spot_img
spot_img

ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸಲು ಕನ್ನಡಕ ಬಳಸಿ

Must Read

spot_img
   ಸಿಂದಗಿ: ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ಉತ್ತಮ ದೃಷ್ಟಿ ಅತ್ಯಗತ್ಯ, ಆದರೂ ಅನೇಕ ಜನರು ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ. ದೃಷ್ಟಿ ದೋಷ ಸರಿಪಡಿಸುವ ಮಸೂರಗಳು ಮತ್ತು ಶಸ್ತ್ರಚಿಕಿತ್ಸೆಗಳು ಲಭ್ಯವಿರುವ ಆಯ್ಕೆಗಳಿದ್ದರೂ, ಉತ್ತಮ ಆಯ್ಕೆ ಎಂದರೆ ಅದು ನೈಸರ್ಗಿಕ ಪ್ರಕ್ರಿಯೆಗಳು ಮಾತ್ರವೇ ಸಾಧ್ಯ ಎಂದು ಶಿಕ್ಷಣ ಇಲಾಖೆಯ ಬಿ ಐ ಇ ಆರ್ ಟಿ ಅಧಿಕಾರಿ ಎ.ಎಸ್.ಯತ್ನಾಳ ಹೇಳಿದರು.
   ತಾಲೂಕಿನ ಬಂದಾಳ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಶನಿವಾರರಂದು  ಬೆಂಗಳೂರಿನ ಶಂಕರ ಕಣ್ಣಿನ ಆಸ್ವತ್ರೆ ಪರವಾಗಿ ಮಕ್ಕಳಿಗೆ ಕನ್ನಡಕ ವಿತರಣಾ ಸಮಾರಂಭದಲ್ಲಿ ಅವರು ಇಪ್ಪತ್ತೊಂದು  ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಿ ಅವರು ಮಾತನಾಡಿ, ಮಕ್ಕಳಿಗೆ ತಮ್ಮ ದೃಷ್ಟಿ ಸುಧಾರಣೆಗಾಗಿ ವ್ಯಾಪಕ ಪೋಷಕಾಂಶ-ಭರಿತ ಆಹಾರಗಳನ್ನು ತಿನ್ನುವುದು ಅತ್ಯುತ್ತಮ. ಉತ್ತಮ ಆಹಾರ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಎ, ಸಿ, ಮತ್ತು ಇ, ಸತು ಮತ್ತು ಸೆಲೆನಿಯಮ್‌ನಂತಹ ಅಗತ್ಯ ಪೋಷಕಾಂಶಗಳು, ಕ್ಯಾರೊಟಿನಾಯ್ಡ್‌ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಜೊತೆಗೆ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಅಸ್ವಸ್ಥತೆಗಳಿಂದ ರಕ್ಷಿಸುತ್ತದೆ. ಮುಖ್ಯವಾಗಿ ಸೊಪ್ಪು ಮತ್ತು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಮೂಲಕ ಹೆಚ್ಚು  ಪೋಷಕಾಂಶಗಳನ್ನು ಪಡೆಯಬಹುದು ಎಂದರು.
    ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಮಾತನಾಡಿ, ಕಣ್ಣಿನ ಆರೋಗ್ಯದ ಮೇಲೆ ಬಹಳ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಕಣ್ಣಿನ ಪೊರೆ,  ಕಣ್ಣು  ಉರಿಯೂತವನ್ನು ಉಂಟು ಮಾಡಬಹುದು ಆದ್ದರಿಂದ ಬೆಂಗಳೂರಿನ ಶಂಕರ ಕಣ್ಣಿನ ಆಸ್ವತ್ರೆಯವರು ಸುಂದರ ಗಟ್ಟಿಯಾದ ಕನ್ನಡಕ ನೀಡಿದ್ದಾರೆ ಅವರಿಗೆ ಅಭಿನಂದನೆಗಳು ತಿಳಿಸಿದರು.
   ಶಂಕರ ಕಣ್ಣಿನ ಆಸ್ವತ್ರೆ ಬೆಂಗಳೂರಿನ ಅಭಿಜಿತ್  ಎನ್ ಎಚ್ ಮಾತನಾಡಿ ಬಂದಾಳ ಗ್ರಾಮದ ಶಾಲೆಯಲ್ಲಿ ಮಕ್ಕಳ ಕಣ್ಣುಗಳು ಪರಿಶೀಲನೆ ಮಾಡಿದ್ದಾಗ ನಮ್ಮಗೆ 21 ಮಕ್ಕಳಿಗೆ ಸರಿಯಾದ ಅಕ್ಷರ ಗುರುತಿಸಲು ಕಷ್ಟ ಪಡುವದು  ಕಂಡು ಬಂತು ಅವರಿಗೆ ಗುಣ ಮಟ್ಟದ ಕನ್ನಡಕ ನೀಡಲಾಗಿದೆ ಕನ್ನಡಕ ಸರಿಯಾಗಿ ಆರು ತಿಂಗಳವರಿಗೆ ಬಳಸಿ ಕಣ್ಣ ವೈದ್ಯರ ಸಲಹೆ ಮೇರಗೆ ಕನ್ನಡಕ ಬಿಡಬೇಕು ಎಂದರು.
    ಶಾಲಾ ಮುಖ್ಯಗುರು ನಿಂಗನಗೌಡ ಪಾಟೀಲ, ಶಿಕ್ಷಕರಾದ ಚಂದ್ರಶೇಖರ ಬುಯ್ಯಾರ,  ಸಿದ್ದಲಿಂಗಪ್ಪ ಪೊದ್ದಾರ, ಪುರುಷೋತಮ ಕುಲಕರ್ಣಿ, ಕೃಷ್ಣರಾವ್ ಕುಲಕರ್ಣಿ,  ಈಶ್ವರಿ ನಾಗಠಾಣ, ಮಲ್ಲಮ್ಮ ಹಿಪ್ಪರಗಿ, ಸಿದ್ದು ತಳವಾರ,  ಸೋಮಯ್ಯ ಬಿಜಾಪೂರ, ಅರ್ಚನ ಬಿರಗೊಂಡ ಸೇರಿದಂತೆ ಅಪಾರ ವಿದ್ಯಾರ್ಥಿಗಳು ಇದ್ದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group