇಶ ಜೋಗುರ, ಚಂದ್ರಶೇಖರ ದೇವರಡ್ಡಿ, ಬಸ್ ಡಿಪೋ ವ್ಯವಸ್ಥಾಪಕ ಆನಂದ ಹೂಗಾರ, ಶರಣಪ್ಪ ವಾರದ, ಪ್ರವೀಣ ಕಂಠಿಗೊಂಡ, ಅರವಿಂದ ಹಂಗರಗಿ, ಮಹಾನಂದಾ ಬಮ್ಮಣ್ಣಿ, ಜಯಶ್ರೀ ಹದನೂರ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಪ್ರತಿಭಾ ಚಳ್ಳಗಿ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಪರಸು ಕಾಂಬಳೆ, ಅಂಬ್ರೀಶ ಚೌಗಲೆ, ಖಾದರ ಬಂಕಲಗಿ, ಚನ್ನಪ್ಪ ಗೋಣಿ, ಶಾಂತೂ ರಾಣಾಗೋಳ ಸೇರಿದಂತೆ ಹಲವರು ಇದ್ದರು.
ದೈಹಿಕ ನಿರ್ದೆಶಕ ಡಾ ರವಿ ಗೋಲಾ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.