ಅಂಕಣಕಾರ ಡಾ.ನೀ.ಗೂ ರಮೇಶರವರ ಎರಡು ಕೃತಿಗಳ ಲೋಕಾರ್ಪಣೆ

Must Read

ರಾಷ್ಟ್ರೀಯ ಪ್ರಕೃತಿ ಚಿಕಿತ್ಸೆ ದಿನಾಚರಣೆ, ಸ್ವಯಂ ಸ್ವಾಸ್ಥ್ಯ ನೇಚರ್ ಕ್ಯೂರ್ ಫೌಂಡೇಶನ್ ಹಾಗೂ ಎಂ.ಆರ್.ಎ ಪ್ರಕಾಶನದ ವತಿಯಿಂದ ಕವಿ ಅಂಕಣಕಾರ ಉಪನ್ಯಾಸಕ ಡಾ. ನೀ.ಗೂ.ರಮೇಶ ರವರ “ಆರೋಗ್ಯ ಹನಿ” ಹಾಗೂ “ಪ್ರಕೃತಿಯ ಚಿಕಿತ್ಸೆಯೊಂದಿಗೆ ಪರಿಪೂರ್ಣ ಆರೋಗ್ಯ” ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ:೧೬  ಭಾನುವಾರ ಬೆಳಿಗ್ಗೆ ೧೦:೩೦ ಗಂಟೆಗೆ ಮಂಡ್ಯ ಬಿ.ಎಂ.ರಸ್ತೆ, ಪಿ.ಇ.ಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಕೆಂಗೇರಿ ರವರು ವಹಿಸಲಿದ್ದಾರೆ.

ಎಂ.ಆರ್.ಎ. ಪ್ರಕಾಶನದ ಪ್ರಕಾಶಕರಾದ ಎಂ.ಆರ್.ಮಂಜು ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ತಜ್ಞ ವೈದ್ಯಾಧಿಕಾರಿ ಡಾ.ಗಂಗಾಧರ ವರ್ಮ ಬಿ.ಆರ್ ರವರು ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕೃತಿಗಳ ಲೋಕಾರ್ಪಣೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಬಿಡುಗಡೆ ಮಾಡಲಿದ್ದಾರೆ. ಶಿಕ್ಷಣಾಧಿಕಾರಿಗಳು ಹಾಗೂ ವಿಮರ್ಶಕರಾದ ಡಾ.ಬಿ.ಸಿ.ದೊಡ್ಡೇಗೌಡ “ಆರೋಗ್ಯ ಹನಿ” ಕೃತಿ ಕುರಿತು ಮಾತನಾಡಲಿದ್ದಾರೆ.

“ಪ್ರಕೃತಿ ಚಿಕಿತ್ಸೆಯೊಂದಿಗೆ ಪರಿಪೂರ್ಣ ಆರೋಗ್ಯ” ಕೃತಿ ಕುರಿತು ಪತ್ರಕರ್ತ ಹಾಗೂ ಲೇಖಕರಾದ ಚಂದ್ರಶೇಖರ ದ.ಕೋ.ಹಳ್ಳಿ ರವರು ಪರಿಚಯಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಡಾ.ನೀ.ಗೂ.ರಮೇಶ್, ವಿಶ್ರಾಂತ ಉಪನ್ಯಾಸಕರಾದ ಮಹೇಶ ಕುಮಾರ ಎನ್ ಉಪಸ್ಥಿತರಿರುತ್ತಾರೆ. ಗಾಂಧಿ ಸ್ವಯಂ ಸ್ವಾಸ್ಥ್ಯ ಪುರಸ್ಕಾರ-೨೦೨೫ ಪ್ರಶಸ್ತಿಯನ್ನು  ಮಹೇಶ್ ಎ.ಎಸ್ ಪ್ರಕೃತಿ ಚಿಕಿತ್ಸೆ ಹಿರಿಯ ಅನುಸಾರಕರು ಹಾಗೂ ಸಹಜ ಕೃಷಿಕರಿಗೆ ಮೈಸೂರು ಸಕ್ಕರೆ ಕಂಪನಿ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀಮತಿ ಮನುಜಶ್ರೀ ವೈ.ಸಿ ರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆರೋಗ್ಯ ಸಂವಾದ ಕುರಿತು ಕೆ.ಎಸ್.ಗಿರಿರಾಜು ಮತ್ತು ಪಾಸಿಟಿವ್ ತಮ್ಮಯ್ಯ ರವರೊಂದಿಗೆ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group