spot_img
spot_img

ಸ್ವಪಕ್ಷದವರಿಂದಲೇ ಕೇಂದ್ರ ಸಚಿವ ಭಗವಂತ್ ಖೂಬಾ ಕಾರಿನ ಮೇಲೆ ಹಲ್ಲೆ

Must Read

spot_img

ಬೀದರ – ದೇಶದ ತುಂಬೆಲ್ಲ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಸಡಗರಗಳು ಜೋರಾಗಿ ನಡೆದಿದ್ದರೆ ಬೀದರಿನಲ್ಲಿ ಮಾತ್ರ ಭಾರತೀಯ ಜನತಾ ಪಕ್ಷದ ಒಳಜಗಳ ಬೀದಿಗೆ ಬಂದಿದ್ದು ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಾರಿನ ಮೇಲೆ ಹಲ್ಲೆ ಎಸಗಲಾಗಿದೆ.

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಸಚಿವರ ಕಾರಿನ ಮೇಲೆ ದಾಳಿ ಮಾಡಿದ ಅವರದೇ ಪಕ್ಷದ ಕಾರ್ಯಕರ್ತರು ಸಚಿವರ ಕಾರಿನ ನಂಬರ್ ಪ್ಲೇಟ್ ಕಿತ್ತೆಸೆದು ಧಾಂದಲೆ ಮಾಡಿದರು. ಇದರಿಂದ ಬೀದರ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಯಾವುದೂ ಸರಿ ಇಲ್ಲ ಎಂಬ ಸಂದೇಶ ಹೊರಬಂದಿದೆ.

ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ ಕಾರ್ ರ್ಯಾಲಿಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗು ಶಾಸಕ ಶರಣು ಸಲಗರ ನಡುವೆ ಗಲಾಟೆ ನಡೆಯಿತು. ಬಸವಕಲ್ಯಾಣ ದಲ್ಲಿ ನಡೆದ ಬಿಜೆಪಿ ತಿರಂಗಾ ಯಾತ್ರೆಯಲ್ಲಿ ಶಾಸಕ ಶರಣು ಸಲಗರ ಅವರನ್ನು ಕಡೆಗಣನೆ ಮಾಡಿರುವ ಆರೋಪ ಮಾಡಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗು ಬಸವಕಲ್ಯಾಣ ಶಾಸಕ ಶರಣು ಸಲಗರ ಬೆಂಬಲಿಗರ ನಡುವೆ ಮಾತಿನ ಚಕಮುಕಿ ನಡೆಯಿತು. ಅದು ಬೆಳೆದು ಕೇಂದ್ರ ಸಚಿವರ ವಾಹನದ ಮೇಲೆ ಶಾಸಕ ಶರಣು ಸಲಗರ ರವರ ಬೆಂಬಲಿಗರಿಂದ ಹಲ್ಲೆ ನಡೆಯಿತು.

ಈ ಘಟನೆಯಿಂದಾಗಿ ಸ್ಥಳೀಯ ಬಿಜೆಪಿ ನಾಯಕರಲ್ಲಿ ಅಸಮಾಧಾನವುಂಟಾಗಿದ್ದು ಬರಲಿರುವ ಚುನಾವಣೆಯ ಸಂದರ್ಭದಲ್ಲಿ ಒಂದೆ ಪಕ್ಷದ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು ಪಕ್ಷದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆಯೆಂಬುದನ್ನು ಕಾಲವೇ ಹೇಳಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!