ಹುಟ್ಟು ಹಬ್ಬದ ನಿಮಿತ್ತ ಲಸಿಕಾ ಅಭಿಯಾನ

Must Read

ಬೀದರ – ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರ ೫೨ ನೇ ಹುಟ್ಟು ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಔರಾದ್ ನ ಬೊಂತಿ ತಾಂಡಾದ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ನಾಯಕರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊರೋನಾ ಲಸಿಕೆ ಹಾಕಿಕೊಳ್ಳುವಂತೆ ಎಲ್ಲರಿಗೂ ತಿಳಿಸಲಾಯಿತು. ಜೊತೆಗೆ ಮನೆಗೊಂದು ಸಸಿ ನೆಡುವಂತೆಯೂ ತಿಳಿಸಲಾಯಿತು.

ಅಪಾರ ಪ್ರಮಾಣದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೊರೋನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಕಾರ್ಯಕರ್ತರು ಸಾಮಾಜಿಕ ಅಂತರವಿಲ್ಲದೆ ಸಚಿವರನ್ನು ಮುತ್ತಿಕೊಂಡೇ ಶುಭಾಶಯ ಹೇಳಿದರು.

ಮೊದಲೇ ಮಹಾರಾಷ್ಟ್ರ ದಿಂದ ಕೊರೋನಾದ ಆತಂಕವಿದ್ದರೂ ಕೂಡ ಯಾವುದಕ್ಕೂ ಕ್ಯಾರೆ ಅನ್ನದ ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಪಾಲಿಸದೆ ಸಮಾರಂಭ ಆಚರಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group