spot_img
spot_img

ಸ್ವತಂತ್ರ ವೀರರ ಸ್ಮರಣೆ ಮಾಡುತ್ತ ಮುನ್ನಡೆದರೆ ದೇಶದ ಉನ್ನತಿ ಸಾಧ್ಯ – ಡಾ. ಶಾಂತವೀರ

Must Read

ಸಿಂದಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರ ತ್ಯಾಗ ಬಲಿದಾನದಿಂದಾಗಿ ನಾವು ಸ್ವಾತಂತ್ರ್ಯ ಪಡೆಯುವಂತಾಗಿದೆ ಕಾರಣ 75 ವಸಂತಗಳ ಹರ್ಷದಲ್ಲಿರುವ ನಾವುಗಳು ಆ ಮಹನೀಯರ ಸ್ಮರಣೆ ಮಾಡುತ್ತ ಶ್ರದ್ಧೆ, ನಿಷ್ಠೆಯಿಂದ ಶ್ರಮಿಸಿದರೆ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಪಟ್ಟಣದ ಪ್ರಥಮ ಪ್ರಜೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಮೂರು ದಿನಗಳಿಂದ ಹರ್‍ಘರ್ ತಿರಂಗಾ ಹಮ್ಮಿಕೊಂಡಿದ್ದು ಸೂರ್ಯಸ್ತವಾಗುವ ಮುನ್ನ ಗೌರವದಿಂದ ಇಳಿಸುವುದಲ್ಲದೆ ಸಂರಕ್ಷಣೆ ಮಾಡಬೇಕು. ಮಹಾಮಾರಿ ಕರೋನಾ ಮತ್ತೆ ದೇಶದೆಲ್ಲಡೆ ತನ್ನ ಬಾಹುಗಳನ್ನು ಚೆಲ್ಲುತ್ತಿದ್ದು ಮುಂಜಾಗೃತಾ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿ, ದೇಶದಲ್ಲಿ ಸಮಾನ ಮತ್ತು ಭಾತೃತ್ವವನ್ನು ತಂದು ಕೊಟ್ಟ ಡಾ. ಅಂಬೇಡ್ಕರರು ಮತದಾನದ ಹಕ್ಕು ನೀಡಿದ್ದು ಅದು ಏಕ ಸಂಹಿತೆ ಪಾಲನೆಗೆ ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡ ಜೋಡಣೆ ಮಾಡಲಾಗುತ್ತಿದ್ದು ಸಾರ್ವಜನಿಕರು ಆಧಾರ ಜೋಡಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಸಂಘರ್ಷದ ಇತಿಹಾಸವನ್ನು ಹೊಂದಿರುವ ಭಾರತಕ್ಕೆ ಉನ್ನತ ಪರಂಪರೆ ಇದೆ. ಹೋರಾಟದ ಮೂಲಕವೇ ಬ್ರಿಟಿಷರಿಗೆ ಸೂಕ್ತ ಉತ್ತರವನ್ನು ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೊರಿಸಿ ಸ್ವಾತಂತ್ರ್ಯ ತನ್ನದಾಗಿಸಿಕೊಂಡು ಇಡೀ ಜಗತ್ತೆ ಭಾರತದ ಕಡೆವಾಲುವಂತೆ ಮಾಡಿ ಇಡೀ ವಿಶ್ವಕ್ಕೆ ಗುರುವಾಗಿ ದಾಪುಗಾಡುತ್ತಿದೆ. ನಮ್ಮ ರಾಷ್ಟ್ರೀಯ ನಾಯಕರುಗಳು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದು ಕೇವಲ ಮಾತುಕತೆಯಿಂದ ಅಲ್ಲ ಹೋರಾಟ, ಸತ್ಯಾಗ್ರಹ, ಕ್ರಾಂತಿಗಳ ಮೂಲಕ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಿರಂಗ ಹಾರಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿಜಿಯವರ ದೃಢ ಸಂಕಲ್ಪವಾಗಿದೆ ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರೌಡಶಿಕ್ಷಣ ಮಂಡಳಿವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿ 22-23ನೇ ಸಾಲಿನ ಎಸ್. ಎಸ್ ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ನೀಡಿ ಗೌರವಿಸಲಾಯಿತು. ಅಲ್ಲದೆ ಆಡಗುಡಿ ಪೊಲೀಸಠಾಣೆಯ ಪೇದೆ ಹಾಗೂ ತಾಲೂಕಿನ ಬೋರಗಿ ನಬೀರಸೂಲ ಪ್ರಕಾಶನದ ಸಂಚಾಲಕ ಮೌಲಾಲಿ ಆಲಗೂರ ಅವರ ಸಿಡಿ ಬಿಡುಗಡೆ ಮಾಡಲಾಯಿತು.

ಜನಮನ ಸೆಳೆದ ಕವಾಯತ್:

ಕಾರ್ಯಕ್ರಮದಲ್ಲಿ ಪ್ರೇರಣಾ ಪಬ್ಲಿಕ್ ಶಾಲೆ, ಮಂದಾರ ಪ್ರಾಥಮಿಕ ಶಾಲೆ, ಜ್ಞಾನಭಾರತಿ ವಿದ್ಯಾಮಂದಿರ, ಸರಕಾರಿ ಆದರ್ಶ ವಿದ್ಯಾಲಯ, ಗುರುಕುಲ ಆಂಗ್ಲ ಮಾಧ್ಯಮ, ಶ್ರೀ ಚೆನ್ನವೀರ ಸ್ವಾಮಿಜಿ, ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಬಾಲಕಿಯರ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಕವಾಯತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಸಿಪಿಐ ರವಿ ಉಕ್ಕುಂದ, ತಾಪಂ ಇಓ ಬಾಬು ರಾಠೋಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಬಿಇಓ ಎಚ್.ಎಂ.ಹರನಾಳ ಸ್ವಾಗತಿಸಿದರು. ದೈಹಿಕ ಶಿಕ್ಷಕ ಎಸ್.ಬಿ. ಚೌಧರಿ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!