ಬೀದರ – ಟೆಂಡರ್ ನೀಡುವ ವಿಷಯದಲ್ಲಿ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ೧೨ ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ ಪ್ರಕರಣದಲ್ಲಿ ಓರ್ವ ಮಹಿಳಾ, ಓರ್ವ ಪುರುಷ ಹೆಡ್ ಕಾನ್‌ಸ್ಟೇಬಲ್‌ಗಳ ತಲೆದಂಡವಾಗಿದೆ.
ರಾಜೇಶ್ ಹಾಗೂ ಶಾಮಲಾ ಎಂಬ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಕರ್ತವ್ಯಲೋಪದ ಹಿನ್ನೆಲೆ ಅಮಾನತುಗೊಳಿಸಿ ಎಸ್‌ಪಿ ಪ್ರದೀಪ್ ಗುಂಟಿ ಆದೇಶ ನೀಡಿದ್ದಾರೆ
ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಮೃತ ಸಚಿನ್ ಪಾಂಚಾಳ…ಡೆತ್‌ನೋಟ್ ನೋಡಿ ಗಾಬರಿಗೊಂಡು ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಧಾವಿಸಿದ್ದ ಮೃತ ಸಚಿನ್ ಕುಟುಂಬಸ್ಥರು. ಸಚಿನ್‌ನನ್ನು ಹುಡುಕಿ ಕೊಡುವಂತೆ ದೂರು ನೀಡಲು ಸಚಿನ್ ಸಹೋದರ ಹಾಗೂ ಸಹೋದರಿ ಬಂದಾಗ ದೂರುದಾರರ ಮನವಿಗೆ ಸರಿಯಾಗಿ ಸ್ಪಂದಿಸಿರಲಿಲ್ಲವಂತೆ ಪೊಲೀಸರು.
ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯಿಸಿದ್ದಕ್ಕೆ ನಮ್ಮಣ್ಣ ಸಾವನ್ನಪ್ಪಿದ್ದಾನೆ ಎಂದು ಎಸ್‌ಪಿ ಅವರ ಮುಂದೆ ಅಳಲು ತೋಡಿಕೊಂಡಿದ್ರಂತೆ ಕುಟುಂಬಸ್ಥರು…ಹೀಗಾಗಿ, ಕರ್ತವ್ಯಲೋಪ ಆರೋಪ ಹಿನ್ನೆಲೆ ಕಾನ್‌ಸ್ಟೇಬಲ್‌ಗಳ ಅಮಾನತು ಮಾಡಲಾಗಿದೆ ಎಂದು.ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ