spot_img
spot_img

ಕೆ.ಎಲ್.ಇ. ಪಾಲಿಟೆಕ್ನಿಕ್‍ನಲ್ಲಿ ಲಸಿಕಾ ಅಭಿಯಾನ ಕೋವಿಡ್ ಲಸಿಕೆ ಕೊರೊನಾಗೆ ಬ್ರಹ್ಮಾಸ್ತ್ರ: ಡಾ.ಮುದಕನಗೌಡರ

Must Read

- Advertisement -

ಬೈಲಹೊಂಗಲ – ಪಟ್ಟಣದ ಕೆ. ಎಲ್. ಇ. ಪಾಲಿಟೆಕ್ನಿಕ (ಡಿಪ್ಲೋಮಾ) ಮಹಾವಿದ್ಯಾಲಯದಲ್ಲಿ ಆರೋಗ್ಯ ಇಲಾಖೆ ಬೈಲಹೊಂಗಲ ಹಾಗೂ ಕೆ. ಎಲ್. ಇ. ಪಾಲಿಟೆಕ್ನಿಕ (ಡಿಪ್ಲೋಮಾ) ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕೋವಿಡ್-19 ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಮಂಜುನಾಥ ಮುದಕನಗೌಡರ ಮಾತನಾಡಿ ಕೊರೋಣಾ ವೈರಾಣು ದಿನದಿಂದ ದಿನಕ್ಕೆ ರೂಪಾಂತರಗೊಂಡು ಎಲ್ಲರಿಗೂ ಭಯವನ್ನು ಹುಟ್ಟಿಸುತ್ತಿದೆ ಆದಕಾರಣ ಈ ಲಸಿಕೆಯು ಕೊರೋಣಾ ತಡೆಗಟ್ಟುವಲ್ಲಿ ಬ್ರಹ್ಮಾಸ್ತ್ರವಾಗಿದ್ದು ಮಹತ್ತರವಾದ ಪಾತ್ರಹೊಂದಿದೆ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು ಎಲ್ಲ ವಿದ್ಯಾರ್ಥಿಗಳು ಕೋವಿಡ್-19 ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕೆಂದರು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ|| ಗುರುನಾಥ ವಾಯ್. ಹೂಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ, ಉತ್ತಮ ಆರೋಗ್ಯ ಸ್ವಸ್ಥ ಮನಸ್ಸು ಹೊಂದಿದ್ದರೆ ಕೊರೋನಾವನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.

- Advertisement -

ಡಾ|| ರಾಯಣ್ಣ ನಾಯ್ಕರ ಅವರು ಮಾತನಾಡಿ ಎಲ್ಲರು ಲಸಿಕೆಯನ್ನು ಪಡೆದುಕೊಂಡು ಕೋವಿಡ-19 ಎಸ್.ಓ.ಪಿ ಗಳನ್ನು ಅನುಸರಿಸಬೇಕು, ಅಷ್ಟೇಯಲ್ಲದೆ ಚಿಕ್ಕಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ ಅನಾರೋಗ್ಯ ಬಾರದಂತೆ ನೋಡಿಕೊಂಡು 3ನೇ ಅಲೆಯಿಂದ ಅವರನ್ನು ರಕ್ಷಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೋ. ಶ್ರೀಧರ ಬ. ನಿರಡಿ ವಹಿಸಿಕೊಂಡು ಮಾತನಾಡಿ, ಎಲ್ಲರೂ ಕೊರೋನಾದ ಬಗ್ಗೆ ಭಯವನ್ನು ಪಡದೇ ಅದರ ಬಗ್ಗೆ ಜಾಗೃತರಾಗಿ ವಿದ್ಯಾರ್ಥಿ ಸಮೂಹ ಸಾರ್ವಜನಿಕರಿಗೆ ಮನವರಿಕೆ ಮಾಡಿಸಬೇಕೆಂದರು, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜೆಶನ್ ಮುಖಾಂತರ ಕರೋನಾ ತಡೆಗಟ್ಟುವಲ್ಲಿ ಕಾರ್ಯನಿರತರಾಗಬೇಕೆಂದರು, ಹಾಗೂ ಕೆ. ಎಲ್. ಇ. ಪಾಲಿಟೆಕ್ನಿಕ (ಡಿಪ್ಲೋಮಾ) ಮಹಾವಿದ್ಯಾಲಯದ ಸಿಬ್ಬಂದಿಯು ಶೇ.100 ರಷ್ಟು ವ್ಯಾಕ್ಸಿನ್ ಪಡೆದಿದ್ದು ಮುಂದಿನ ದಿನಮಾನದಲ್ಲಿ ಸರ್ಕಾರದ ನಿಯಮದಂತೆ ಭೌತಿಕ ಆಫ್‍ಲೈನ್ ತರಗತಿಗಳನ್ನು ನಡೆಸಲು ಸನ್ನದ್ದವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಡಾ|| ಕಿರಣ ಮೂಡಲಗಿ, ಡಾ|| ರಾಜಶೇಖರ ಸುಳೆಭಾವಿ, ಡಾ|| ಸೋಮಲಿಂಗ ಹಾಗೂ ಡಾ|| ಕುಮಾರ ಮತ್ತು ನಾಗರಾಜ ಖಾಡೆ ಭಾಗವಹಿಸಿದ್ದರು.

- Advertisement -

ಕಾರ್ಯಕ್ರಮವನ್ನು ಎಚ್. ಆಯ್. ಸಂಕಣ್ಣವರ ನಿರೂಪಿಸಿದರು, ಮೃತ್ಯುಂಜಯ ಸವದತ್ತಿಮಠ ವಂದಿಸಿದರು, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಶ್ರೀಧರ ಕಳಸಣ್ಣವರ, ಸಂತೋಷ ಶರನಪ್ಪನವರ, ವೀಣಾ ಪಾಟೀಲ, ರವಿ ದೊಡ್ಡಹುಬ್ಬಳ್ಳಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೆ. ಎಲ್. ಇ. ಪಾಲಿಟೆಕ್ನಿಕ (ಡಿಪ್ಲೋಮಾ) ಮತ್ತು ಐ.ಟಿ.ಐ ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಗೂ ಪಾಲಕರು ಕೋವಿಡ್-19 ಲಸಿಕೆಯನ್ನು ಪಡೆದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group