ಸಹಕಾರ ಸಂಘದ ಸಾಲವನ್ನು ಸದುಪಯೋಗಪಡಿಸಿಕೊಳ್ಳಿ

Must Read

ಮೂಡಲಗಿ –ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೃಷಿ ಯಂತ್ರಗಳಿಗೆ ನಮ್ಮ ಸಂಘದಿಂದ ಸಾಲ ನೀಡಿ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಕೃಷಿಯಂತ್ರಗಳನ್ನು ಸರಿಯಾಗಿ ಉಪಯೋಗಿಸಿ ಸಕಾಲದಲ್ಲಿ ಸಾಲ‌ ಮರು ಪಾವತಿ ಮಾಡಿದರೆ ಬೇರೊಬ್ಬ ರೈತರಿಗೆ ಕೃಷಿ ಉಪಕರಣಗಳನ್ನು ಖರೀದಿಸಲು ಸಾಲ ನೀಡಲು ಹೆಚ್ಚು ಆಸಕ್ತಿ ಮೂಡುತ್ತದೆ ಎಂದು ಮೂಡಲಗಿ ಮಂಜುನಾಥ ವಿವಿಧ ಉದ್ದೇಶಗಳ ಸಹಕಾರ ಸಂಘದ ಅಧ್ಯಕ್ಷ ಸಂಗಪ್ಪ ನಿಡಗುಂದಿ ಹೇಳಿದರು.

ಸಂಘದಿಂದ ಹಾರೂಗೇರಿ ಪಟ್ಟಣದ ಶಿವು ಗೋಕಾಕ ಎಂಬುವರಿಗೆ 26 ಲಕ್ಷದ ಕೃಷಿಯಂತ್ರ ಖರೀದಿಸಲು ಸಾಲ ನೀಡಲಾಗಿತ್ತು. ವಾಹನವನ್ನು ರೈತರಿಗೆ ವಿತರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರುದ್ರಪ್ಪ ಬಳಿಗಾರ, ನಿರ್ದೇಶಕರಾದ ಶಿವಬಸು ಕುಡಚಿ, ಶಿವಬಸು ಸುಣದೋಳಿ, ಶಿವಬೋಧ ಉದಗಟ್ಟಿ, ಪಾಂಡು ಮಹೇಂದ್ರಕರ,ಶೆಲಾಜಿ ನಾರಾಯಣಕರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕುದರಿ ಹಾಗೂ ಸಿಬ್ಬಂದಿ ವರ್ಗ ಇದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group