ಬೆಂಗಳೂರು – ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ ಪರಿಸ್ಥಿತಿ ಉಂಟಾಗಿದೆ.
ರವಿವಾರದಂದು ಸ್ನೇಹಿತನ ಮನೆಗೆ ಹೋಗಿ ವಾಪಸಾಗುವಾಗ ಅಪಘಾತವಾಗಿ ತೀವ್ರವಾಗಿ ಮೆದುಳಿಗೆ ಏಟು ಬಿದ್ದ ಕಾರಣ ಸಂಚಾರಿ ವಿಜಯ್ ಅವರು ಕೋಮಾಕ್ಕೆ ಹೋಗಿದ್ದರು. ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು.
ಇದೀಗ ಬಂದ ಸುದ್ದಿಯಂತೆ ವಿಜಯ್ ಅವರ ಬ್ರೇನ್ ಡೆಡ್ ಆಗಿದ್ದು ಅವರ ಹೃದಯ, ಶ್ವಾಸಕೋಶ, ಕಿಡ್ನಿ , ಕಣ್ಣು ಎಲ್ಲವೂ ನಾರ್ಮಲ್ ಆಗಿ ಕಾರ್ಯನಿರ್ವಹಿಸುತ್ತಿವೆ. ಇದೊಂದು ಅಪರೂಪದ ಪ್ರಕರಣವಾಗಿದ್ದು ವಿಜಯ್ ಅವರ ಮಿದುಳು ಡೆಡ್ ಆಗಿರುವುದರಿಂದ ಆಲ್ ಮೋಸ್ಟ್ ಅವರು ನಿಧನರಾದರು ಎಂದು ಹೇಳಬೇಕಾದ ವಿಚಿತ್ರ ಪರಿಸ್ಥಿತಿ ಬಂದೊದಗಿದೆ.
ನಾಳೆ ಬೆಳಿಗ್ಗೆ ವಿಜಯ್ ಅವರ ದೇಹದ ಅಂಗದಾನಕ್ಕೆ ಅವರ ಕುಟುಂಬದವರು ಒಪ್ಪಿದ್ದು ಒಂದೊಂದು ಅಂಗಗಳನ್ನು ದಾನ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಅನಂತರ ವಿಜಯ್ ಅವರು ನಿಧನರಾಗಿರುವುದಾಗಿ ಘೋಷಣೆಯಾಗಲಿದೆ ಎನ್ನಲಾಗಿದೆ.
ನಟ ವಿಜಯ್ ಅವರು ರಂಗಭೂಮಿ ಕಲಾವಿದರಾಗಿದ್ದರು. ಚಿತ್ರಗಳಲ್ಲಿಯೂ ಅವರು ನಟಿಸಿದ್ದರು. ಅವರು ‘ ಆ್ಯಕ್ಟ್ ೧೯೭೮ ‘ ಚಿತ್ರದಲ್ಲಿ ನಟಿಸಿದ್ದರು.ಅವರದೇ ನಟನೆಯ ‘ ನಾನು ಅವನಲ್ಲ, ಅವಳು ‘ ಎಂಬ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.
ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಮೇಲೆ ಅವರ ಹುಟ್ಟೂರಾದ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.