ಸಾಲಬಾಧೆ ತಾಳಲಾರದೇ ಬಾವಿಗೆ ಹಾರಿ ರೈತ ಆತ್ಮಹತ್ಯೆ

Must Read

ಬೀದರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಮಾಡಿಕೊಂಡು ತೀರಿಸಲಾಗದೆ ಮನನೊಂದು ಯುವ ರೈತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬೂತಗಿ ಗ್ರಾಮದ ಸಂದೀಪ್ ರೆಡ್ಡಿ ತಂದೆ ಶಿವರಾಜ ಕಳಸಂಕಿ (38) ಎಂಬ ಯುವ ರೈತ ಜೀವ ಕಳೆದುಕೊಂಡಿದ್ದಾನೆ.

ಉಳುಮೆಗೆ ಅಂತ ಪಿಕೆಪಿಎಸ್ ಬ್ಯಾಂಕ್ ಹಾಗೂ ಖಾಸಗಿ ಸಾಲ ಮಾಡಿಕೊಂಡಿದ್ದರು. ಆದರೆ ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ನಾಶವಾದ ಹಿನ್ನೆಲೆ ನೊಂದುಕೊಂಡಿದ್ದರು. ಈ ಮಧ್ಯೆ ಸಾಲಗಾರರ ಕಾಟದಿಂದ ಅವಮಾನ ತಾಳಲಾರದೇ ನೊಂದು ಶನಿವಾರ ಮಧ್ಯಾಹ್ನ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಮೈಸೂರಿನಲ್ಲಿ ವೈಭವದಿಂದ ನಡೆದ ಮೂರನೇ ವರ್ಷದ ದ್ವಾದಶ ಗರುಡೋತ್ಸವ

ವೈಷ್ಣವ ಪರಂಪರೆಯ  ಮಹಾಸಂಗಮಕ್ಕೆ  ಸಾಕ್ಷಿಯಾದ  ಸಾವಿರಾರು ಭಕ್ತರುಮೈಸೂರು: ಪಂಚಗರುಡೋತ್ಸವ ಸೇವಾ ಸಮಿತಿ (ರಿ),  ಮೈಸೂರು ಇವರ ಆಶ್ರಯದಲ್ಲಿ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಮೂರನೇ ವರ್ಷದ “ದ್ವಾದಶ ಗರುಡೋತ್ಸವ”...

More Articles Like This

error: Content is protected !!
Join WhatsApp Group