ಮಹಾರಾಷ್ಟ್ರ ಮೂಲದ ಕಾರೊಂದರಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ೪೨.೭೧ ಲಕ್ಷ ರೂ. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅನಧಿಕೃತ ಹಣ ಸಾಗಣೆ ತಪ್ಪಿಸಲು ಘಟಪ್ರಭಾ ಬಳಿಯ ಚೆಕ್ ಪೋಸ್ಟ್ ನಲ್ಲಿ ಕಾರೊಂದನ್ನು ತಪಾಸಣೆ ನಡೆಸಿದಾಗ ಈ ಹಣ ಸಿಕ್ಕಿದ್ದು ಚುನಾವಣೆಯಲ್ಲಿ ಹಣದ ಹರಿವಿನ ಸುಳಿವು ಸಿಕ್ಕಂತಾಗಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಒಪ್ಪಿಸಿದ್ದು ಕಾರಿನಲ್ಲಿ ಇದ್ದವರ ವಿಚಾರಣೆ ನಡೆಸಲಾಗುತ್ತಿದೆ.
ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮೇಶ ಮನಗೂಳಿ ನೇತೃತ್ವದ ತಂಡ ಈ ದಾಳಿ ನಡೆಸಿದೆ.