ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯ 2017-2018 ನೆಯ ಸಾಲಿನ ಗೆಜೆಟೆಡ್ ಪ್ರೊಬೆಷನರ ಹುದ್ದೆಗಳ ಅಂತಿಮ ಪಟ್ಟಿಯಲ್ಲಿ ಹಿರೇಬಾಗೇವಾಡಿ ಗ್ರಾಮದ ಸಚಿನ ಯಲ್ಲಪ್ಪ ಹಳೇಮನಿ ಅವರು ಕಾರ್ಮಿಕ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಆಯ್ಕೆ ಯಾದ ನಿಮಿತ್ತ ಅವರ ಮನೆಯಲ್ಲಿ ಸಮಾನ ಮನಸ್ಕರು ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರತಿಭಾವಂತ ಸಚಿನ ಹಾಗೂ ಅವರ ತಂದೆ ಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಹಿರಿಯ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಳಮಠ ಮಾತನಾಡಿ, ಸಚಿನ ಹಳೆಮನಿ ಯ ಹಿನ್ನೆಲೆ ಸಾಧನೆ ವಿವರಿಸಿ ಅವರ ಸಾಧನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ, ಗ್ರಾಮದ ಹಿರಿಯರಾದ ಈರಣ್ಣ ಗುಂಡಲೂರ, ಬೆಳಗಾವಿ ನಗರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಎ ಡಿ ಸಾಗರ, ರುಕ್ಮಿಣಿ ನಗರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಂದ್ರ ಗೋಶ್ಯಾನಟ್ಟಿ, ಶಿಕ್ಷಣ ಸಂಯೋಜಕ ರಾದ ರಾಜೇಂದ್ರ ಕುಮಾರ ಚಲವಾದಿ, ಶಿಕ್ಷಕರಾದ ಬಿ ಎಲ್ ಹೆಗಡೆ, ಖಟಾವಕರ, ಪತ್ತಾರ, ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.