- Advertisement -
ಸಿಂದಗಿ: ಪಟ್ಟಣದ ಬಮ್ಮಲಿಂಗ ದೇವಸ್ಥಾನದ ಹತ್ತಿರದ ಚರಂಡಿಯಲ್ಲಿ ಸುಮಾರು 20ರಿಂದ 25ವರ್ಷ ದ ವ್ಯಕ್ತಿಯ ಶವ ಪತ್ತೆಯಾಗಿದೆ.
ಮುಖದ ಭಾಗ ಚರಂಡಿಯಲ್ಲಿ ಮುಳುಗಿದ್ದು ಕಾಲು ಕಾಣುತ್ತಿರುವದರಿಂದ ವ್ಯಕ್ತಿಯ ಗುರುತು ಸಿಕ್ಕಿಲ್ಲ. ಸುಮಾರು 4ರಿಂದ 5ದಿನಗಳ ಹಿಂದೆ ಕುಡಿದ ಅಮಲಿನಲ್ಲಿ ಆಯಾ ತಪ್ಪಿ ಚರಂಡಿಗೆ ವ್ಯಕ್ತಿ ಬಿದ್ದಿರಬಹುದು ದೇಹದ ಪೂರ್ಣ ಭಾಗ ಚರಂಡಿಯಲ್ಲಿ ಬಿದ್ದಿದ್ದು ಕಾಲು ಮಾತ್ರ ಕಾಣುತ್ತಿರುವುದರಿಂದ ಇಲ್ಲಿನವರಿಗೆ ಗೊತ್ತಾಗಿಲ್ಲ ಎಂದು ಅಲ್ಲಿದ್ದ ಜನರು ಮಾತನಾಡುವುದು ಕೇಳಿ ಬರುತ್ತಿತ್ತು.
ಸ್ಥಳಕ್ಕೆ ಸಿಪಿಯ್ ರವಿ ಉಕ್ಕುಂದ, ಪಿಎಸ್ ಐ ನಿಂಗಣ್ಣ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.