“ತುಂಬಿದಹೊಳೆ” ಮನುಷ್ಯ ಬದುಕಿನ ಮಜಲುಗಳು

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ಸಾಹಿತಿ, ಶಿಕ್ಷಕ ವೈ.ಬಿ.ಕಡಕೋಳ ಅವರ ಸುಂದರ ಕೃತಿ “ತುಂಬಿದಹೊಳೆ”. ಗಡಿನಾಡ ಭಾಗದ ಹೊಳೆಸಾಲ ನಿಟ್ಟಿನವರಾದ ಕಡಕೋಳ ಅವರು. ತುಂಬಿದ ಹೊಳೆಯಂತೆ ತೂಕದ ವ್ಯಕ್ತಿತ್ವ ಹೊಂದಿದವರು. ಅವರ ಸಾಹಿತ್ಯ ರಾಶಿಯು ತುಂಬಿದ ಹೊಳೆಯ ಹಾಗೆ ನಿತ್ಯವೂ ದಿನಪತ್ರಿಕೆಗಳಲ್ಲಿ ಹರಿಯುತ್ತಿರುತ್ತದೆ ಹಸನಾಗಿ. ಹದತುಂಬಿದ ತುಸುಮಾಗಿದ ಸರಳ ಸುಂದರ ಬರವಣಿಗೆ ಶೈಲಿ ಓದುಗರ ಹೃದಯ ಮುಟ್ಟಿ ತಟ್ಟುತ್ತದೆ. ಹೊಸತನದ ಅಂಶಗಳನ್ನು ಕಂಡರೆ ಕಡಕೋಳ ಅವರಿಗೆ ಎಲ್ಲಿಲ್ಲದ ಪ್ರೀತಿ, ಕುತೂಹಲ ಆ ವಿಷಯದ ಬಗ್ಗೆ ತೆಲೆಕೆಡಿಸಿಕೊಂಡು ಒಂದು ಲೇಖನ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ ಸಂತಸ ಪಡುವ ಜಾಯಮಾನದವರು. ಹೊಕ್ಕುಳ ಹುರಿಯಂತೆ ಜನಪದ ಸೊಗಡನ್ನು ಕಾಪಾಡಿಕೊಂಡು ಬಂದವರು. ಪವಿತ್ರ ಶಿಕ್ಷಕ ಕಾಯಕದ ಕಲರವವನ್ನು ಮಾಡುತ್ತ. ಸದ್ದುಗದ್ದಲ್ಲ ವಿಲ್ಲದೆ ಅಧ್ಯಯನ ಮಾಡುತ್ತ ಬರಹದ ಗೀಳಿಗೆ ಒಳಗಾಗಿ ನಾಡಿನ ಶಿಕ್ಷಕ ವಲಯದಲ್ಲಿ ಗುರುತಿಸಿಕೊಂಡ ಲವಲವಿಕೆಯ ಮನುಷ್ಯರು.

ಇವರದು ನೆಲಮೂಲ ಸಂಸ್ಕೃತಿ. ಬೆವರು ಸಂಸ್ಕೃತಿಯ ಬಲಕ್ಕೆ ಬಲವಾಗಿ ಅಪ್ಪಿಕೊಂಡು ಅಂದದ, ಚಂದದ ಬರಹ ನಾಡಿಗೆ ನೀಡಿದ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರು. ಜನಪ್ರಿಯತೆ ಎಂಬ ಬೆತಾಳನ ಬೆನ್ನುಬೀಳದೆ. ನೈಜತೆಯಿಂದ ಕೂಡಿದ; ಶದ್ಭಾಡಂಬರವಿಲ್ಲದ ಸಹಜ, ಸರಳ ನಿರೂಪಣೆಯಿಂದ ಬರಹದ ಚಾಪು ಮೂಡಿಸಿದವರು, ಸಾಧಿಸಿದವರು. ನಾಲ್ಕು ಜನರ ಬಾಯಲ್ಲಿ ಸದಾ ಇರುವ ಮುತ್ಸದ್ದಿ ಮನುಷ್ಯರು ಇವರು. ಪ್ರಶಸ್ತಿ ಪರಿಮಳದ ಹಪಾಹಪಿ ಇಲ್ಲದೆ ಓದು-ಬರಹ ಸದಾಶಿವನ ಪೂಜೆ ಎಂದು ನಂಬಿದವರು. ಶರಣ ತತ್ವದ ನೇಮದಂತೆ ನಡೆದವರು. ಹೀಗಾಗಿ ಇವರ ಸಂಸಾರಿಕ ಬದುಕು ಹಾಲುಜೇನಿನಂತೆ ಹದವಾಗಿ ಹರಳುಗಟ್ಟಿ ನೆಮ್ಮದಿಯ ಶಿಖರದಲ್ಲಿ ಗಟ್ಟಿಯಾಗಿ ನಿಂತಿದೆ ಎಂದು ಹೇಳಬಹುದು. ಆದರ್ಶ ಶಿಕ್ಷಕನೆಂದರೆ ಹೀಗಿರಬೇಕು ಎಂಬುದಕ್ಕೆ ಇವರ ವ್ಯಕ್ತಿತ್ವ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು ಎನಿಸುತ್ತದೆ. ಶಿಕ್ಷಕರಿಗೆ ಸಿರಿಗುಣವಿರಬೇಕು ಎಂಬ ಮಾತಿಗೆ ಒಪ್ಪತಕ್ಕ ವ್ಯಕ್ತಿತ್ವ ಇವರದಾಗಿದೆ. ಇವರ ಸಾಹಿತ್ಯ ಕೃಷಿಯಿಂದ ಹೊರಬಂದ ಅರವತ್ತೆರಡು ಲೇಖನಗಳ ಗೊಂಚಲು ಇಲ್ಲಿ ಅನಾವರಣಗೊಂಡಿದೆ. ಇದು 2021 ರಲ್ಲಿ ಎಸ್.ಎಲ್.ಎನ್. ಪಬ್ಲಿಕೇಷನ್ ಬೆಂಗಳೂರಿನಿಂದ ಪ್ರಕಟವಾಗಿದೆ.

ಈ ಕೃತಿಯ ಮೊದಲ ವಿಭಾಗ ‘ಜೀವನಶೈಲಿ’ಯಲ್ಲಿ ಹದಿಮೂರು ಲೇಖನಗಳು ಅರಳಿವೆ. ‘ನೆರೆಹೊರೆಯವರೊಂದಿಗೆ ಹೇಗಿರಬೇಕು?’ ಲೇಖನದಿಂದ ‘ವೃದ್ದಾಪ್ಯದವರಗಿನ’ ಲೇಖನಗಳು ಚಿಕ್ಕದಾಗಿ ಚೊಕ್ಕಾಗಿ ಮೂಡಿವೆ. ಆಧುನಿಕ ಜೀವನ ಶೈಲಿಯ ವಿಧಾನಗಳು, ಸಲಹೆ, ಸೂಚನೆ, ರಕ್ಷಣೆ ಮೊದಲಾದ ಆರೋಗ್ಯವಂತ ಸಮಾಜದ ಚಹರೆಗಳು ನಿಚ್ಚಳವಾಗಿ ಬರಹದಲ್ಲಿ ಕಾಣಸಿಗುತ್ತವೆ ಸಿದ್ದ ಸೂತ್ರದಂತೆ. ಜೀವನ ಶೈಲಿಯ ಬದಲಾವಣೆಯ ಪಕ್ಷಿನೋಟವನ್ನು ಇಲ್ಲಿ ಕಾಣಬಹುದು. ಕಾಯಕದ ಮಹತ್ವ ಇಲ್ಲಿ ಅಂದದಿಂದ ಅರಳಿದೆ. ನಗುವಿನ ಲಕ್ಷಣ, ಇಂದಿನ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಮೊದಲಾದ ವೈಜ್ಞಾನಿಕ ಹಾಗೂ ವೈಚಾರಿಕ ಅಂಶಗಳು ಈ ವಿಭಾಗದಲ್ಲಿ ಕೆನೆಗಟ್ಟಿ ನಿಂತಿವೆ.

- Advertisement -

‘ಶಿಕ್ಷಣ’ ಎಂಬ ಎರಡನೆಯ ವಿಭಾಗದಲ್ಲಿ ನಮ್ಮ ರಾಷ್ಟ್ರಧ್ವಜ, ನನ್ನ ಗುರುಗಳು ವರೆಗಿನ ಹದಿಮೂರು ಲೇಖನ ಇಲ್ಲಿ ಹರಡಿವೆ. ಸಮನ್ವಯ ಶಿಕ್ಷಣ, ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕ ಶಿಕ್ಷಣ, ಸೃಜನಶೀಲತೆ ಕುರಿತು ತಾರ್ಕಿಕ ನೆಲೆಯಲ್ಲಿ ಚಿಂತಿಸಲಾಗಿದೆ. ಶಿಕ್ಷಣದ ಮಹತ್ವವನ್ನು ಎತ್ತಿ ಹೇಳಲಾಗಿದೆ. ಶಿಕ್ಷಣ ಪ್ರಗತಿಯ ಮಜಲಿನ ಎಳೆಯಲ್ಲಿ ಕೆಲವು ವಿಚಾರಗಳು ಇಲ್ಲಿ ಅರಳಿರುವದು ವಿಶೇಷವೆನಿಸಿದೆ.

‘ಲಹರಿ’ ಎಂಬ ಮೂರನೆಯ ವಿಭಾಗದಲ್ಲಿ ನಾಲ್ಕು ಲೇಖನಗಳು ವಾಸ್ತವಿಕ ವಿಚಾರಗಳು ತಿಳಿಹಾಸ್ಯದ ನೆಲೆಯಲ್ಲಿ ಹರಡಿದರೆ. ಪ್ರೇಮ ಮೊದಲಾದ ವಿಚಾರಗಳು ಇಲ್ಲಿ ಹದ ತುಂಬಿನಿಂತಿವೆ. ‘ಜನಪದ’ ವೆಂಬ ನಾಲ್ಕನೆಯ ವಿಭಾಗದಲ್ಲಿ ನಾಲ್ಕು ಲೇಖನ ಎಡೆಪಡೆದಿವೆ. ಬೀಸುವ, ಬುಡಬುಡಕೆ, ಹೆಳವರ ಜೀವನ ವಿಧಾನ ಜನಪದದ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಬೀಸುವ ಕ್ರಿಯೆ ಜನಪದದ ಶ್ರೇಷ್ಠ ಕಾಯಕದಲ್ಲಿ ಒಂದು ಅದನ್ನು ಸಹಜವಾಗಿ ಇಲ್ಲಿ ಚಿತ್ರಿಸಲಾಗಿದೆ. ದೈವಿ ಕಲ್ಪನೆ ಜನಪದರ ಕೃಷಿಯಲ್ಲಿ ಅನಾವರಣಗೊಂಡುದನ್ನು ತಿಳಿಸುತ್ತದೆ ಈ ವಿಭಾಗದ ಕೊನೆಯ ಲೇಖನ.

‘ನಮ್ಮ ಸುತ್ತ ಮುತ್ತ’ ವೆಂಬ ಐದನೆಯ ವಿಭಾಗದಲ್ಲಿ ಸವದತ್ತಿ ತಾಲೂಕಿನ ದೇವಿ ಆರಾಧನೆಯ ತಾಣಗಳ ಐತಿಹಾಸಿಕ ನೆಲೆಯಲ್ಲಿ ಬರಹವನ್ನು ಆಧಾರ ಸಹಿತ ವಿವರಿಸಿರುವರು, ರಟ್ಟರು, ಮುನವಳ್ಳಿ ಶಾಸನಗಳು ಬರಹಗಳನ್ನು ಶಾಸನಗಳ ಹಿನ್ನೆಲೆಯಲ್ಲಿ ಚಿತ್ರಿಸಿರುವರು ಅಂದವಾಗಿ.

‘ಮುಕ್ತ-ಮುಕ್ತ’ ವೆಂಬ ಆರನೆಯ ಅಧ್ಯಾಯ; ಈ ಕೃತಿಯ ಕೊನೆಯ ಅಧ್ಯಾಯವು ಹೌದು. ಇಲ್ಲ ಇಪ್ಪತ್ತಮೂರು ಲೇಖನಗಳು ಎಡೆಪಡೆದಿವೆ. ‘ವಚನ ನಿರ್ವಚನ’ವೆಂಬ ಲೇಖನದಿಂದ ಆರಂಭಗೊಂಡು ‘ಆಲಮಟ್ಟಿಯಲ್ಲಿ ಶೈಕ್ಷಣಿಕ ಸಮ್ಮೇಳನದ ಸವಿನೆನಪು’ ವರಗೆ ಹರಡಿಕೊಂಡಿವೆ. ವಚನ ಸಾಹಿತ್ಯದ ಪರಿಕಲ್ಪನೆ ಲೇಖಕರಲ್ಲಿ ಅಂದವಾಗಿ ಅರಳಿ ಹೊಸವಿಚಾರಗಳನ್ನು ತೆರೆದು ತೋರುತ್ತದೆ. ಅಂತರ್ಜಾಲದ ಲಾಭ ನಷ್ಟಗಳ ವಿಚಾರ ಹಾಗೂ ಧಾರವಾಡ ಜಿಲ್ಲೆಯ ಕೆಲವು ಸ್ಥಳನಾಮಗಳ ವಿವೇಚನೆ ಕ್ಷೇತ್ರ ಕಾರ್ಯದ ತಳಹದಿ ಮೇಲೆ ನಡೆದಿವೆ. ಲಾಕ್‍ಡೌನ್ ಸಮಯದ ಸದುಪಯೋಗ ಹೊಸವಿಚಾರದ ಕುರುಹುಗಳಾಗಿವೆ. ಅನೇಕ ನೂತನ ವಿಚಾರಗಳನ್ನು ಇಟ್ಟುಕೊಂಡು ತಮ್ಮ ಶಕ್ತಿಗೆ ಅನುಸಾರ ತಕ್ಕ ಮಟ್ಟಿನ ಪ್ರಯತ್ನವನ್ನು ಇಲ್ಲಿ ಕಡಕೋಳರು ಮಾಡಿದ್ದಾರೆ. ಅನುಭವಿಕ ವಿಚಾರಗಳಿಗೆ ಸೃಜನಶೀಲ ಲೇಪನದಿಂದ ಓದುಗರನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಬರವಣಿಗೆ ಬರಾಟೆ ಬರದಿಂದ ಸಾಗಿದೆ ನಿಜ. ಅಲ್ಲಲ್ಲಿ ನಿಂತು ಸಪ್ಪೆತನದ ಹೊಳವನ್ನು ತೋರಿಸುತ್ತದೆ. ಅದನ್ನು ಕಡಿಮೆ ಮಾಡಿಕೊಂಡು ಗಟ್ಟಿತನದ ಪರಿಕಲ್ಪನೆಯತ್ತ ಮುಖಮಾಡಿದರೆ ಬರಹಗಾರ ಬರಹಕ್ಕೆ ಹೆಚ್ಚಿನ ಬೆಲೆ ನಿರೀಕ್ಷಿಸಲು ಸಾಧ್ಯವೆನಿಸುತ್ತದೆ. ಕೆಲವು ಎತ್ತಿಕೊಂಡ ವಿಷಯ ವಸ್ತುಗಳು ಜಾಳುತನದ ಜಾಳಿಗೆಯಲ್ಲಿ ಬಿದ್ದು ಒದ್ದಾಡಿದಂತೆ ಭಾಸವಾಗುತ್ತವೆ. ಒಟ್ಟಂದದಿ ಹೇಳುವದಾದರೆ ಬಿಡುವಿನ ವೇಳೆಯಲ್ಲಿ ಇಷ್ಟೊಂದು ಹುಲುಸಾದ ಸಾಹಿತ್ಯ ರಾಶಿ ಹಾಕುತ್ತಿದ್ದಾರಲ್ಲ ಅದು ಆಶ್ಚರ್ಯಪಡುವ ವಿಚಾರವೆನಿಸಿದೆ. ಕ್ರಿಯಾಶೀಲ ಶಿಕ್ಷಕನ ಸತ್ವದ ಸರಕು ಇದಾಗಿದೆ ಎಂದು ಸಾಕ್ಷೀಕರಿಸಿದಂತಿದೆ ‘ತುಂಬಿದ ಹೊಳೆ’ ಎಂಬ ಈ ಕೃತಿ.

ಮುಂದೆಯೂ ಹೊಸ ಮಾರ್ಪಾಡಿನೊಂದಿಗೆ; ಗಟ್ಟಿಯಾದ ನೂರಾರು ಕೃತಿಗಳು ಇವರಿಂದ ಹೊರಸೂಸಲಿ ಎಂದು ಹೃದಯಾಳದಿಂದ ಹಾರೈಸುವೆ.


ಡಾ.ವ್ಹಿ.ಬಿ.ಸಣ್ಣಸಕ್ಕರಗೌಡರ
ಯುವ ಸಾಹಿತಿ
ಬಾದಾಮಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!