ಬೆಂಗಳೂರಿನಿಂದ ಹೊರಡುವ ಹಾಗೂ ಬೆಂಗಳೂರಿಗೆ ಆಗಮಿಸುವ ಎಲ್ಲ ವಿಮಾನಗಳ ಪ್ರಕಟಣೆ ಫಲಕ ಗಳಲ್ಲಿ ಹಾಗೂ ಗಗನ ಸಖಿಯರು ಪ್ರಯಾಣಿಕರಿಗೆ ಸೂಚನೆ ನೀಡುವಾಗ ಕನ್ನಡ ಭಾಷೆ ಬಳಸುತ್ತಿರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆ ಕೇಂದ್ರ ವಿಮಾನಯಾನ ಸಚಿವರು ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಯ ಪ್ರಮುಖರೊಂದಿಗೆ ರಾಜ್ಯಕ್ಕೆ ಬರುವ ಎಲ್ಲಾ ವಿಮಾನಗಳಲ್ಲೂ ಪ್ರಕಟಣೆ ಫಲಕದಲ್ಲಿ ಹಾಗೂ ಗಗನ ಸಖಿಯರು ಸೂಚನೆ ನೀಡುವಾಗ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ ಒತ್ತಾಯ ಮಾಡಿದ್ದರು.
ಸಿಂಗಾಪುರ್ ನಲ್ಲಿ ನಡೆಯಲಿರುವ ಕನ್ನಡ ಕಾರ್ಯಕ್ರಮ ಕ್ಕೆ ಭಾಗವಹಿಸಲು ತಾವು ನಿನ್ನೆ ವಿಮಾನದಲ್ಲಿ ತೆರಳಿದಾಗ ವಿಮಾನದ ಗಗನಸಖಿಯರು ಕನ್ನಡ ಭಾಷೆ ಬಳಸುತಿದ್ದರು. ಜೊತೆಗೆ ವಿಮಾನದ ಪ್ರಕಟಣೆ ಫಲಕದಲ್ಲಿ ಕನ್ನಡ ಭಾಷೆ ಸಹ ಬಳಕೆ ಆಗುತ್ತಿತು. ಇದು ಸಂತೋಷ ತಂದಿತು ಎಂದು ಡಾ ಮಹೇಶ್ ಜೋಶಿ ಅವರು ತಿಳಿಸಿದ್ದಾರೆ.
ಅಭಿನಂದನೆ:
ರಾಜ್ಯಕ್ಕೆ ಬರುವ ಎಲ್ಲಾ ವಿಮಾನಗಳಲ್ಲೂ ಕನ್ನಡ ಭಾಷೆ ಬಳಸುವಂತೆ ಒತ್ತಡ ಹೇರಿ ಕನ್ನಡ ಬಳಕೆಗೆ ಕಾರಣರಾಗಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ಅವರನ್ನು ಹಿರಿಯ ಸಾಹಿತಿ ಭೇರ್ಯ ರಾಮಕುಮಾರ್ ಅಭಿನಂಧಿಸಿದ್ದಾರೆ.