spot_img
spot_img

ತುಳಸಿ; ಜ್ಯೋತಿಷ್ಯ ಸಮಯ

Must Read

spot_img
- Advertisement -

“ತುಳಸಿ”

ವೈಜ್ಞಾನಿಕವಾಗಿ, ಪೌರಾಣಿಕವಾಗಿ, ಜ್ಯೋತಿಷ್ಯಶಾಸ್ತ್ರದ ಪ್ರಕಾರವಾಗಿ, ಒಂದು ಪಕ್ಷಿ ನೋಟ

ವೈಜ್ಞಾನಿಕವಾಗಿ ತುಳಸಿ ಗಿಡದ ಮಾಹಿತಿ:

ತುಳಸಿ ಗಿಡವನ್ನು ಭಾರತೀಯರಾದ ನಾವು ವೈಜ್ಞಾನಿಕವಾಗಿ ಮತ್ತು ಅವರ ನಿಕಟವಾಗಿ ಸಹ ಎರಡು ರೀತಿಯಲ್ಲೂ ಮಹತ್ವವನ್ನು ನೀಡುತ್ತ ಬಂದಿದ್ದೇವೆ.

ವೈಜ್ಞಾನಿಕವಾಗಿ ನೋಡುವಾಗ ತುಳಸಿ ಗಿಡವು ನಮಗೆ ಪ್ರಕೃತಿಯು “‘ ಮನೆಯ ಮದ್ದಿನ “”ರೂಪದಲ್ಲಿ ಕೊಡುಗೆಯಾಗಿ ಕೊಟ್ಟಿರುತ್ತದೆ. ಹಾಗಾದರೆ ತುಳಸಿಗಿಡ ಮನೆಮದ್ದಿನ ರೂಪದಲ್ಲಿ ಹೇಗೆಲ್ಲ ನಮಗೆ ಉಪಯೋಗ ನೋಡೋಣ.

- Advertisement -
  • 20 ಮಿ.ಲಿ ತುಳಸಿ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಚರ್ಮದ ತುರಿಕೆ ಉರಿ ಮತ್ತು ಮನೆಯಲ್ಲಾಗುವ ಗಂಧೆಗಳು ದೂರವಾಗುತ್ತದೆ.
  • ಹಲ್ಲು ನೋವು, ಗಂಟಲಿಗೆ ಸಂಬಂಧಪಟ್ಟಂತೆ ನೋವು ಅಥವಾ ಇತರ ಸಮಸ್ಯೆಗೆ, ತುಳಸಿ,ಹರಿಶಿಣ, ಉಪ್ಪು ಈ ಮೂರನ್ನು ಮಿಶ್ರಣ ಮಾಡಿ ನೀರಿನಲ್ಲಿ ನಿಯಮಿತವಾಗಿ ಬಾಯಿ ಮುಕ್ಕಳಿಸಿದರೆ ಬಾಯಿ ಮತ್ತು ಹಲ್ಲಿನ ಸಮಸ್ಯೆಗಳು ಗುಣವಾಗುತ್ತ ಬರುತ್ತದೆ.
  • ತುಳಸಿಯ ಎಲೆ ಕಾಂಡ ಬೇರು ಹೂವು ಅನ್ನವನ್ನು ಒಣಗಿಸಿ ಪುಡಿ ಮಾಡಿ ಎರಡರಿಂದ ಮೂರು ಗ್ರಾಂ ಪುಡಿಯನ್ನು ಹಾಲಿನ ಜೊತೆಯಲ್ಲಿ ಸೇವಿಸಿದರೆ ಸಂಧಿ ಯಲ್ಲಿನ ನೋವುಗಳು ಕಡಿಮೆಯಾಗುತ್ತಾ ಬರುತ್ತದೆ.
  • ಹಲ್ಲಿನ ನೋವಿದ್ದಾಗ ಎರಡರಿಂದ 4 ಎಲೆ ಜೊತೆಗೆ ಕಾಳುಮೆಣಸನ್ನು ಸೇರಿಸಿ ಮಾತ್ರೆಗಳ ರೀತಿಯಲ್ಲಿ ಉಂಡೆ ಮಾಡಿಕೊಂಡು ಹಲ್ಲಿನ ನಡುವೆ ಇಟ್ಟುಕೊಂಡರೆ ಹಲ್ಲಿನ ನೋವು ತಕ್ಷಣಕ್ಕೆ ಕಡಿಮೆಯಾಗುತ್ತಾ ಬರುತ್ತದೆ.
  • ತುಳಸಿಯ ಬೀಜವನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಸೇವನೆ ಮಾಡುತ್ತ ಬಂದರೆ ಕಟ್ಟಿಕೊಂಡಿರುವ ಮೂತ್ರವು ಸರಾಗಿ ಹೋಗಲು ಶುರುವಾಗುತ್ತದೆ.
  • ಪ್ರತಿದಿನ ಐದರಿಂದ ಆರು ತುಳಸಿ ಎಲೆಯನ್ನು ನೀರಿನೊಂದಿಗೆ ಸೇವಿಸುತ್ತ ಬಂದರೆ ಶಕ್ತಿ ಹಾಗೂ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂಬ ಪ್ರತೀತಿ ಇದೆ.
  • ತುಳಸಿ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಆಯುರ್ವೇದ ವೈದ್ಯ ವಿಭಾಗದಲ್ಲಿ ತುಳಸಿ ಗಿಡವನ್ನು ವಾತಾವರಣ ಶುದ್ದಿಯ ಪ್ರತಿರೂಪವೆಂದು ಹೇಳಲಾಗಿದೆ, ಕೆಮ್ಮು-ಶೀತ ಅಲರ್ಜಿಗಳಿಗೆ ತುಳಸಿ ಗಿಡದಿಂದ ಪ್ರಯೋಜನ ಉಂಟಾಗುತ್ತದೆ ಎಂಬುದು ಆಯುರ್ವೇದ ವೈದ್ಯ ವಿಭಾಗದಲ್ಲಿ ಹೇಳಿರುತ್ತಾರೆ, ಅಲ್ಲಿಗೆ ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡಗಳನ್ನು ಹೆಚ್ಚುಹೆಚ್ಚಾಗಿ ಬೆಳೆಸುವುದರಿಂದ ನಮ್ಮ ಆರೋಗ್ಯಕ್ಕೆ ಪರಿಹಾರವಾಗುತ್ತದೆ ಎಂಬುದು ಅರ್ಥವಾಗುತ್ತದೆ.

ಹೀಗೆ ಹಲವಾರು ರೀತಿಯ ಉಪಯೋಗಗಳನ್ನು ನಾವು ತುಳಸಿ ಗಿಡದಿಂದ ಪಡೆಯಬಹುದು,ಇಲ್ಲಿ ನಾನು ಸಂಕ್ಷಿಪ್ತವಾಗಿ ಕೆಲವನ್ನು ಮಾತ್ರ ತಿಳಿಸಿರುತ್ತೇನೆ.

ಪುರಾಣ ಹಿನ್ನೆಲೆಯ ಪ್ರಕಾರ ತುಳಸಿ ದೇವಿಯ ಪರಿಚಯ:

ಪೌರಾಣಿಕ ಹಿನ್ನೆಲೆಯಲ್ಲಿ ತುಳಸಿ ಗ್ರಹದ ಬಗ್ಗೆ ಚಿಂತನೆ ಮಾಡುವಾಗ ತುಳಸಿಯು ಶ್ರೀಮನ್ನಾರಾಯಣನಿಗೆ ಅಥವಾ ಮಹಾವಿಷ್ಣುವಿಗೆ ಅತ್ಯಂತ ಪ್ರಿಯ ಎಂಬುದು ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವಂತಹ ವಿಷಯ.

ತುಳಸಿ ಇಲ್ಲದೆ ಶ್ರೀಮನ್ನಾರಾಯಣ ಅದು ಮಹಾವಿಷ್ಣುವಿನ ಅಂಶದ ದೇವತೆಗಳಿಗೆ ಯಾವುದೇ ಕಾರಣಕ್ಕೂ ಪೂಜೆ ನೆರವೇರಿಸುವುದಿಲ್ಲ, ಹಾಗೆ ಯಾವುದೇ ದಾನಮಾಡುವಾಗ ತುಳಸಿ ಇಲ್ಲದ ದಾನ ವ್ಯರ್ಥ ಎಂಬುದು ನಮಗೆ ಪುರಾಣಗಳಲ್ಲಿ ತಿಳಿಸಲಾಗಿದೆ.

- Advertisement -

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಇಲ್ಲದ ಮನೆಗಳೇ ಇರುವುದಿಲ್ಲ ಎಂಬ ನಂಬಿಕೆಯೂ ಸಹ ಇದೆ.

ತುಳಸಿ ಜೀವನ ವೃತ್ತಾಂತವನ್ನು ಪೌರಾಣಿಕ ಹಿನ್ನೆಲೆಯಲ್ಲಿ ತಿಳಿಯೋಣ

ಹಿoದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊಂದು ಹೆಸರು ವೃಂದಾ ಎಂದು. ಕಾಲನೇಮಿ ಎಂದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯಂತ ಸುಂದರಳಾದ ರಾಜಕುವರಿಯೇ ಈ ವೃಂದಾ. ಈಕೆಯು ಶಿವನ ಶಕ್ತಿಸ್ವರೂಪದ ಭಾಗವೇ ಆದಂತಹ ಜಲಂಧರನನ್ನು ವರಿಸಿದಳು. ಜಲಂಧರನು ಭಗವಾನ್ ಶಂಕರನ ಮೂರನೆಯ ಕಣ್ಣಿನ ಅಗ್ನಿಯಿಂದ ಜನಿಸಿದವನಾಗಿದ್ದರಿಂದ, ಜಲಂಧರನು ಅಪರಿಮಿತವಾದ ಶಕ್ತಿಯುಳ್ಳವನಾಗಿದ್ದನು. ಈ ಜಲಂಧರನಿಗೆ ಪರಮ ಪವಿತ್ರಳೂ, ಆದ ರಾಜಕುಮಾರಿ ವೃಂದಾಳಲ್ಲಿ ಅನುರಕ್ತಿಯುಂಟಾಯಿತು.

ವೃಂದಾಳು ಭಗವಾನ್ ಶ್ರೀ ವಿಷ್ಣುವಿನ ಪರಮ ಭಕ್ತಳಾಗಿದ್ದು, ಜಲಂಧರನು ಎಲ್ಲಾ ದೇವ, ದೇವತೆಗಳನ್ನು ದ್ವೇಷಿಸುತ್ತಿದ್ದನು. ಆದರೂ ಕೂಡ, ವಿಧಿಯು ಇವರಿಬ್ಬರನ್ನೂ ಮದುವೆಯ ಬಂಧನದಲ್ಲಿ ಸಿಲುಕಿಸಿತ್ತು.

ವೃಂದಾಳನ್ನು ವಿವಾಹವಾದ ಬಳಿಕ, ಆಕೆಯ ಪಾವಿತ್ರ್ಯ ಹಾಗೂ ದೈವಭಕ್ತಿಯ ಕಾರಣದಿಂದಾಗಿ, ಜಲಂಧರನ ಶಕ್ತಿಯು ನೂರ್ಮಡಿಗೊಂಡಿತು. ಈತನ ಸಾಮರ್ಥ್ಯವು ಎಷ್ಟರಮಟ್ಟಿಗೆ ಹೆಚ್ಚಿತೆಂದರೆ, ಸ್ವಯಂ ಭಗವಾನ್ ಶಿವನಿಗೂ ಸಹ ಜಲಂಧರನನ್ನು ಸೋಲಿಸುವುದು ಅಸಾಧ್ಯದ ಮಾತಾಯಿತು. ಇದರಿಂದಾಗಿ, ಜಲಂಧರನ ಅಹಂಕಾರವು ಮತ್ತಷ್ಟು ಹೆಚ್ಚಾಯಿತು ಮತ್ತು ಅವನು ಭಗವಾನ್ ಶಿವನನ್ನೇ ಸೋಲಿಸಿ, ತಾನೇ ಬ್ರಹ್ಮಾಂಡದ ಯಜಮಾನನಾಗುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡನು.

ತುಳಸಿ: ಅದೃಷ್ಟಹೀನ ದೇವತೆ

ಜಲಂಧರನ ಶಕ್ತಿಯು ದಿನೇ ದಿನೇ ಹೆಚ್ಚುತ್ತಿದ್ದುದರಿಂದ, ದೇವತೆಗಳಿಗೆ ಅಭದ್ರತೆಯು ಕಾಡಲಾರಂಭಿಸಿತು. ಅವರೆಲ್ಲರೂ ಸಹಾಯಕ್ಕಾಗಿ ಭಗವಾನ್ ಶ್ರೀ ಮಹಾವಿಷ್ಣುವಿನ ಮೊರೆಹೊಕ್ಕರು. ಭಗವಾನ್ ವಿಷ್ಣುವು ಈಗ ನಿಜಕ್ಕೂ ಸಂಕಷ್ಟಕ್ಕೆ ಗುರಿಯಾದನು. ಯಾಕೆಂದರೆ, ವೃಂದಾಳು ವಿಷ್ಣುವಿನ ಪರಮ ಭಕ್ತೆಯಾಗಿದ್ದಳು ಹೀಗಾಗಿ ಆಕೆಗೆ ಅನ್ಯಾಯವನ್ನು ಮಾಡುವಂತಿರಲಿಲ್ಲ. ಆದರೂ ಸಹ, ಜಲಂಧರನ ಕಾರಣದಿಂದ ಎಲ್ಲಾ ದೇವತೆಗಳಿಗೂ ವಿಪತ್ತು ಒದಗುವ ಪರಿಸ್ಥಿತಿ ಇದ್ದುದರಿಂದ, ಭಗವಾನ್ ಶ್ರೀ ವಿಷ್ಣುವು ಸಮಸ್ಯೆಯ ಪರಿಹಾರಕ್ಕೆಂದು ಉಪಾಯವೊಂದನ್ನು ಹೂಡಿದನು.

ಜಲಂಧರನು ಭಗವಾನ್ ಶಿವನೊಂದಿಗೆ ಕಾದಾಟದಲ್ಲಿ ತಲ್ಲೀನನಾಗಿದ್ದಾಗ, ವಿಷ್ಣುವು ಜಲಂಧರನ ರೂಪವನ್ನು ಧರಿಸಿಕೊಂಡು ವೃಂದಾಳ ಬಳಿಗೆ ಬಂದನು. ಮೊದಲ ನೋಟಕ್ಕೇ ವಿಷ್ಣುವನ್ನು ಗುರುತಿಸಲು ವೃಂದಾಳಿಗೆ ಸಾಧ್ಯವಾಗದಿದ್ದ ಕಾರಣ, ಆಕೆಯು ತನ್ನ ಪತಿ ಜಲಂಧರನೇ ಮರಳಿ ಬಂದನೆಂದು ಭ್ರಮಿಸಿ ಆತನನ್ನು ಸ್ವಾಗತಿಸಲು ಮುಂದಾದಳು.ಆದರೆ, ಅವಳು ಭಗವಾನ್ ಶ್ರೀ ವಿಷ್ಣುವನ್ನು ಸ್ಪರ್ಶಿಸಿದೊಡನೆಯೇ, ಆಕೆಗೆ ಈತನು ತನ್ನ ಪತಿಯಲ್ಲವೆಂದು ತಿಳಿಯಿತು.

ಆಗ ಆಕೆಯ ಪಾವಿತ್ರ್ಯವು ನಷ್ಟಗೊಂಡು, ಜಲಂಧರನು ತನ್ನ ಅಮರತ್ವವನ್ನು ಕಳೆದುಕೊಂಡನು. ತನ್ನ ತಪ್ಪನ್ನು ಅರಿತ ವೃಂದಾಳು ಭಗವಾನ್ ಶ್ರೀ ವಿಷ್ಣುವಿನಲ್ಲಿ ತನ್ನ ನಿಜಸ್ವರೂಪವನ್ನು ತೋರಿಸೆಂದು ಕೇಳಿಕೊಂಡಳು.

ತನ್ನ ಆರಾಧ್ಯದೈವದಿಂದಲೇ ತಾನು ಮೋಸಹೋಗಿರುವುದನ್ನು ತಿಳಿದು ವೃಂದಾಳು ಹೌಹಾರಿದಳು. ವೃಂದಾಳ ಶಾಪ ಸ್ವಯಂ ಭಗವಾನ್ ವಿಷ್ಣುವೇ ತನ್ನ ಪತಿ ಜಲಂಧರನ ಮಾರುವೇಷದಲ್ಲಿ ಬಂದು ಮೋಸದಿಂದ ತನ್ನ ಪಾವಿತ್ರ್ಯವನ್ನು ಹಾಳುಗೆಡವಿದ್ದಕ್ಕಾಗಿ, ವೃಂದಾಳು ಭಗವಾನ್ ಶ್ರೀ ವಿಷ್ಣುವನ್ನು ಶಪಿಸುತ್ತಾಳೆ.

ಭಗವಾನ್ ಶ್ರೀ ವಿಷ್ಣುವು ಶಿಲೆಯಾಗಿ ಹೋಗಲಿ ಎಂದು ಆಕೆಯು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಅವಳ ಶಾಪವನ್ನು ಸ್ವೀಕರಿಸುತ್ತಾನೆ ಹಾಗೂ ತಾನೊಂದು ಸಾಲಿಗ್ರಾಮ ಶಿಲೆಯಾಗಿ ಪರಿವರ್ತಿತನಾಗುತ್ತಾನೆ. ಈ ಸಾಲಿಗ್ರಾಮ ಶಿಲೆಯು ಗಂಡಕಿ ನದಿಯ ಸಮೀಪದಲ್ಲಿ ಕಂಡುಬರುತ್ತದೆ.

ಇದಾದ ಬಳಿಕ, ತನ್ನ ಪತ್ನಿಯ ಪಾವಿತ್ರ್ಯದ ಬಲವನ್ನು ಕಳೆದುಕೊಂಡ ಜಲಂಧರನು ಶಿವನಿಂದ ಹತನಾಗುತ್ತಾನೆ. ವೃಂದಾಳೂ ಕೂಡ ತನ್ನ ಪತಿಯ ಮರಣದಿಂದ ಖಿನ್ನಳಾಗಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳಲು ತೀರ್ಮಾನಿಸುತ್ತಾಳೆ.

ಭಗವಾನ್ ಶ್ರೀ ವಿಷ್ಣುವಿನ ವರ ವೃಂದಾಳ ಮರಣಕ್ಕೆ ಮುನ್ನ ಭಗವಾನ್ ಶ್ರೀ ವಿಷ್ಣುವು ಆಕೆಯನ್ನು ಹರಸಿ ಆಶೀರ್ವದಿಸುತ್ತಾನೆ ಹಾಗೂ ಆಕೆಗೆ ವರವೊಂದನ್ನು ಅನುಗ್ರಹಿಸುತ್ತಾನೆ. ಅದರ ಪ್ರಕಾರ, ಆಕೆಯು ತುಳಸಿ ಎಂಬ ಹೆಸರಿನಿಂದ ಪ್ರಸಿದ್ಧಳಾಗುತ್ತಾಳೆ ಹಾಗೂ ಯಾವಾಗಲೂ ಸಹ ಭಗವಾನ್ ಶ್ರೀ ವಿಷ್ಣುನೊಂದಿಗೆಯೇ ಆಕೆಯು ಪೂಜಿಸಲ್ಪಡುವಂಥವಳಾಗುತ್ತಾಳೆ.

ಭಗವಾನ್ ಶ್ರೀ ವಿಷ್ಣುವಿನ ವರ ಭಗವಾನ್ ವಿಷ್ಣುವಿನ ಪೂಜೆಯು ತುಳಸಿಯಿಲ್ಲದೇ ಎಂದಿಗೂ ಪರಿಪೂರ್ಣವಾಗುವುದೇ ಇಲ್ಲ. ಹೀಗೆ, ಅನಂತರದಿಂದ, ತುಳಸಿಯು ಹಿಂದೂ ವಿಧಿವಿಧಾನಗಳ ಒಂದು ಅವಿಭಾಜ್ಯ ಅಂಗವಾಗಿದೆ. ಭಗವಾನ್ ಶ್ರೀ ವಿಷ್ಣುವಿನ ವರ ಅದೃಷ್ಟಹೀನ ದೇವತೆಯಾದ ತುಳಸಿಯು ಕಟ್ಟಕಡೆಗೆ ಅನುಗ್ರಹಿಸಲ್ಪಟ್ಟು ತುಳಸಿ ಎಂಬ ಹೆಸರಿನ ಪವಿತ್ರ ಸಸಿಯಾಗಿ ಹೆಚ್ಚು ಕಡಿಮೆ ಪ್ರತೀ ಮನೆಯ ಅಂಗಳದಲ್ಲಿಯೂ ಪ್ರತಿಷ್ಟಾಪಿಸಲ್ಪಟ್ಟು, ಪ್ರತಿಯೊಬ್ಬರ ಅಂತರಂಗವನ್ನೂ ಕೂಡ ಶುದ್ಧೀಕರಿಸುವವಳಾಗಿದ್ದಾಳೆ

ಸೂಚನೆ: ಜೀವನ ಕಥೆಯನ್ನು ಇತರ ಮೂಲಗಳಿಂದ ಸಂಗ್ರಹ ಮಾಡಿರುತ್ತೇನೆ

ಇನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಳಸಿಯ ಬಗ್ಗೆ ನಾವು ಕೊಳ್ಳೋಣ

  • ತುಳಸಿ ಬುಧ ಗ್ರಹದ ಆಧಿಪತ್ಯವನ್ನು ಹೊಂದಿರುತ್ತದೆ.
  • ಹಾಗಾಗಿ ಬುಧಗ್ರಹದ ಕೃಪೆಗಾಗಿ ಪ್ರತಿಯೊಬ್ಬರು ತುಳಸಿ ಗಿಡವನ್ನು ಬೆಳೆಸುವುದು ಮತ್ತು ಪೂಜಿಸುವುದು ಆರಾಧನೆ ಮಾಡುವುದು ತುಳಸಿ ಸ್ತೋತ್ರವನ್ನು ಹೇಳುವುದರಿಂದ ತುಳಸಿಯ ಜೊತೆಯಲ್ಲಿ ಭಗವಂತ ಶ್ರೀಮನ್ನಾರಾಯಣನ ಅನುಗ್ರಹ ಕೂಡ ಆಗುತ್ತದೆ.
  • ಅಂದರೆ ಲಕ್ಷ್ಮೀನಾರಾಯಣರ ಅನುಗ್ರಹವು ಉಂಟಾಗುವುದರಿಂದ ಐಶ್ವರ್ಯ ಪ್ರಾಪ್ತಿ ಬುದ್ಧಿ ಜ್ಞಾನ ಆರೋಗ್ಯ ಇವುಗಳೆಲ್ಲವನ್ನೂ ತುಳಸಿಯಿಂದ ಪಡೆಯಬಹುದು.
  • ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ, ದೈವಾನುಗ್ರಹ ದ ಜೊತೆಗೆ ಮಾಟ-ಮಂತ್ರ ವಾಮಾಚಾರ ಪ್ರಯೋಗಗಳು ಉಂಟಾಗುವುದಿಲ್ಲ.
  • ಜೊತೆಗೆ ಒಂದುವೇಳೆ ಆಗ್ರಹ ಕಟ್ಟಿರುವಂತೆ ನೆಲದಲ್ಲಿ ಏನಾದರೂ ಇದ್ದಲ್ಲಿ ತುಳಸಿಗಿಡ ಬಳಸುವುದರಿಂದ ಭೂ ದೋಷ ನಾಶವಾಗುತ್ತದೆ.
  • ತುಳಸಿಗಿಡ ವನ್ನು ಸರಿಯಾಗಿ ಬೆಳೆಸಿ ಪೂಜೆ ಮಾಡುವುದರಿಂದ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ, ತುಳಸಿ ಗಿಡದ ಜೊತೆಯಲ್ಲಿ ಆತ್ಮೀಯ ಮತ್ತು ಭಾವನಾತ್ಮಕ ಭಾವನೆಯನ್ನು ಹೊಂದಿರಬೇಕಾಗುತ್ತದೆ.
  • ಹೇಗೆಂದರೆ ಪ್ರತಿ ದಿನ ತುಳಸಿ ಗಿಡದ ಜೊತೆಯಲ್ಲಿ ನಾವು ಮಾತನಾಡಬೇಕು, ನಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ವಿಷಯಗಳನ್ನು ತುಳಸಿಗಿಡದ ಹತ್ತಿರ ಹೇಳಿಕೊಳ್ಳಬೇಕು, ಹೀಗೆ ನಮ್ಮ ಮತ್ತು ತುಳಸಿ ಗಿಡದ ಜೊತೆಯಲ್ಲಿ ಉತ್ತಮ ಸಂಬಂಧವನ್ನು ಸಂಪಾದನೆ ಮಾಡುವುದರ ಮುಖಾಂತರ ಇಟ್ಟುಕೊಂಡಾಗ ನಮ್ಮ ಮನಸ್ಸಿನಲ್ಲಿ ಇರುವಂತಹ ಭಾವನೆಗಳು ಮತ್ತು ನಮ್ಮ ಕಾರ್ಯಗಳು ಕೆಲಸಗಳು ಸಿದ್ಧಿಯನ್ನು ಪಡೆಯುತ್ತದೆ ಎಂಬುದು ನನ್ನ ಅಭಿಪ್ರಾಯ ಹಾಗೂ ಅನುಭವವಾಗಿರುತ್ತದೆ.

ಸೂಚನೆ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವೃಷಭ,ಮಿಥುನ, ಕನ್ಯಾ,ತುಲಾ,ಮಕರ,ಕುಂಭ, ಈ 6 ರಾಶಿಗಳಿಗೆ ಅತ್ಯುತ್ತಮ ವಾದಂತಹ ಫಲಿತಾಂಶ ತುಳಸಿ ಗಿಡವನ್ನು ಬೆಳೆಸುವುದರಿಂದ ಆರಾಧನೆ ಮಾಡುವುದರಿಂದ ಹಾಗೂ ಅದರ ಸ್ತೋತ್ರಗಳನ್ನು ಹೇಳುವುದರಿಂದ ಅದರ ಮುಂದೆ ದೀಪಾರಾಧನೆ ಮಾಡುವುದರಿಂದ ಭಗವಂತ ಲಕ್ಷ್ಮಿ ಜೊತೆಯಲ್ಲಿ ಸುಲಭವಾಗಿ ಒಲಿಯುತ್ತಾನೆ.

  • ಮೇಷ, ಕಟಕ, ಸಿಂಹ, ವೃಶ್ಚಿಕ,ಈ ರಾಶಿಯವರು ತುಳಸಿ ಗಿಡದಿಂದ ಮಧ್ಯಮ ಪ್ರಮಾಣ ವಾದಂತಹ ಪ್ರಯೋಜನವನ್ನು ಪಡೆಯುತ್ತಾರೆ,ಆದರೆ ಉತ್ತಮ ಫಲಿತಾಂಶ ಇವರು ಸಹ ಪಡೆಯಬಹುದು.
  • ಧನಸ್ಸು ಮತ್ತು ಮೀನ ರಾಶಿಗಳಿಗೆ ತುಳಸಿ ಗಿಡದಿಂದ ಅಷ್ಟೊಂದು ಪ್ರಯೋಜನವಾಗುವುದಿಲ್ಲ.
  • ಕಾರಣವೇನೆಂದರೆ, ತುಳಸಿ‌ಗಿಡದ ಅಧಿಪತಿ ಜ್ಯೋತಿಷ್ಯಾಸ್ತ್ರದ ಪ್ರಕಾರ‌ಬುಧ ಆಗಿರುವುದರಿಂದ, ಬುಧ ಸಣ್ಣ ಹಸಿರು ಎಲೆಗಳ ಗಿಡದ ಗಿಡದ ಆಧಿಪತ್ಯವನ್ನು ಹೊಂದಿರುತ್ತಾನೆ. ಗುರುಗ್ರಹವು ದೊಡ್ಡದಾದ ಎಲೆ ಗಿಡದ ಅಧಿಪತ್ಯವನ್ನು ಹೊಂದಿರುವುದರಿಂದ ಹಾಗೂ ಬುಧ ಗ್ರಹಕ್ಕೆ ಪರಮಶತ್ರುವಾಗಿರುವುದರಿಂದ ಈ ರಾಶಿ ಲಗ್ನದವರು ತುಳಸಿ ಗಿಡದ ಆರಾಧನೆಯನ್ನು ಮಾಡಿದಷ್ಟು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳಬಹುದು.
  • ಫಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾಯು ತತ್ವ ಮತ್ತು ಪೃಥ್ವಿ ತತ್ವ ಲಗ್ನಗಳಿಗೆ ಸಪ್ತಮದಲ್ಲಿ ಗುರು ಗ್ರಹ ಸ್ಥಿತವಾಗಿ ಇದ್ದಾಗ ವಿವಾಹಕ್ಕೆ ತೊಂದರೆ ಉಂಟಾಗುತ್ತದೆ, ಅಂಥವರ ಮನೆಯಲ್ಲಿ ತುಳಸಿ ಗಿಡದ ಆರಾಧನೆ ಮಾಡುವುದು ಫಲ ನೀಡುವುದಿಲ್ಲ ವಿವಾಹದ ವಿಷಯದಲ್ಲಿ.
  • ಕಾರ್ತಿಕ ಮಾಸದ ದ್ವಾದಶಿ ರೀತಿಯಲ್ಲಿ ತುಳಸಿ ವಿವಾಹವನ್ನು ಆಚರಣೆ ಮಾಡುತ್ತಾರೆ, ಮಹಾವಿಷ್ಣು ಧೀರ್ಘ ನಿದ್ದೆಯಿಂದ ಕಣ್ಣು ಬಿಡುವಂತಹ ದಿನವಾಗಿರುತ್ತದೆ ಎಂಬುದು ಉಲ್ಲೇಖವಾಗಿದೆ.

ಪರಮಪವಿತ್ರ ದ ದಿನದಲ್ಲಿ ತುಳಸಿಯ ಜೊತೆಯಲ್ಲಿ ನಲ್ಲಿ ಗಿಡವನ್ನು ಇಟ್ಟು ವಿವಾಹವನ್ನು ಮಾಡುವುದರಿಂದ ಗೃಹದಲ್ಲಿ ಶುಭವನ್ನು ಪಡೆಯುತ್ತಾರೆ, ವಿವಾಹ ವಾಗುವಂತಹ ಹೆಣ್ಣುಮಕ್ಕಳಿದ್ದರೆ ಅಥವಾ ಗಂಡು ಮಕ್ಕಳಿದ್ದರೆ ಅವರಿಗೆ ವ ವಿವಾಹ ಯೋಗವು ಪ್ರಾಪ್ತಿಯಾಗುತ್ತದೆ, ಆಗಿರುವಂತ ಅವರಿಗೆ ಜೀವನದಲ್ಲಿ ಸೌಖ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಂಬಿಕೆ ಇರುತ್ತದೆ.

ಸೂಚನೆ:

  1. ತುಳಸಿ ಗಿಡವನ್ನು ಹಿಂದೂ ಸಾಂಪ್ರದಾಯಿಕವಾಗಿ ಎಲ್ಲರೂ ಕೂಡ ಬೆಳೆಸಬಹುದು ಆರೋಗ್ಯದ ದೃಷ್ಟಿಯಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮದುವೆಯ ವಿಷಯದಲ್ಲಿ ಮಾತ್ರ ತುಳಸಿ ಗಿಡದ ಬಗ್ಗೆ ಯಾರು ಬೆಳೆಸಬೇಕು ಯಾರು ಬೆಳೆಸಬಾರದು ಅಂದರೆ ಪೂಜೆ ಮಾಡುವ ವಿಷಯದಲ್ಲಿ ಎಚ್ಚರಿಕೆವಹಿಸಬೇಕು, ಕಾರಣವನ್ನು ನಾವು ತುಳಸಿಯ ಜೀವನಚರಿತ್ರೆಯನ್ನು ಸರಿಯಾದ ರೀತಿಯಲ್ಲಿ ಅಭ್ಯಾಸಮಾಡಿ ಗಮನಿಸಿದಾಗ ಅರ್ಥವಾಗುತ್ತೆ.
  2. ತುಳಸಿಯ ಪೂಜೆಗೆ ವಿಶೇಷವಾಗಿ ಸಂಪ್ರದಾಯ ಮಾಡುವಂಥವರು ಸಂಪ್ರದಾಯ ರೀತಿಯಲ್ಲಿ ಆಚರಣೆ ಮಾಡಿ ಒಂದು ವೇಳೆ ಸಂಪ್ರದಾಯವಾಗಿ ಆಚರಣೆ ಮಾಡದೆ ಇರುವಂತವರು ಚಿಂತಿಸಬೇಕಾಗಿಲ್ಲ ತುಳಸಿ ಗಿಡದ ಮುಂದೆ ದೀಪವನ್ನು ಮಹಾವಿಷ್ಣುವಿನ ಪ್ರಾರ್ಥನೆ ಮಾಡಿದರೆ ಅಥವಾ ವಿಷ್ಣುಸಹಸ್ರನಾಮವನ್ನು ಹೇಳಿಕೊಂಡರೆ ಸಾಕು ಭಗವಂತನ ಅನುಗ್ರಹ ಉಂಟಾಗುತ್ತದೆ.
  3. ಯಾರು ದೇವಸ್ಥಾನಕ್ಕೆ ಹೋಗದಿದ್ದರೂ ಅಥವಾ ಮನೆಯಲ್ಲಿ ದೇವರ ಪೂಜೆ ಮಾಡದಿದ್ದರು ಅಂಥವರು ತುಳಸಿ ಗಿಡಕ್ಕೆ ಪ್ರತಿದಿನ ನೀರನ್ನು ಹಾಕಿ ಬೆಳೆಸಿದರೆ ಅಷ್ಟೇ ಸಾಕು ಅವರಿಗೂ ಸಹ ಭಗವಂತನ ಅನುಗ್ರಹ ಉಂಟಾಗುತ್ತದೆ ತುಳಸಿ ಮಹಿಮೆಯನ್ನು ವರ್ಣಿಸಲು ಅಸಾಧ್ಯವಾಗಿರುತ್ತದೆ ಸಾಧ್ಯವಾದಷ್ಟನ್ನು ಮಾಡಿದರೂ ಸಹ ಪಾವನವಾಗುತ್ತದೆ.

🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

ಎಲ್. ವಿವೇಕಾನಂದ ಆಚಾರ್ಯ (Army Rtd) ಗುಬ್ಬಿ
ph no :9480916387

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group