- Advertisement -
ನವಗ್ರಹದಲ್ಲಿ ಶನಿಯ ಪ್ರತೀಕವಾದ ಉದ್ದ ಸ್ವಭಾವದಲ್ಲೂ ಮಂದ. ಜೀರ್ಣಕಾರಿಯಲ್ಲದ ಆಹಾರ ಆದರೂ ಅನೇಕ ಔಷಧೀಯ ಗುಣವನ್ನು ಹೊಂದಿದೆ. ಸಸ್ಯಾಹಾರಿ ಗಳಿಗೆ ಮಾಂಸಾಹಾರದ ಶಕ್ತಿಯನ್ನು ಕೊಡುವ ಉದ್ದು ಅನೇಕರಲ್ಲಿ ತಾಮಸಿಕ ಆಹಾರ ಎನ್ನುವ ಅಭಿಪ್ರಾಯ ಇದೆ.
- ಉದ್ದಿನ ಹಿಟ್ಟಿನ ಜೊತೆಯಲ್ಲಿ ರೇಷ್ಮೆ ವಸ್ತ್ರದ ಭಸ್ಮವನ್ನು ಸೇರಿಸಿ ನೀರಿನಲ್ಲಿ ಮಿಶ್ರ ಮಾಡಿ ನೆತ್ತಿಗೆ ಲೇಪಿಸುವುದರಿಂದ ಮೂಗಿನಲ್ಲಿ ರಕ್ತಸ್ರಾವ ನಿಲ್ಲುತ್ತದೆ.
- ಉದ್ದಿನ ಹಿಟ್ಟಿಗೆ ನೀರು ಸೇರಿಸಿ ಮಿಶ್ರ ಮಾಡಿ ಕೀವಿರುವ ವೃಣಕ್ಕೆ ಹಚ್ಚುವುದರಿಂದ ಕೀವು ಗುಣವಾಗುತ್ತದೆ.
- ಉದ್ದಿನ ಹಿಟ್ಟಿನೊಂದಿಗೆ ಶುಂಠಿ ಸೇರಿಸಿ ಬಿಸಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಕುಡಿಯುವುದರಿಂದ ವಾತರೋಗಗಳು ಗುಣವಾಗುತ್ತದೆ ಪಾಶ್ವ ವಾಯು ಪೀಡಿತರು ಇದನ್ನು ಕುಡಿಯುವುದರಿಂದ ಅನೇಕ ಲಾಭಗಳು ಸಿಗುತ್ತದೆ.
- ಸಿಪ್ಪೆ ಸಹಿತ ಉದ್ದಿನಬೇಳೆ ಹುರಿದು ಪುಡಿ ಮಾಡಿ ಸಮಭಾಗ ಬೆಲ್ಲ ಸೇರಿಸಿ ಇಟ್ಟುಕೊಳ್ಳುವುದು ಮೂರು ಚಮಚ ಹೊತ್ತಿಗೆ ಪ್ರತಿದಿನ ವಿಷಮ ಪ್ರಮಾಣದಲ್ಲಿ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಶಕ್ತಿ ವೃದ್ಧಿ ಆಗುತ್ತದೆ.
- ಉದ್ದನ್ನು ತುಪ್ಪದಲ್ಲಿ ಹುರಿದು ಕಲ್ಲು ಸಕ್ಕರೆಯೊಂದಿಗೆ ಪಾಕ ಮಾಡಿ ಉಂಡೆ ಮಾಡಿ ಸೇವಿಸುವುದರಿಂದ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ಮೂಳೆಗಳು ಗಟ್ಟಿಯಾಗುತ್ತದೆ.
- ಉದ್ದಿನ ಆಹಾರವನ್ನು ಹೆಚ್ಚಾಗಿ ಸೇವಿಸಿ ಅಜೀರ್ಣವಾದರೆ ಎಳ್ಳು ತಿನ್ನುವುದರಿಂದ ಸರಿಯಾಗುತ್ತದೆ.
ಸುಮನಾ ಮಳಲಗದ್ದೆ 9980182883