Homeಸುದ್ದಿಗಳುಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ ಕಾರ್ಯ

ಸವದತ್ತಿ ತಾಲೂಕು ಆಸ್ಪತ್ರೆಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ ಕಾರ್ಯ

ಸವದತ್ತಿ: “ತಾಲೂಕಾ ಆಸ್ಪತ್ರೆ ಸವದತ್ತಿ ಯಲ್ಲಿ ವಿಕಲಚೇತನ ಮಕ್ಕಳ ಯು. ಡಿ. ಐ. ಡಿ. ಕಾರ್ಡ್ ಮಾಡಿಸುವ ಕಾರ್ಯ ಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಚಾಲನೆ ನೀಡಲಾಗಿದ್ದು ಪಾಲಕರು ಇದರ ಪ್ರಯೋಜನ ಪಡೆಯಲು ವೈದ್ಯರಾದ ಡಾ. ಮಲ್ಲನಗೌಡರ ಕರೆ ನೀಡಿದರು.

ಅವರು ಬುಧವಾರ ಶಾಲಾ ಮಕ್ಕಳ ಯು. ಡಿ. ಐ. ಡಿ ಕಾರ್ಯಕ್ರಮದಲ್ಲಿ ಮಕ್ಕಳ ತಪಾಸಣೆ ಮಾಡಿ ಮಾತನಾಡಿದರು ಈ ಸಂದರ್ಭದಲ್ಲಿ ವೈದ್ಯರಾದ ಡಾ. ಕಾಡರಕೊಪ್ಪ. ಡಾ. ಎಂ. ಎಸ್. ಕಿತ್ತೂರ ಉಪಸ್ಥಿತರಿದ್ದು ಮಕ್ಕಳ ತಪಾಸಣೆ ಕೈಗೊಳ್ಳುವ ಮೂಲಕ ಪಾಲಕರಿಗೆ ಸಲಹೆ ಸೂಚನೆಗಳನ್ನು ನೀಡಿದರು.ಶಿಕ್ಷಣ ಇಲಾಖೆಯ ಬಿ. ಐ. ಇ. ಆರ್. ಟಿ ಗಳಾದ ವೈ. ಬಿ. ಕಡಕೋಳ ಹಾಗೂ ಸಿ. ವ್ಹಿ. ಬಾರ್ಕಿ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group