ಬೀದರ – ಕುಡಿದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೀದರನಲ್ಲಿ ನಡೆದಿದೆ.
ತಡರಾತ್ರಿ ನಡೆದ ಭಾರೀ ಅಪಘಾತಕ್ಕೆ ಸ್ಥಳದಲ್ಲೆ ಓರ್ವ ಸಾವನ್ನಪ್ಪಿದ್ದು ಮತ್ತೊಬ್ಬ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಬೀದರ್ ಹೊರ ವಲಯದ ದೇವ ದೇವ ಉದ್ಯಾನವನದ ಬಳಿ ಈ ಘಟನೆ ನಡೆದಿದೆ.
ವಿದ್ಯಾಸಾಗರ ಹಿರೇಮಠ (28) ಹಾಗೂ ಶಾಮ್ ರಾವ್ (30) ಎಂಬ ಈ ಯುವಕರು ರಾತ್ರಿ ಪಾರ್ಟಿ ಮಾಡಿ ತೆಲಂಗಾಣದಿಂದ ಬೀದರ್ ಗೆ ಬರುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದ್ದು ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ