ಮೂಡಲಗಿ: ಭೂಮಿಗೆ ರಾಸಾಯನಿಕ ಗೊಬ್ಬರ ಬಳಸಿ ಭೂಮಿ ಫಲವತ್ತತೆ ನಾಶ ಮಾಡದೆ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ಹೆಚ್ಚು ಲಾಭವನ್ನು ಪಡೆಯಬಹುದು. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ ಎಂದು ಕೃಷಿ ಅಧಿಕಾರಿಯಾದ ಎಸ್ ಬಿ ಕರಗಣ್ಣಿ ಹೇಳಿದರು.
ಅವರು ಶಿವಾಪೂರ ಗ್ರಾಮದಲ್ಲಿ ಮೂಡಲಗಿಯ ಶ್ರೀ ಶ್ರೀ ಪಾದಭೋದ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜ ವತಿಯಿಂದ ಹಮ್ಮಿಕೊಂಡ ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಭೂಮಿಯ ಹುಟ್ಟಿನಿಂದಲೂ ಕೃಷಿ ಪ್ರಾರಂಭವಾಗಿದೆ ಕೃಷಿ ಮೂಲ ಕಸಬು. ಎಷ್ಟೇ ವಿದ್ಯಾವಂತರು ಶ್ರೀಮಂತರು ಆದರೂ ಕೃಷಿ ಮೂಲ ಮರೆಯಬಾರದು. ಹಿಂದಿನ ಕಾಲದಲ್ಲಿ ಆಹಾರ ಧಾನ್ಯಗಳ ಕೊರತೆಯಿಂದಾಗಿ ಸಾಕಷ್ಟು ಜನ ಹಸಿವಿನಿಂದ ಬಳಲುತ್ತಿದ್ದರು. ಈಗ ಬೇರೆ ದೇಶಗಳಿಗೆ ಹೋಲಿಸಿದರೆ ಕೃಷಿ, ಆಹಾರದ ಉತ್ಪಾದನೆ ಹೆಚ್ಚಳವಾಗಿ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಭೂಮಿಗೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಡಿಮೆಆಗುತ್ತದೆ ಅದಕ್ಕಾಗಿ ಸಾವಯುವ ಗೊಬ್ಬರ ಬಳಕೆಯಿಂದ ಭೂಮಿಗೆ ಫಲವತ್ತತೆ ಹೆಚ್ಚಿಸಲು ನೆರವಾಗುತ್ತದೆ. ಹೈಬ್ರಿಡ್ ಬೀಜಗಳನ್ನು ಬಳಕೆ ಮಾಡದೇ ಜವಾರಿ ಬೀಜಗಳನ್ನು ಬಿತ್ತಿರಿ. ಬೆಳೆಗಳಿಗೆ ರಾಸಾಯನಿಕ ಗೊಬ್ಬರ, ಔಷಧಿ ಬಳಸದೆ ಸಾವಯುವ, ಕೊಟ್ಟಿಗೆ ಗೊಬ್ಬರ ಎರೆ ಹುಳು ಗೊಬ್ಬರ, ಸನಬು ಭೂಮಿಗೆ ಹಾಕುವದು ಶ್ರೇಷ್ಠ ಹಾಗೂ ಹಿತಕರವಾಗಿದೆ. ರಾಸಾಯನಿಕ ಗೊಬ್ಬರ ಭೂಮಿಗೆ ಹಾಗೂ ಶರೀರಕ್ಕೆ ವಿಷಕಾರಕ. ಭೂಮಿಯ ಸುತ್ತಮುತ್ತ ಗಿಡ ಮರಗಳನ್ನು ನೆಡಬೇಕು. ನೇಪಾಳದಲ್ಲಿ ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ಹೆಚ್ಚು ಲಾಭವನ್ನು ಪಡೆದು ಆಹಾರ ಧಾನ್ಯಗಳ ಸೇವಿಸಿದ ಜನರು ನೂರಾರು ಕಾಲ ಸುಖವಾಗಿ ಬಾಳುತ್ತಿದ್ದಾರೆಂದು ಹೇಳಿದರು.
ಪ್ರಾರಂಭದಲ್ಲಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಶಿವಾಜಿ ಮುಳಕೆ ಸರ್ ಮಾತನಾಡಿದರು. ಈ ಸಮಯದಲ್ಲಿ ಗ್ರಾ ಪ ಸದಸ್ಯ ಶಿವಬಸು ಹಡಪದ. ಮಾ ಗ್ರಾಂ ಪ ಸದಸ್ಯ ಸತೀಶ ಜುಂಜರವಾಡ. ಮಲಪ್ರಭಾ ಬ್ಯಾಂಕ್ ನೀ,ಮಲ್ಲಪ್ಪ ಮುದಗೌಡ್ರ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಮಾಜಿ ಸೈನಿಕ ಬಸವರಾಜ ಗಿರೆಣ್ಣವರ. ಶಿವಬಸು ಪೂಜೇರಿ. ಸಂಜೀವ ಮದರಖಂಡಿ, ರಾಜೇಂದ್ರ ಪ್ರಸಾದ್ ಆಸಂಗಿ, ಶಿವರಾಜ ಮುಗಳಖೋಡ, ಸದಾಶಿವ ಹೊಸಮನಿ. ಪ್ರಮೋದ ಅಟ್ಟಮಟ್ಟಿ, ಸೋಮೇಶ ಕುಲಿಗೋಡ,ಚ ಲೋಹಿತ್ ನುಚ್ಚುಂಡಿ, ಜಯಶ್ರೀ ಮದಿಹಳ್ಳಿ, ಆನಂದ ಹೊಸಟ್ಟಿ ಸೇರಿದಂತೆ ಶಿಭಿರಾರ್ಥಿಗಳಿದ್ದರು ಕಾರ್ಯಕ್ರಮದಲ್ಲಿ ಶೇಖರ ಮೋಪಗಾರ ಸ್ವಾಗತಿಸಿ, ಲಕ್ಷ್ಮೀ ತೋಟಗಿ ನಿರೂಪಿಸಿ, ಗಾಯತ್ರಿ ಪೂಜೇರಿ ವಂದಿಸಿದರು.