spot_img
spot_img

Uttarani Plant Benefits In Kannada- ಉತ್ತರಾಣಿ ಸೊಪ್ಪು ಪ್ರಯೋಜನಗಳು

Must Read

- Advertisement -

Uttarani Plant Benefits In Kannada- ಉತ್ತರಾಣಿ ಸೊಪ್ಪು ಪ್ರಯೋಜನಗಳು

ಉತ್ತರಾಣಿ ಗಿಡದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ ಮತ್ತು ಅನಾದಿ ಕಾಲದಲ್ಲೂ ಕೂಡ ನಮ್ಮ ಪೂರ್ವಿಕರು ಹೆಚ್ಚಾಗಿ ಬಳಸುತ್ತಿದ್ದರು. ಇದನ್ನು ಖರಮಂಜರಿ, ಉತ್ತರಾಣಿ, ಉತ್ರಾಣಿ, ಬಿಳಿ ಉತ್ತರಾಣಿ, ಕೆಂಪು ಉತ್ತರಾಣಿ, ಕಡ್ಡಿಗೊಡ, ಲತ್ ಜೀರಾ, ಅಘತ, ನಾರವಿ ಅಪಮಾರ್ಗಮು ಎಂದು ನಾನಾ ಹೆಸರುಗಳಲ್ಲಿ ಇದನ್ನು ಕರೆಯುತ್ತಾರೆ. ಇದನ್ನು ನಮ್ಮ ಪೂರ್ವಿಕರು ವ್ಯಾಧಿ ನಿವಾರಣೆಗಾಗಿ ಅನಾದಿ ಕಾಲದಲ್ಲಿ ತುಂಬಾ ಬಳಸುತ್ತಿದ್ದರು.ಬಿಳಿ ಉತ್ತರಾಣಿಯಲ್ಲಿ ಉಷ್ಣವೀರ್ಯ, ಪಾಚಕ, ಕಫ ನಿವಾರಣೆ ಗುಣಗಳು ಇರುವುದರಿಂದ ಇದನ್ನು ವಮನಕಾರಿ, ಮೂಲವ್ಯಾದಿ, ಉದರರೋಗ, ನವೆ, ದದ್ದು, ಗಂತಿ, ವ್ರಣ ಸಮಸ್ಯೆಗಳಿಗೆ ಉಪಯೋಗಿಸುತ್ತಾರೆ. ಹಾಗೆ ಇದರಿಂದ ರಕ್ತವು ಶುದ್ಧೀಕರಣವಾಗುತ್ತದೆ ಮತ್ತು ಕಿವುಡುತನ ಬಾರದಂತೆ ಸಹಾಯ ಮಾಡುತ್ತದೆ.

ಕೆಂಪು ಉತ್ತರಾಣಿಯಲ್ಲಿ ಕಫ ವಾತನಾಶಕ ಗುಣಗಳಿರುವುದರಿಂದ ಇದು ಹುಣ್ಣುಗಳನ್ನು ಕಡಿಮೆ ಮಾಡಿ ಹೃದಯದ ತೊಂದರೆಗಳನ್ನು ದೂರವಿಟ್ಟು ಹೊಟ್ಟೆ ಉಬ್ಬರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗೆ ಇದು ವಿಷವನ್ನು ಕೂಡ ಕಡಿಮೆ ಮಾಡುತ್ತದೆ. ಕೆಂಪು ಉತ್ತರಾಣಿ ಎಲೆಗಳನ್ನು ಚೆನ್ನಾಗಿ ಅರೆದು ಅದನ್ನು 2 ಅಥವಾ 3 ಹನಿಗಳನ್ನು ಮೂಗಿನೊಳಗೆ ಹಾಕಿಕೊಂಡರೆ ತಲೆನೋವು ತಲೆಯಲ್ಲಿ ಮರಮರ ಶಬ್ದ ಕಡಿಮೆಯಾಗುತ್ತದೆ. ಹಾಗೆ ಇದನ್ನು ನಿಮ್ಮ ತಲೆಯ ಕೂದಲಿಗೆ ಲೇಪಿಸಿಕೊಂಡರೆ ತಲೆಕೂದಲಿನ ಹುಣ್ಣು, ಗಾಯ, ನವೆ, ಸಿಬ್ಬು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

You May Like: Raisins Benefits In Kannada- ಒಣದ್ರಾಕ್ಷಿ ಪ್ರಯೋಜನಗಳು

- Advertisement -
Uttarani Benefits in kannada
Uttarani Benefits in kannada

Uttarani Root Benefits In Kannada- ಉತ್ತರಾಣಿ ಬೇರುಗಳ ಪ್ರಯೋಜನಗಳು

ಉತ್ತರಾಣಿ ಗಿಡದ ಬೇರನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಗಂಧ ತೇಯ್ದು ಸ್ತನಗಳಿಗೆ ಹಚ್ಚಿಕೊಂಡರೆ ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ ಮತ್ತು ಮಗುವಿನ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಹಾಗೆ ಈ ಗಿಡದಲ್ಲಿ ವಿಷನಾಶಕ ಗುಣಗಳಿರುವುದರಿಂದ ಇದರ ಎಲೆಗಳ ರಸವನ್ನು ಚೆನ್ನಾಗಿ ಅರೆದು ಎಲ್ಲಿ ಝರಿ ಜೇನು ಕೆಂಜೇಳ ಕಚ್ಚಿದರೆ ಅಲ್ಲಿ ಹಚ್ಚಿಕೊಂಡರೆ ಬೇಗ ಗುಣಮುಖವಾಗುತ್ತದೆ.
ಉತ್ತರಾಣಿ ಬೇರಿನಿಂದ ಹಲ್ಲುಗಳನ್ನು ಚೆನ್ನಾಗಿ ಉಜ್ಜಿದರೆ ಹಲ್ಲುಗಳ ತೊಂದರೆಯು ಇರುವುದಿಲ್ಲ. ಇದರ ಜೊತೆಗೆ ಹಲ್ಲುಗಳು ಬಿಳಿಯಾಗಿ ಶುಭ್ರವಾಗಿ ಮತ್ತು ಗಟ್ಟಿಯಾಗುತ್ತದೆ. ಹಾಗೆ ಬಾಯಿಯಿಂದ ಬರುವ ದುರ್ವಾಸನೆಯನ್ನು ಸಹ ಕಡಿಮೆ ಮಾಡುತ್ತದೆ. ಇದರ ಕಾರಣಕ್ಕಾಗಿಯೇ ನಮ್ಮ ಪೂರ್ವಿಕರು ಅನಾದಿಕಾಲದಲ್ಲಿ ಹಲ್ಲುಗಳನ್ನು ಉಜ್ಜುವುದಕ್ಕೆ ಉತ್ತರಾಣಿ ಬೇರನ್ನು ಉಪಯೋಗಿಸುತ್ತಿದ್ದರು.

You May Like: Benefits Of Carrot In Kannada | ಕ್ಯಾರೆಟ್ ತಿಂದರೆ ದೇಹಕ್ಕೆ ಆಗುವ ಲಾಭಗಳು

Uttarani Leaves Benefits In Kannada- ಉತ್ತರಾಣಿ ಎಲೆಗಳ ಪ್ರಯೋಜನಗಳು

ಉತ್ತರಾಣಿ ಗಿಡದ ಎಲೆಗಳಿಗೆ ಸ್ವಲ್ಪ ಅರಿಶಿನ ಕಲ್ಲುಪ್ಪನ್ನು ಹಾಕಿ ಚೆನ್ನಾಗಿ ಅರೆದು ಎಲ್ಲಿ ಗಾಯ ಹುಣ್ಣು ಆಗಿರುತ್ತದೆ ಅಲ್ಲಿ ಹಚ್ಚಿಕೊಂಡರೆ ಬೇಗ ಗುಣಮುಖ ವಾಗುತ್ತದೆ ಮತ್ತು ಗಾಯದಿಂದ ಬರುವ ರಕ್ತಸ್ರಾವವನ್ನು ಕೂಡ ಕಡಿಮೆ ಮಾಡುತ್ತದೆ. ಉತ್ತರಾಣಿ ಎಲೆಗಳನ್ನು ಚೆನ್ನಾಗಿ ಅರೆದು ಅದಕ್ಕೆ ಸ್ವಲ್ಪ ಅರಿಶಿನ 1 ಚಮಚ ಶ್ರೀಗಂಧದ ಚೂರ್ಣ  ಮತ್ತು 2 ಚಮಚ ಮೊಸರನ್ನು ಹಾಕಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಕಡಲೆ ಹಿಟ್ಟಿನಿಂದ ಮುಖವನ್ನು ತೊಳೆದುಕೊಂಡರೆ ನಿಮ್ಮ ಮುಖವು ಕಾಂತಿಯುತವಾಗಿ ಮೃದುವಾಗಿ ಆಗಿ ಮೊಡವೆಗಳು ಗುಳ್ಳೆಗಳು ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.

- Advertisement -

You May Like: Benefits Of Sugarcane In Kannada- ಕಬ್ಬಿನ ಜ್ಯೂಸ್ ಪ್ರಯೋಜನಗಳು

ಆಸ್ತಮಾ ಮತ್ತು ಕೆಮ್ಮಿನಿಂದ ನರಳುತ್ತಿದ್ದರೆ, ಉತ್ತರಾಣಿ ಸಸ್ಯದ ಒಣಗಿದ ಎಲೆಗಳನ್ನು ಬೆಂಕಿಗೆ ಹಾಕಿ ಮತ್ತು ಕೆಮ್ಮು ಮತ್ತು ಆಯಾಸವನ್ನು ಕಡಿಮೆ ಮಾಡಲು ಹೊಗೆಯನ್ನು ಉಸಿರಾಡಿ. ಉತ್ತರಾಣಿಯ ಎಲೆಗಳನ್ನು ಸುಟ್ಟು ಸುಟ್ಟು ಕ್ಯಾಸ್ಟರ್ ಆಯಿಲ್ ನೊಂದಿಗೆ ಬೆರೆಸಿ ಮುಲಾಮುಗಳಾಗಿ ಅನ್ವಯಿಸಲಾಗುತ್ತದೆ ಅಲ್ಲಿ ತುರಿಕೆ ಮತ್ತು ಎಸ್ಜಿಮಾ ಇರುತ್ತದೆ ಮತ್ತು ಅವು ಕ್ರಮೇಣ ಕುಗ್ಗುತ್ತವೆ. ಕಣಜಗಳು, ಜೇನುನೊಣಗಳು ಮತ್ತು ಚೇಳುಗಳು ಎಲೆಗಳನ್ನು ಕಚ್ಚಿದಾಗ ನೋವು ಮತ್ತು ತುರಿಕೆ ಕಡಿಮೆಯಾಗುತ್ತದೆ.

Conclusion:

ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

 

 

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group