spot_img
spot_img

ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ

Must Read

ಮೂಡಲಗಿ: ಕ್ಷಯ ರೋಗದಿಂದ ಬಳಲುತ್ತಿರುವವರು, ಮನಸ್ಸು ಗೊಂದಲ ಮಾಡಿಕೊಳ್ಳದೆ, ಧೈರ್ಯದಿಂದ ವೈದ್ಯರ ಸಲಹೆಯಂತೆ ಸತ್ವಯುತವಾದ ಆಹಾರ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತ ಹೋದರೆ ಕ್ಷಯ ರೋಗದಿಂದ  ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಕಿವಿಮಾತು ಹೇಳಿದರು.

ಶನಿವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ, ಭಾರತೀಯ ಜನತಾ ಪಾರ್ಟಿ ಅರಬಾವಿ ಮಂಡಲದಿಂದ ಹಮ್ಮಿಕೊಳ್ಳಲಾಗಿದ್ದ, ಕ್ಷಯರೋಗ ನಿರ್ಮೂಲನಾ  ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ವ ರೋಗಗಳಿಗೆ ದೈರ್ಯವೇ ಮೊದಲ ಮದ್ದು, ಕ್ಷಯ ರೋಗ ನಿರ್ಮೂಲನೆಗೆ ಭಾರತೀಯ ಜನತಾ ಪಾರ್ಟಿ ಕೂಡ ಕಟಿ ಬದ್ಧವಾಗಿ ನಿಂತಿದೆ ಎಂದರು.

ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡುತ್ತ, ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನಲ್ಲಿ ಪ್ರಧಾನಿ ಮೋದಿಯವರ ಕ್ಷಯರೋಗ ಮುಕ್ತ ಭಾರತದ ಅಭಿಯಾನದಂತೆ, ಕ್ಷಯ ರೋಗ ಮುಕ್ತ ಅರಭಾವಿ ಕ್ಷೇತ್ರ ಮಾಡಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಅದರ ಭಾಗವಾಗಿ ಇವತ್ತು ಸೇವಾ ಪಾಕ್ಷಿಕ ಅಭಿಯಾನದಡಿ, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಂಡು, 25 ರೋಗಿಗಳಿಗೆ ಸಿರಿಧಾನ್ಯ ಹೊಂದಿದ ಜೀನಿ ಕಿಟ್ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಬೆಳಗಾವಿಯ ಕ್ಷಯ ನಿಯಂತ್ರಣ ಜಿಲ್ಲಾ ಮೇಲ್ವಿಚಾರಕರಾದ ಆರ್.ಬಿ.ಕಾಶಪ್ಪನವರ್ ಹಾಗೂ ವಿಜಯ ಹೊಸೂರ್ ಮಾತನಾಡಿ, ನಮ್ಮ ಡಿ.ಎಚ್.ಓ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಮುಖ್ಯ ವೈದ್ಯಾಧಿಕಾರಿಗಳ ನೆರವಿನೊಂದಿಗೆ ಕ್ಷಯ ನಿರ್ಮೂಲನೆಗಾಗಿ ಪರಿಶ್ರಮ ಪಡುತ್ತಿದ್ದೇವೆ, ಮೂಡಲಗಿ ತಾಲೂಕಿನಲ್ಲಿ ಒಟ್ಟಾರೆ 110ಜನ ಕ್ಷಯ ರೋಗಿಗಳಿದ್ದು, ಚಿಕಿತ್ಸೆ ಜಾರಿಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಹನುಮಂತ ಗುಡ್ಲಮನಿ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ, ಡಾ.ಎಸ್.ಎಸ್.ಪಾಟೀಲ್, ಡಾ.ಶಿವಲಿಂಗ ಪಾಟೀಲ್, ಆಸ್ಪತ್ರೆ ಸಿಬ್ಬಂದಿ , ಶಾಸಕರ ಆಪ್ತ ಸಹಾಯಕ ಅಬ್ದುಲ್ ಮಿರ್ಜಾ ನಾಯಕ್, ಸೇರಿದಂತೆ ಜಿಲ್ಲಾ ಹಾಗೂ ಮಂಡಲದ ಅನೇಕ ಪ್ರಮುಖ ಪದಾಧಿಕಾರಿಗಳು ನಗರದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!