spot_img
spot_img

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ

Must Read

spot_img

ಮೂಡಲಗಿ: ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ( 6 ರಿಂದ 8 ನೇ ತರಗತಿ) ಸಂಘದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದು ಚುನಾವಣಾಧಿಕಾರಿ ಬಿ.ಬಿ ಕಡಪಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷ ಅಶೋಕ ಮಧುರಿ ಮಾತನಾಡಿ, ಶಿಕ್ಷಕರು ಮಕ್ಕಳ ಭದ್ರ ಬುನಾದಿ ಹಾಕಲು ಪ್ರಮುಖರಾಗಿದ್ದಾರೆ. ಶೈಕ್ಷಣಿಕವಾಗಿ ಕಾರ್ಯಚಟುವಟಿಕೆಗಳು ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುವದು. ಅದರ ಸಂಪೂರ್ಣ ಯಶಸ್ಸಿನಲ್ಲಿ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿರುತ್ತದೆ. ಶಿಕ್ಷಕರ ಬೇಕು ಬೇಡಿಕೆಗಳು, ನೂತನ ಚಟುವಟಿಕಾ ವಿಧಾನಗಳು, ಅನುಭವಿಸುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘದ ಕಾರ್ಯ ಮಹತ್ವದ್ದಾಗಿದೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಹಾಗೂ ಬಿಇಒರವರ ಕಾರ್ಯವೈಖರಿಗಳು ನಿಜಕ್ಕೂ ಮಾದರಿಯಾಗಿವೆ. ಮೇಲಾಧಿಕಾರಿಗಳ, ಜನಪ್ರತಿನಿಧಿಗಳ, ಶಿಕ್ಷಕ ಸಮೂಹ, ಸಾರ್ವಜನಿಕರೊಂದಿಗೆ ಉತ್ತಮ ಒಡನಾಟದೊಂದಿಗೆ ವೃತ್ತಿ ಪಾವಿತ್ರ್ಯ ಕಾಪಾಡಿಕೊಳ್ಳೋಣ ಎಂದರು.

ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಅಶೋಕ ಮಧುರಿ, ಪ್ರಧಾನ ಕಾರ್ಯದರ್ಶಿ ಹನುಮಂತ ದಡ್ಡಿಮನಿ, ಖಜಾಂಚಿ ಆರ್.ಆರ್ ಖಾನಪ್ಪನವರ, ಉಪಾಧ್ಯಕ್ಷ ಸುರೇಶ ಸವದತ್ತಿ, ಗೌರವ ಅಧ್ಯಕ್ಷ ಅಲ್ಲಪ್ಪ ನಾಯಕ, ಸಂಘಟನಾ ಕಾರ್ಯದರ್ಶಿಗೋವಿಂದ ಸಣ್ಣಕ್ಕಿ, ಸಹ ಕಾರ್ಯದರ್ಶಿ ಕೆ.ಎಸ್ ಕರಗಣ್ಣಿ, ಕ್ರೀಡಾ ಕಾರ್ಯದರ್ಶಿ ಕುಮಾರ ಐದಮನಿ, ಸಾಂಸ್ಕøತಿಕ ಕಾರ್ಯದರ್ಶಿ ಬಾಳಪ್ಪ ವರಲ್ಯಾಗೋಳ, ಸಂಘದ ವಕ್ತಾರ ಜಯಶ್ರೀ ಹುದ್ದಾರ, ನಿರ್ಧೇಶಕರಾಗಿ ಎಸ್.ಎಸ್ ಪಾಟೀಲ, ಬಂದೇನಮಾಜ ಮೋಮಿನ, ಭೀಮಪ್ಪ ಗೋರಖನಾಥ ಆಯ್ಕೆಯಾಗಿದ್ದಾರೆ.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!