spot_img
spot_img

ತುಕ್ಕಾನಟ್ಟಿ: ಸತತ ಪರಿಶ್ರಮದಿಂದ ಬದಲಾವಣೆ ಸಾಧ್ಯ: ದೀಪಕ ಕುಲಕರ್ಣಿ

Must Read

- Advertisement -

ಮೂಡಲಗಿ: ಸತತ ಪರಿಶ್ರಮ ಹಾಗೂ ಪ್ರಯತ್ನದಿಂದ ಬದಲಾವಣೆ ಸಾಧ್ಯ ಎಂಬುದನ್ನು ಈ ಸರಕಾರಿ ಶಾಲೆಯ ಶಿಕ್ಷಕರು ತೋರಿಸಿಕೊಟ್ಟಿದ್ದಾರೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಕ್ಷರದಾಸೋಹ ಯೋಜನೆ ನಿರ್ದೇಶಕರಾದ ದೀಪಕ ಕುಲಕರ್ಣಿ ಹೇಳಿದರು.

ಅವರು ತಾಲೂಕಿನ ತುಕ್ಕಾನಟ್ಟಿಗೆ ಸರಕಾರಿ ಶಾಲೆಗೆ ಸೋಮವಾರದಂದು ಆಕಸ್ಮಿಕ ಭೇಟಿ ನೀಡಿ ಅಕ್ಷರದಾಸೊಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಆಹಾರ ವಿತರಿಸಿ ಮಾತನಾಡಿ, ಕಳೆದ ನಾಲೈದು ವರ್ಷಗಳಲ್ಲಿ ಸರಕಾರಿ ಯೋಜನೆಗಳನ್ನು ಈ ಶಾಲೆಯಲ್ಲಿ ಪ್ರಧಾನ ಗುರುಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿಯನ್ನು ಹೆಚ್ಚಿಸಿರುವದಲ್ಲದೇ ಗ್ರಾಮದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗಿದೆ ಎಂದರು. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಆಹಾರದ ಕೊರತೆಯಿಂದ ಶಿಕ್ಷಣದಿಂದ ವಂಚಿತವಾಗುತ್ತಿದ್ದ ಮಕ್ಕಳ ಹಿನ್ನೆಲೆಯಲ್ಲಿ ಜಾರಿಗೆ ತಂದ ಅಕ್ಷರದಾಸೋಹ ತುಕ್ಕಾನಟ್ಟಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಬಡ ವಿದ್ಯಾರ್ಥಿಗಳ ತುತ್ತಿನ ಚೀಲದೊಂದಿಗೆ ಜ್ಞಾನದ ಹಸಿವನ್ನು ನೀಗಿಸಿರುವದು ಶ್ಲಾಘನೀಯ ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ ಇದೊಂದು ಮಾದರಿ ದಾಸೋಹ ಎಂದರು.

ಕಲ್ಲೋಳಿ ಕ್ಷೇತ್ರ ಸಂಪನ್ಮೂಲವ್ಯಕ್ತಿಗಳಾದ ಜಿ.ಕೆ.ಉಪ್ಪಾರ ಮಾತನಾಡಿ, ತುಕ್ಕಾನಟ್ಟಿಯ ಶಾಲೆಯ ಅಕ್ಷರದಾಸೋಹ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿರುವದು ಶೈಕ್ಷಣಿಕ ವಲಯದಲ್ಲಿ ಅಭಿಮಾನದ ಸಂಗತಿ ಎಂದರು.

- Advertisement -

ಮುಖ್ಯ ಅಧ್ಯಾಪಕ ಎ.ವ್ಹಿ.ಗಿರೆಣ್ಣವರ ಮಾತನಾಡಿ, ಗ್ರ್ರಾಮದಲ್ಲಿ ಕೃಷಿ ಕಾರ್ಮಿಕರ ಮಕ್ಕಳೇ ಜಾಸ್ತಿ ಇರುವಾಗ ಒಂದು ಹೊತ್ತಿನ ಊಟಕ್ಕೂ ಕೆಲವು ಕುಟುಂಬಗಳಲ್ಲಿ ಸಮಸ್ಯೆ ಇರುವಾಗ ಅಂತಹ ಕುಟುಂಬದ ಮಕ್ಕಳಿಗೆ ಹಸಿದ ಒಡಲನ್ನು ತುಂಬಿಸಿ ಕಲಿಕೆಗೆ ಅಕ್ಷ್ರದಾಸೋಹ ಯೋಜನೆ ಉತ್ತಮವಾಗಿದೆ ಎಂದರು.

6 ರಿಂದ 8 ನೇ ತರಗತಿಯ ಸುಮಾರು 350 ಮಕ್ಕಳಿಗಾಗಿ ಇವತ್ತಿನ ಅಕ್ಷರದಾಸೋಹ ಬಿಸಿಯೂಟದಲ್ಲಿ ಮಕ್ಕಳಿಗೆ ಸಜ್ಜೆರೊಟ್ಟಿ, ಗೋವಿನ ಜೋಳದ ರೊಟ್ಟಿ, ಮೊಳಕೆ ಕಾಳು ಪಲ್ಯ, ಅಗಸಿ ಹಿಂಡಿ, ಶೇಂಗಾ ಹಿಂಡಿ, ಮೊಸರು, ಜುನಕದ ವಡೆ, ಸಿರಾ, ಮೊಸರನ್ನ, ಮಸಾಲೆ ಅನ್ನ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಂಕರ ಲಮಾಣಿ, ಮಹಾದೇವ ಗೋಮಾಡಿ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶೀಲಾ ಕುಲಕರ್ಣಿ, ಕೆ.ಆರ.ಭಜಂತ್ರಿ, ಸಂಗೀತಾ ತಳವಾರ, ಎಮ್.ಕೆ.ಕಮ್ಮಾರ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಪಾಲ್ಗೊಂಡಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group