spot_img
spot_img

ಜಾನಪದ ಹಾಡುಗಾರ್ತಿ ನಾಗಮ್ಮ ಹೂಲಿ ಅವರಿಗೆ ಬೆಳಗಾವಿ ಕಸಾಪದಿಂದ ಶ್ರದ್ಧಾಂಜಲಿ

Must Read

spot_img

ಬೆಳಗಾವಿ: ಬೈಲಹೊಂಗಲ ನಾಡಿನ ಖ್ಯಾತ ಜಾನಪದ ಹಾಡುಗಾರ್ತಿ ಶ್ರೀಮತಿ ನಾಗಮ್ಮ ಶಿವಪ್ಪ ಹೂಲಿ ಅವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಂಬನಿ ಮಿಡಿದಿದೆ.

ಶ್ರೀಮತಿ ನಾಗಮ್ಮ ಶಿವಪ್ಪ ಹೂಲಿ ಅವರು ಅಣ್ಣನ ಬಳಗ ಹಾಗೂ ಅಕ್ಕನ ಬಳಗದ ಅಧ್ಯಕ್ಷೆಯಾಗಿದ್ದು, ಕ್ರಾಂತಿಯೋಗಿ ಬಸವಣ್ಣನ ಚರಿತ್ರೆಯನ್ನು ಜಾನಪದ ತ್ರಿಪದಿ ಮೂಲಕ ಮೂರು ತಿಂಗಳವರೆಗೆ ಅಖಂಡವಾಗಿ ಹಾಡುತ್ತಿದ್ದರು. ಅಲ್ಲದೇ ಕಿತ್ತೂರರಾಣಿ ಚೆನ್ನಮ್ಮಳ ಹಾಡುಗಳು, ಸೋಬಾನೆ ಪದ, ಬೀಸುವ ಪದಗಳನ್ನು ಸೊಗಸಾಗಿ ಹಾಡುತ್ತಿದ್ದರು. ಇವರ ನಿಧನದಿಂದ ಬೈಲಹೊಂಗಲ ಜಾನಪದ ಸಿರಿಯು ಮೊಟಕಾಗಿದೆ. ಇವರ ಪವಿತ್ರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬದ ದುಃಖದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಭಾಗಿಯಾಗಿರುತ್ತದೆ ಎಂದು ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಸಂತಾಪ ಸಭೆಯಲ್ಲಿ ಕಂಬನಿ ಮಿಡಿದರು.

ಜಿಲ್ಲಾ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಶರಣೆ ಶ್ರೀಮತಿ ಪ್ರೇಮಕ್ಕ ಅಂಗಡಿ ಅವರು ಶ್ರೀಮತಿ ನಾಗಮ್ಮ ಇವರ ಜಾನಪದ ಗಾಯನವನ್ನು ಹೊಗಳುತ್ತಾ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದರು.

ಬೈಲಹೊಂಗಲ ಕಸಾಪ ತಾಲೂಕಾ ಘಟಕ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಗೌರಾದೇವಿ ತಾಳಿಕೋಟಿಮಠ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣಾ ಕನೋಜ, ಬೆಳಗಾವಿ, ಎಲ್ಲ ವೇದಿಕೆಯ ಸದಸ್ಯರು ಹಾಗೂ ಸಮಸ್ತ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಸಮಸ್ತ ಕನ್ನಡ ಮನಸ್ಸುಗಳು ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.


ಮಾಹಿತಿ ವರದಿ: ಆಕಾಶ್ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ಬೆಳಗಾವಿ
9448634208 / 9035419700

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!