ಯುಗಾದಿ ನಿರ್ಣಯ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವುದರಿಂದ ಹಾಗೂ ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ – ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ.

ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನೇಕರು ಸೋಮವಾರ ಯುಗಾದಿಯ ಆಚರಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸ್ತ್ರಗಳ ಅನ್ವಯ ಯುಗಾದಿ ನಿರ್ಣಯದ ಚರ್ಚೆ ಮಾಡೋಣ.

ತಿಥಿಗಳ ಕಾಲಮಾನ :

  1. ಅಮಾವಾಸ್ಯೆ ತಿಥಿಯು 11/04/21 ರವಿವಾರ ಬೆಳಿಗ್ಗೆ 6-05 ರಿಂದ ಪ್ರಾರಂಭವಾಗಿ ಸೋಮವಾರ 12/04/21 ಬೆಳಿಗ್ಗೆ 8.01 ಕ್ಕೆ ಅಂತ್ಯವಾಗುತ್ತದೆ.
  2. ಪ್ರತಿಪಾದ ತಿಥಿಯು 12/04/21 ಸೋಮವಾರ ಬೆಳಿಗ್ಗೆ 8.02 ರಿಂದ 13/04/21 ಮಂಗಳವಾರ 10.17ರವರೆಗೆ ಇದೆ . ಮಂಗಳವಾರ ಸೂರ್ಯೋದಯವು ಬೆಳಿಗ್ಗೆ 6-18 ಕ್ಕೆ ಇದೆ.
- Advertisement -

ಅಮವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಬಂದಿದೆ. ” ಹೊಕ್ಕ ಹುಣ್ಣಿಮೆ ಮಿಕ್ಕ ಅಮಾವಾಸ್ಯೆ ” ಎಂಬ ನಿಯಮದಂತೆ ಸೋಮವಾರ ದಿನದಂದು ಅಮಾವಾಸ್ಯೆ ಆಚರಣೆ ಮಾಡಬೇಕು. ಇನ್ನು ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಬರುವದು. ಇಲ್ಲಿ ಪ್ರತಿಪಾದ ತಿಥಿಯು ಮಂಗಳವಾರ ಸೂರ್ಯೋದಯ ವ್ಯಾಪಿನಿಯಾಗಿರುವದರಿಂದ ಮಂಗಳವಾರವೇ ಆಚರಣೆ ಮಾಡಬೇಕು.

ವೃದ್ಧ ವಶಿಷ್ಠ ಮತ್ತು ವಿಷ್ಣುಧರ್ಮೋತ್ತರ ಪುರಾಣದ ಆದೇಶದಂತೆ ವರ್ಷಾರಂಭವು ಚೈತ್ರ ಶುಕ್ಲ ಪ್ರತಿಪಾದ ಸೂರ್ಯೋದಯ ವ್ಯಾಪಿನಿಯನ್ನು ಪರಿಗಣಿಸಬೇಕು. ಶಾಸ್ತ್ರಗಳ ಪ್ರಕಾರ ವರ್ಷಾರಂಭವನ್ನು ಸೂರ್ಯೋದಯ ವ್ಯಾಪಿನಿ ಪ್ರತಿಪಾದ ತಿಥಿಯು ಗ್ರಾಹ್ಯವಾಗಿದೆ.

ಹೀಗಾಗಿ ಅಮಾವಾಸ್ಯೆಯನ್ನು ಸೋಮವಾರ ಮತ್ತು ಯುಗಾದಿಯನ್ನು ಮಂಗಳವಾರ ಆಚರಿಸುವದು ಶಾಸ್ತ್ರಸಮ್ಮತವಾಗಿದೆ.

ಕೇಶವ ನಾರಾಯಣ

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!